ಕಳೆದಿದ್ದ ₹12 ಲಕ್ಷ ಕಿಮ್ಮತ್ತಿನ 52 ಮೊಬೈಲ್‌ಗಳು ಪತ್ತೆ

| Published : May 14 2024, 01:07 AM IST

ಕಳೆದಿದ್ದ ₹12 ಲಕ್ಷ ಕಿಮ್ಮತ್ತಿನ 52 ಮೊಬೈಲ್‌ಗಳು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್‌ ಕಳೆದರೆ ಈ-ಲಾಸ್ಟ್, ಸಿಈಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ತಮ್ಮ ಮೊಬೈಲ್‌ಗಳನ್ನು ಅದಷ್ಟು ಬೇಗ ಬೀದರ್‌ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ ದೂರುದಾರರಿಗೆ ಹಿಂದಿರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಇಲ್ಲಿನ ನೂತನ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಈ-ಲಾಸ್ಟ್ ಮತ್ತು ಸಿಇಐಆರ್ ಪೋರ್ಟ್‌ಲ್‌ನಲ್ಲಿ ಸಾರ್ವಜನಿಕರು ಮೊಬೈಲ್ ಕಳೆದು ಹೋದ ಬಗ್ಗೆ ದಾಖಲಾಗಿದ್ದ ಪ್ರಕರಣವನ್ನು ಭೇದಿಸಿ 12 ಲಕ್ಷ ರು. ಕಿಮ್ಮತ್ತಿನ ಬೆಲೆ ಬಾಳುವ ಒಟ್ಟು 52 ಮೊಬೈಲ್‌ಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದರು.

ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಮರಳಿಸಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದಲ್ಲಿ ಅಥವಾ ಯಾರಾದರು ಕಳುವು ಮಾಡಿಕೊಂಡು ಹೋದಲ್ಲಿ ನೀವು ಈ-ಲಾಸ್ಟ್ ಅಥವಾ ಸಿಈಐಆರ್ ಪೋರ್ಟಲ್‌ನಲ್ಲಿ ನಿಮ್ಮ ದೂರುಗಳನ್ನು ದಾಖಲಿಸಿದರೆ ತಮ್ಮ ಮೊಬೈಲ್‌ಗಳನ್ನು ಅದಷ್ಟು ಬೇಗ ಬೀದರ್‌ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ ದೂರುದಾರರಿಗೆ ಹಿಂದಿರುಗಿಸಲಾಗುವುದು ಎಂದು ಹೇಳಿದರು.

ಈ ಪ್ರಕರಣವನ್ನು ಭೇಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಬೀದರ್‌ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಬೀದರ್‌ ಪೊಲೀಸ್ ಉಪಾಧೀಕ್ಷಕ ಶಿವನಗೌಡ ಪಾಟೀಲ, ನೂತನ ನಗರ ಠಾಣೆಯ ಪಿಐ ಸಂತೋಷ ಎಲ್.ಟಿ, ಸಿಬ್ಬಂದಿಯಾದ ರಾಹುಲ, ಸಚೀನ, ಸಂತೋಷ, ರಾಮಣ್ಣ, ಧನರಾಜ, ಮಲ್ಲಿಕಾರ್ಜುನ, ಭರತ, ನಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.