ಸಾರಾಂಶ
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಸೋಲಿನ ಭಯದಿಂದ ಹತಾಶೆಗೊಂಡು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕ ರಾಜು ಕಾಗೆ ತಿರುಗೇಟು ನೀಡಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಸೋಲಿನ ಭಯದಿಂದ ಹತಾಶೆಗೊಂಡು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕ ರಾಜು ಕಾಗೆ ತಿರುಗೇಟು ನೀಡಿದರು.ತಾಲೂಕಿನ ಐನಾಪುರ ಪಟ್ಟಣದಲ್ಲಿ ಸೋಮವಾರ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದೆ. ಹೀಗಾಗಿ, ರಾಜ್ಯ ಸರ್ಕಾರ 5 ವರ್ಷಗಳನ್ನು ಆಡಳಿತವನ್ನು ಪೂರೈಸಲಿದೆ. ಅಲ್ಲದೇ, ಮುಂದಿನ 5 ವರ್ಷ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ಭವಿಷ್ಯ ನುಡಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್, ಬೇಳೆಕಾಳು ಸೇರಿದಂತೆ ಎಲ್ಲ ವಸ್ತುಗಳು ಬೆಲೆ ಗಗನಕ್ಕೇರಿವೆ. ಇವೇನಾ ಪ್ರಧಾನಿ ನರೇಂದ್ರ ಮೋದಿಯವರ ಅಚ್ಛೆ ದಿನ ಎಂದು ಪ್ರಶ್ನಿಸಿದರು.ಪಟ್ಟಣ ಪಂಚಾಯತಿ ಸದಸ್ಯರಾದ ಅರುಣ ಗಾಣಿಗೇರ, ಪ್ರವೀಣ ಗಾಣಿಗೇರ, ಸಂಜಯ ಭಿರಡಿ, ಸಂಜಯ ಕುಚನೂರೆ, ರಾಜುಗೌಡ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದುಕೊಂಡಿದ್ದಾರೆ. ಮೇ.7 ರಂದು ಜರುಗಲಿರುವ ಲೋಕಸಭೆ ಚುನಸವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವ ನಿಚ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಸುಭಾಷ ಪಾಟೀಲ, ಚಮನರಾವ್ ಪಾಟೀಲ, ರಾಜುಗೌಡ ಪಾಟೀಲ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸುರೇಶ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಬಿರಡಿ, ಪ್ರಕಾಶ ಚಿನಗಿ, ಡಾ.ಅರವಿಂದರಾವ್ ಕಾರ್ಚಿ, ಗುರುರಾಜ ಮಡಿವಾಳರ, ಉಮಜಿ ನಿಡೋಣಿ, ರಾಮಾ ಮಾನೆ, ವಿಶ್ವನಾಥ ನಾಮದಾರ, ಸುರೇಶ ಅಡಿಸೇರಿ, ಮಹಿಭೂಮ ನನದಿ, ಧೋಂಡಿ ಹರಳೆ, ವಸಂತ ಮಾದರ, ಸಹದೇವ ನಾಯಿಕ ಸೇರಿದಂತೆ ಅನೇಕರು ಇದ್ದರು.ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿಯವರು ಪುಸ್ತಕವೊಂದನ್ನು ಬರೆದಿದ್ದಾರೆ. ಇನ್ನೊಂದು ಬಾರಿ ನರೇಂದ್ರ ಮೋದಿಯವರ ಕೈಗೆ ಅಧಿಕಾರ ಕೊಟ್ಟರೇ ಈ ದೇಶ ಭೀಕ್ಷೆ ಬೇಡಬೇಕಾಗುತ್ತದೆಂದು ಅವರೇ ಪುಸ್ತಕವೊಂದನ್ನು ಬರೆದಿದ್ದಾರೆ. ಇಂಥ ಸರ್ಕಾರ ನಮಗೆ ಬೇಕಾ?. ಲೋಕಸಭೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.-ರಾಜು ಕಾಗೆ,
ಶಾಸಕರು.