ತೆಂಕಪೇಟೆ, ಚಿಟ್ಪಾಡಿ, ಕಿನ್ನಿಮೂಲ್ಕಿ: ಶಾಸಕ ಯಶಪಾಲ್ ಮತಪ್ರಚಾರ

| Published : Apr 03 2024, 01:38 AM IST

ತೆಂಕಪೇಟೆ, ಚಿಟ್ಪಾಡಿ, ಕಿನ್ನಿಮೂಲ್ಕಿ: ಶಾಸಕ ಯಶಪಾಲ್ ಮತಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿಯಾಗಿ ಆಯೋಜಿಸಿದ್ದ ತೆಂಕಪೇಟೆ ಹಾಗೂ ಚಿಟ್ಪಾಡಿ ವಾರ್ಡಿನ ಕಾರ್ಯಕರ್ತರ ಸಭೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭಾಗವಹಿಸಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪದೊಂದಿಗೆ ಪಕ್ಷದ ಸಮರ್ಥ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭಾ ಸದಸ್ಯರಾದ ಮಾನಸ ಸಿ. ಪೈ, ಕೃಷ್ಣ ರಾವ್ ಕೊಡಂಚ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಪ್ರಧಾನ ಕಾರ್ಯದರ್ಶಿ ರೇಷ್ಮಾ ಶೆಟ್ಟಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತ ಶೆಟ್ಟಿ, ಮೋರ್ಚಾಗಳ ಅಧ್ಯಕ್ಷರಾದ ಅಶ್ವಿನಿ ಶೆಟ್ಟಿ, ಶ್ರೀವತ್ಸ, ಡೆನೀಸ್ ಪೆರಂಪಳ್ಳಿ, ವಾರ್ಡಿನ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಭಾನುವಾರ ಸುಬ್ರಮಣ್ಯ ನಗರ ಹಾಗೂ ಕೊಡಂಕೂರು ವಾರ್ಡ್ ಕಾರ್ಯಕರ್ತರ ಸಭೆಯಲ್ಲಿ ಬೇರೆ ಪಕ್ಷದಿಂದ ಬಂದ ಕಾರ್ಯಕರ್ತರನ್ನು ಬಿಜೆಪಿಗೆ ಬರ ಮಾಡಿಕೊಳ್ಳಲಾಯಿತು.

ಈ ಸಂದರ್ಭ ಶಾಸಕರೊಂದಿಗೆ ಸುಬ್ರಮಣ್ಯ ವಾರ್ಡ್ ನಗರಸಭಾ ಸದಸ್ಯರಾದ ಜಯಂತಿ ಪೂಜಾರಿ, ಕೊಡಂಕೂರು ವಾರ್ಡ್ ನಗರಸಭಾ ಸದಸ್ಯರಾದ ಸಂಪಾವತಿ ಮತ್ತು ವಾರ್ಡಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

----------------------------------

ಗೆಲುವು ಸಾಧ್ಯವಿಲ್ಲವೆಂದು ಸಿದ್ದು ಅನುಕಂಪ ಹುಟ್ಟಿಸುವ ಮಾತು: ನಡಹಳ್ಳಿ

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ, ಈ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯಗೆ ಗೊತ್ತಾಗಿದೆ, ಹಾಗಾಗಿ ಜನರಲ್ಲಿ ಅನುಕಂಪ ಹುಟ್ಟಿಸುವ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ತಮ್ಮ ಸ್ವಕ್ಷೇತ್ರ ವರುಣದಲ್ಲಿಯೇ ಸೋಲುವ ಭೀತಿಯಲ್ಲಿದ್ದಾರೆ, ಅದಕ್ಕೆ ರಾತ್ರಿ ಅಲ್ಲಿಯೇ ರೆಸಾರ್ಟ್ ನಲ್ಲಿ ಕುಳಿತು ಕಾರ್ಯಾಚರಣೆ ಮಾಡುತ್ತಿದ್ದಾರೆ, ಚಾಮರಾಜನಗರದಲ್ಲಾದರೂ ಗೆಲ್ಲಬೇಕು ಅಂತ ವರುಣದಲ್ಲಿ ಠಿಕಾಣಿ ಹೂಡಿದ್ದಾರೆ, ಆದರೆ ಮೈಸೂರು, ಚಾಮರಾಜನಗರ ಯಾವ ಕಾರಣಕ್ಕೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದವರು ಹೇಳಿದರು.

ಲೋಕಸಭಾ ಚುನಾವಣೆ ಮುಗಿಲಿ, ಡಿಕೆಶಿ- ಸಿದ್ದರಾಮಯ್ಯ ನಡುವೆ ಕುರ್ಚಿ ತಿಕ್ಕಾಟ ದೊಡ್ಡದಾಗುತ್ತದೆ, ಚುನಾವಣೆ ನಂತರ ಕಾಂಗ್ರೆಸ್ ಹೋಳಾಗುತ್ತದೆ, ಸಿದ್ದರಾಮಯ್ಯ ಅಧಿಕಾರದಿಂದ ಇಳಿತಾರೆ ಎಂದು ಭವಿಷ್ಯ ನುಡಿದ ನಡಹಳ್ಳಿ ಅವರು, ಲೋಕಸಭೆಯಲ್ಲಿ ಸೋತರೆ ಸಿದ್ದರಾಮಯ್ಯ ಕುರ್ಚಿ ಬಿಡಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕ ಬಾಲಕೃಷ್ಣ ಗ್ಯಾರೆಂಟಿ ಯೋಜನೆ ಮುಂದುವರಿಸಲು ಕಾಂಗ್ರೆಸ್ ಗೆ ಮತ ಹಾಕಿ ಎಂದು ಮತದಾರರಿಗೆ ಧಮ್ಕಿ ಹಾಕಿದ್ದಾರೆ, ಒಟ್ಟಾರೇ ರಾಜ್ಯದಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.