ರಾಜ್ಯದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಮಾದರಿ ತೆಂಕನಿಡಿಯೂರು ಕಾಲೇಜು: ಯಶ್ಪಾಲ್ ಸುವರ್ಣ

| Published : Jun 17 2024, 01:42 AM IST

ರಾಜ್ಯದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಮಾದರಿ ತೆಂಕನಿಡಿಯೂರು ಕಾಲೇಜು: ಯಶ್ಪಾಲ್ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

೨೦೦೬ರಿಂದ ಇಂದಿನ ವರೆಗೆ ೫೨ ರ್‍ಯಾಂಕ್‌ಗಳನ್ನು ಗಳಿಸಿದ ಈ ಕಾಲೇಜಿನ ಸಾಧನೆ ನಿಜಕ್ಕೂ ಅಭಿನಂದನೀಯ. ಇದಕ್ಕಾಗಿ ಶ್ರಮಿಸಿದ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಹಾಗೂ ಎಲ್ಲಾ ಬೋಧಕ ವರ್ಗದವರನ್ನು ಶಾಸಕರು ಅಭಿನಂದಿಸಿದರು

ಕನ್ನಡಪ್ರಭ ವಾರ್ತೆ ಉಡುಪಿ

೨೦೨೨-೨೩ನೇ ಸಾಲಿನ ಸುಶಾಸನ ದಿನದ ಪ್ರಯುಕ್ತ ರಾಜ್ಯ ಶಿಕ್ಷಣ ಇಲಾಖೆ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದನ್ನು ಅತ್ಯುತ್ತಮ ಫಲಿತಾಂಶ ಗಳಿಸಿದ ಕಾಲೇಜು ಎಂದು ಘೋಷಿಸಿದೆ. ಇದು ನನ್ನ ವಿಧಾನಸಭಾ ಕ್ಷೇತ್ರದಲ್ಲಿದೆ ಎಂಬುದೇ ಹೆಮ್ಮೆ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಹೇಳಿದರು.

ಅವರು ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

೨೦೦೬ರಿಂದ ಇಂದಿನ ವರೆಗೆ ೫೨ ರ್‍ಯಾಂಕ್‌ಗಳನ್ನು ಗಳಿಸಿದ ಈ ಕಾಲೇಜಿನ ಸಾಧನೆ ನಿಜಕ್ಕೂ ಅಭಿನಂದನೀಯ. ಇದಕ್ಕಾಗಿ ಶ್ರಮಿಸಿದ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಹಾಗೂ ಎಲ್ಲಾ ಬೋಧಕ ವರ್ಗದವರನ್ನು ಶಾಸಕರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಎಂ.ಎ. ಇತಿಹಾಸ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ದಯೇಶ್, ಎಂ.ಎ. ಸಮಾಜಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ನಾಗರತ್ನ, ಬಿ.ಎಸ್.ಡಬ್ಲ್ಯೂ. ಪ್ರಥಮ ರ್‍ಯಾಂಕ್ ಗಳಿಸಿದ ಅನ್ವಿತಾ ಜಿ.ವಿ., ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸುರೇಶ್, ಧನುಷ್ ಪ್ರಥಮ ಬಿ.ಕಾಂ., ಪೂಜಾ ತೃತೀಯ ಬಿ.ಎ. ಅವರನ್ನು ಸನ್ಮಾನಿಸಿದ ಶಾಸಕರು ಅವರಿಗೆ ತಲಾ ೨,೦೦೦ ರು. ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟು ಬುದ್ಧಿವಂತರಿದ್ದಾರೆ, ಎಷ್ಟು ಚೆನ್ನಾಗಿದ್ದಾರೆ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು ಎಂದರು.

ಅಲ್ಲದೆ ಇದೇ ಸಂದರ್ಭದಲ್ಲಿ ವಯೋನಿವೃತ್ತ ಸಿಬ್ಬಂದಿಗಳಾದ ಶೇಖ್ ಸಾಬ್ಜಾನ್ ಸಾಹೇಬ್, ಜಾನಿ ಕೆ.ಎಂ. ಹಾಗೂ ವರ್ಗಾವಣೆಗೊಂಡ ಅಬ್ರಾಹಂ ಚಾಕೋ, ನೆಟ್ ಮತ್ತು ಸ್ಲೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾಲೇಜಿನ ಬಗ್ಗೆ ಕಿರು ಪಕ್ಷಿನೋಟವನ್ನು ತೆರೆದಿಟ್ಟದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಅಮೃತ್‌ನ ಅಧ್ಯಕ್ಷೆ ಭಾರತಿ ಎಚ್.ಎಸ್., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಜಾತ ಆಚಾರ್ಯ, ಸಾಫಲ್ಯ ಟ್ರಸ್ಟ್‌ನ ನಿರುಪಮಾ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ., ವಿದ್ಯಾಥಿ ಕ್ಷೇಮಪಾಲನಾ ಸಂಚಾಲಕರಾದ ರಾಧಾಕೃಷ್ಣ ಮತ್ತು ಡಾ. ರಾಘವ ನಾಯ್ಕ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕೃಷ್ಣ ಸಾಸ್ತಾನ ಮತ್ತು ರತ್ನಮಾಲಾ, ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಆಂಗ್ಲಭಾಷಾ ಸಹ ಪ್ರಾಧ್ಯಾಪಕ ನಿತ್ಯಾನಂದ ವಿ. ಗಾಂವಕರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ನಿರೂಪಿಸಿದರು. ಈ ಕಾರ್ಯಕ್ರಮ ನಿಶಾ ವಮದಿಸಿದರು.