ರೈತರ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ಭೇಟಿ

| Published : Sep 19 2024, 01:56 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ರೈತಸಂಘದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಳೆ, ಗಾಳಿಯಿಂದ ನಷ್ಟವಾದ ಬೆಳೆಗೆ ಪರಿಹಾರ ಹಾಗೂ ವಿಮೆ ಹಣ ಜಮಾ ಆಗುವ ತನಕ ಅಹೋರಾತ್ರಿ ಧರಣಿ. ಈ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ನೀಡಿದರು.

ರೈತರ ಬೇಡಿಕೆ ಸಂಬಂಧ ಸ್ಪಷ್ಟ ನಿಲುವು ಪ್ರಕಟಿಸಿದ ಹಿನ್ನೆಲೆ ಅಹೋರಾತ್ರಿ ಧರಣಿ ಎಂದಿನಂತೆ ಮುಂದುವರಿಸಲಾಗುವುದು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು. ಕಳೆದ ಆರು ದಿನಗಳಿಂದ ಪಟ್ಟಣದ ಪ್ರಜಾಸೌಧ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ನೀಡಿದರು. ಆದರೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಕರೆಯಿಸಿ ಸ್ಪಷ್ಟನೆ ಕೊಡಿಸುವ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ಬೆಳೆ ವಿಮೆ ಬಗ್ಗೆ ನನಗೆ ಮಾಹಿತಿ ಇಲ್ಲ, ಅಧಿಕಾರಿಗಳನ್ನು ಕೇಳಿ ಹೇಳ್ತೀನಿ ಎಂದು ಶಾಸಕರು ಹೇಳಿದರು. ಇದು ಸಮರ್ಪಕ ಉತ್ತರವಲ್ಲ ಎಂದು ಪ್ರತಿಭಟನಾಕಾರರು ಅಹೋರಾತ್ರಿ ಪ್ರತಿಭಟನೆ ಮುಂದುರಿಸಲು ನಿರ್ಧರಿಸಲಾಗಿದೆ ಎಂದರು. ಗಾಳಿ, ಮಳೆಗೆ ನಾಶವಾದ ಬಾಳೆಗೆ ಪರಿಹಾರ ಹಾಗೂ ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಆಗುವ ತನಕ ರೈತಸಂಘದ ಅಹೋರಾತ್ರಿ ಧರಣಿ ನಿಲ್ಲುವುದಿಲ್ಲ ಎಂದು ಮಹದೇವಪ್ಪ ತಿಳಿಸಿದರು.

ಶಾಸಕರೊಂದಿಗೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಆರ್.ಬಿ, ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಸದಸ್ಯ ಮೊಹಮದ್‌ ಇಲಿಯಾಸ್‌, ರೈತಸಂಘದ ದಿಲೀಪ್‌ ಹಂಗಳ, ಮಾಧು ಸೇರಿದಂತೆ ರೈತಸಂಘದ ಕಾರ್ಯಕರ್ತರು ಇದ್ದರು.