ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಾ ಸೋಲು ಸವಾಲುಗಳನ್ನು ಎದುರಿಸುವ ಮತ್ತು ನಿಭಾಯಿಸುವ ಶಕ್ತಿ ಮಹಿಳೆಗೆ ಪ್ರಕೃತಿ ಸ್ವಭಾವದಿಂದಲೇ ಲಭಿಸಿದ್ದು ಮಹಿಳೆ ಸಶಕ್ತಳಾಗಿದ್ದಾಳೆ ಎಂದು ಮೈಸೂರು ವಿವಿ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ. ಸುತ್ತೂರು ಎಸ್. ಮಾಲಿನಿ ತಿಳಿಸಿದರು.ನಗರದ ಎಂ.ಎಂ.ಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಆಹಾರ ಸಂಸ್ಕೃತಿ ಮಾನವನ ಬೌದ್ದಿಕತೆರೂಪಿಸುತ್ತದೆ. ಆದ್ದರಿಂದ ಗುಣಾತ್ಮಕವಾಗಿ ಧನಾತ್ಮಕವಾಗಿ ಆಲೋಚನೆಗಳನ್ನು ರೂಪಿಸಿಕೊಂಡು ಭವಿಷ್ಯದ ಜೀವನವನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ತಿಳಿಸಿ ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳ ನಡುವೆ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದು ವಿದ್ಯೆಯ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಜ್ಞಾನ ತಾಣವಾಗಿಸಿಕೊಂಡು ಪೋಷಕರ ಮತ್ತು ಕಾಲೇಜಿನ ಭರವಸೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ತಿಳಿಸಿದರು.ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹಿಳೆ ಸಶಕ್ತತೆಯಿಂದ ಬದುಕು ನಿರ್ವಹಿಸಬೇಕು ಇತ್ತೀಚಿನ ಆಧುನಿಕ ಜೀವನಶೈಲಿ ರೋಗಗ್ರಸ್ತ ಭಾರತವನ್ನು ನಿರ್ಮಾಣ ಮಾಡುತ್ತಿದ್ದು ಪಾರಂಪರಿಕ ಜೀವನಶೈಲಿ ಮತ್ತು ಸದೃಢ ಆಹಾರ ಕ್ರಮ ಸಾತ್ವಿಕ ಮನಸ್ಸಿನ ಆಲೋಚನೆಗಳು ಇಂದಿನ ಯುವಶಕ್ತಿಗೆ ನೀಡಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನ ಕುಮಾರಿ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನವನ್ನು ಕಾಣಬೇಕಿದೆ ಎಂದು ತಿಳಿಸಿದರುಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಭಾರತಿ, ವಿದ್ಯಾರ್ಥಿ ಸಂಘದ ರಚನೆ ಅದರ ಪ್ರಾಮುಖ್ಯತೆಯನ್ನು ತಿಳಿಸಿ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮಹಿಳಾ ಸಬಲೀಕರಣ ಮತ್ತು ಸಶಕ್ತಿಕರಣದ ಧ್ಯೇಯದಲ್ಲಿ ನಮ್ಮ ಕಾಲೇಜು ಹಲವು ಸಮಿತಿಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖಗಳಿಗೆ ಮತ್ತು ಅವರ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ವಿದ್ಯಾರ್ಥಿ ಸಂಘದ ಅಡಿಯಲ್ಲಿ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ರೂಪಿಸಿ ವಿದ್ಯಾರ್ಥಿನಿಯರನ್ನು ಸಹ ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡುತ್ತಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಜಿ. ಜ್ಯೋತಿ ಲಕ್ಷ್ಮಿ, ಕೆ. ಸುಕೃತಾ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಗಂಗಾಶ್ರೀ, ಉಪಾಧ್ಯಕ್ಷೆ ಆರ್. ವೈಷ್ಣವಿ, ಕಾರ್ಯದರ್ಶಿ ಶ್ರೇಯ ಶ್ರೀರಾಮ್ ಮತ್ತು ವಿದ್ಯಾರ್ಥಿ ಸಂಘದ ಸದಸ್ಯರು ಇದ್ದರು.