ವಿದ್ಯಾರ್ಥಿಗಳ ಬದುಕಿಗೆ ಮೊಬೈಲ್ ಮಾರಕ

| Published : May 10 2025, 01:11 AM IST

ಸಾರಾಂಶ

ಮೊಬೈಲ್ ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗಿದೆ. ಮೊಬೈಲ್ ಕುಡಿತಕ್ಕಿಂತ ಅಪಾಯಕಾರಿಯಾಗಿದ್ದು, ಸಾಧ್ಯವಾದಷ್ಟು ಮೊಬೈಲ್ ಬಳಸಬೇಕೆ ವಿನಃ ಮೊಬೈಲ್ ನಮಗೆ ಜೀವನ ಎಂತಾಗಬಾರದು.

ಕನಕಗಿರಿ:

ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ರೆಡ್‌ ಕ್ರಾಸ್ ಸಹಯೋಗದಲ್ಲಿ ಏಡ್ಸ್ ಜಾಗೃತಿ ರೆಡ್ ಕ್ರಾಸ್ ದಿನಾಚರಣೆ ಹಾಗೂ ದಂತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಗುರುವಾರ ನಡೆಯಿತು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಬೀನಾದೇವಿ ಮಾತನಾಡಿ, ಮೊಬೈಲ್ ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗಿದೆ. ಮೊಬೈಲ್ ಕುಡಿತಕ್ಕಿಂತ ಅಪಾಯಕಾರಿಯಾಗಿದ್ದು, ಸಾಧ್ಯವಾದಷ್ಟು ಮೊಬೈಲ್ ಬಳಸಬೇಕೆ ವಿನಃ ಮೊಬೈಲ್ ನಮಗೆ ಜೀವನ ಎಂತಾಗಬಾರದು. ಇತ್ತೀಚಿಗೆ ಚಿಕ್ಕಮಕ್ಕಳಲ್ಲೂ ಮೊಬೈಲ್ ಗೀಳು ಹೆಚ್ಚಾಗಿದೆ. ಪಾಲಕರು, ಹಿರಿಯರು ಮೊಬೈಲ್ ಬಳಸದಂತೆ ಮನೆಯ ಮಕ್ಕಳಿಗೆ, ಯುವಕರಿಗೆ ತಿಳಿ ಹೇಳುವುದು ಅನಿವಾರ್ಯವಾಗಿದೆ ಎಂದರು.

ಇನ್ನೂ ವಿದ್ಯಾರ್ಥಿ ಜೀವನ ಬಂಗಾರದಂತಾಗಬೇಕಾದರೆ ಉತ್ತಮವಾಗಿ ಓದುವುದು, ಬರೆಯುವುದನ್ನು ಮಾಡಬೇಕು. ಸರಳ ಜೀವನ ಶೈಲಿ ರೂಢಿಸಿಕೊಂಡು ಕಾಲೇಜಿನ ಉತ್ತಮ ಫಲಿತಾಂಶ ಪಡೆಯುವ ಕೆಲಸ ಮಾಡಬೇಕು. ಏಡ್ಸ್ ಸೊಂಕುವಿನ ಕುರಿತು ಜಾಗೃತಿಯಿಂದ ಇರುವಂತೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಪೋಸ್ಟರ್ ಮೇಕಿಂಗ್ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನಗದು ವಿತರಿಸಲಾಯಿತು.

ಪ್ರಾಂಶುಪಾಲ ಬಜರಂಗಬಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ರಕ್ಷಿತ್, ಮರ್ವಿನ್ ಡಿಸೋಜ, ಆಶಿಕಾ ಎಚ್‌.ಸಿ, ಲಲಿತಾ ಕಿನ್ನಾಳ, ಸರ್ವಮಂಗಳಮ್ಮ,

ಉಪನ್ಯಾಸಕರಾದ ಗೋಪಾಲರೆಡ್ಡಿ, ಎಸ್.ಕೆ. ಖಾದ್ರಿ, ಬಸವರಾಜ, ಮಾರುತೇಶ, ನಿಂಗಪ್ಪ ಕೆ, ಮಾಲತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.