ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನ ಪರಿಷತ್ ಸದಸ್ಯ ಬಿ.ಎಸ್.ಶಿವಣ್ಣರ ಹುಟ್ಟುಹಬ್ಬವನ್ನು ಅಭಿಮಾನಿಗಳು ಪಟ್ಟಣದಲ್ಲಿ ಸೋಮವಾರ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್. ಆರ್.ಅಶ್ವಿನ್, ನಿರ್ದೇಶಕ ಕುಮಾರ ಹೆಗ್ಗಡೆ ನೇತೃತ್ವದಲ್ಲಿ ಅಭಿಮಾನಿಗಳು ದೇಗುಲದಲ್ಲಿ ಶಿವಣ್ಣ ಅವರ ಹೆಸರಿನಲ್ಲಿ ಸಂಕಲ್ಪ ಸೇವೆ, ಅರ್ಚನೆ ಮಾಡಿಸಿ ಶಿವಣ್ಣರಿಗೆ ಭಗವಂತನು ಉತ್ತಮ ಆರೋಗ್ಯ ದೊಂದಿಗೆ ದೀರ್ಘಾಯಸ್ಸುನೀಡಲಿ ಎಂದು ಪ್ರಾರ್ಥಿಸಿದರು.

ಮನ್ಮುಲ್ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ ಕೈಯಲ್ಲಿ ಒಂದು ಕಾಲು ರುಪಾಯಿ ನಾಣ್ಯ ಹಿಡಿದು ದೇಗುಲದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವುದರೊಂದಿಗೆ ಶಿವಣ್ಣ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಹರಕೆ ಕಟ್ಟಿ ಕೊಂಡು ಪ್ರಾರ್ಥಿಸಿದರು.

ನಂತರ ಶಿವಣ್ಣ ಅಭಿಮಾನಿಗಳು ನಿಡಘಟ್ಟ ಗ್ರಾಮದ ಗುರುದತ್ತ ಅನಾಥ ಆಶ್ರಮಕ್ಕೆ ತೆರಳಿ ಅನಾಥ ಮಕ್ಕಳಿಗೆ ಶಿವಣ್ಣ ಅವರ ಹೆಸರಿನಲ್ಲಿ ಅನ್ನ ಸಂತರ್ಪಣೆ ಮಾಡಿದರು. ಕರ್ನಾಟಕ ಜನಪರ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಚಿಕ್ಕಮ್ಮ ಹೆಗ್ಗಡೆ ಕುರುಬರ ಸಂಘದ ಕಾರ್ಯದರ್ಶಿ ಎಚ್.ರಾಜು, ಖಜಾಂಚಿ ಜವರಾಯಿ ಹೆಗ್ಡೆ, ಅಭಿಮಾನಿಗಳಾದಮನು ಕುಮಾರ್, ಶಿವು, ಕಿರಣ್, ಮರಿ ಕಾಳ ಹೆಗ್ಗಡೆ, ಶಿವಶಂಕರ್, ನಾಗರಾಜು ಮತ್ತಿತರರು ಇದ್ದರು.


ಗೃಹ ನಿರ್ಮಾಣ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ: ಬಿರುಸಿನ ಮತದಾನ

ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕು ಗೃಹ ನಿರ್ಮಾಣ ಮಂಡಳಿ ನೂತನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವರು ಭಾಗವಹಿಸಿ ಮತ ಚಲಾಯಿಸಿದರು.

ಆಡಳಿತ ಮಂಡಳಿಯ 15 ಮಂದಿ ನಿರ್ದೇಶಕ ಸ್ಥಾನಕ್ಕೆ ಸಾಲಗಾರರ ಕ್ಷೇತ್ರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 42 ಮಂದಿ ಚುನಾವಣಾ ಕಣದಲ್ಲಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಫ್ರೆಂಚ್ ರಾಕ್ಸ್ ಸರ್ಕಾರಿ ಶಾಲೆಯಲ್ಲಿ ಮತದಾನ ಬಿರುಸಿನಿಂದ ನಡೆಯಿತು.ಬಳಿಕ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಜಿ.ಈ.ರವಿಕುಮಾರ್, ಎಚ್.ಎನ್. ದಯಾನಂದ, ಚಿಟ್ಟಿಬಾಬು, ಜಿ.ಈ.ರಮೇಶ್, ಡಿ.ಕೆ.ದೇವೇಗೌಡ, ಬಾಲರಾಜು, ಮಹಿಳಾ ಮೀಸಲು ಕ್ಷೇತ್ರದಿಂದ ಎಚ್. ಎಲ್.ರೋಜಾ, ಎಚ್.ಆರ್.ಜ್ಯೋತಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಪುಟ್ಟಬಸವೇಗೌಡ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ನಟರಾಜು ಆಯ್ಕೆಯಾದರೆ., ಸಾಲಗಾರರ ಕ್ಷೇತ್ರದ ಸಾಮಾನ್ಯ ಕ್ಷೇತ್ರದಿಂದ ಆರ್.ಪ್ರತಾಪ್, ಮುರುಳೀಧರ್, ಎ.ವೆಂಕಟೇಶ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಎಚ್.ಪಿ.ಶಿವಕುಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕಣ್ಣ ಚುನಾಯಿತರಾದರು ಎಂದು ಚುನಾವಣಾಧಿಕಾರಿ ವಾಸೀಂಪಾಷ ಘೋಷಿಸಿದರು. ಚುನಾವಣೆಯಲ್ಲಿ ವಿಜೇತರಾದ ಎಲ್ಲಾ ನೂತನ ನಿರ್ದೇಶಕರನ್ನು ಬೆಂಬಲಿಗರು ಅಭಿನಂದಿಸಿದರು.