ಸಾರಾಂಶ
ಇಂಧನ ಸೋರಿಕೆಯಿಂದ ಹೊತ್ತು ಉರಿಯುತ್ತಿದ್ದ ವಿಮಾನದ ಪ್ರತಿಕೃತಿ ಕಡೆಗೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಿಸಿದರಲ್ಲದೆ, ವಿಮಾನಕ್ಕೆ ತಗಲಿದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅಗ್ನಿದುರಂತ ಬಗ್ಗೆ ಅಣಕು ಕಾರ್ಯಾಚರಣೆ ನಡೆಯಿತು. ಮಂಗಳಂ-2024 ಹೆಸರಿನಲ್ಲಿ ವಾರ್ಷಿಕ ಏರೋಡ್ರೋಮ್ ಎಮರ್ಜೆನ್ಸಿ ಹೆಸರಿನಲ್ಲಿ ಮಧ್ಯಾಹ್ನ ಈ ಅಣಕು ಕಾರ್ಯಾಚರಣೆ ನಡೆಯಿತು.ಇಂಧನ ಸೋರಿಕೆಯಿಂದ ಹೊತ್ತು ಉರಿಯುತ್ತಿದ್ದ ವಿಮಾನದ ಪ್ರತಿಕೃತಿ ಕಡೆಗೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಿಸಿದರಲ್ಲದೆ, ವಿಮಾನಕ್ಕೆ ತಗಲಿದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಈ ಅಣಕು ಕಾರ್ಯಾಚರಣೆಯಲ್ಲಿ ವಿಮಾನ ನಿಲ್ದಾಣದ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.