ತಾಲೂಕಿನ ಪ್ರಗತಿ ಕುರಿತು ವಿವರಿಸಿದ ಅವರು, ವೀರೇಂದ್ರ ಹೆಗ್ಗಡೆ ಅವರ ಸಹಕಾರದ ಮೇರೆಗೆ ತಾಲೂಕಿನ ಗ್ರಾಮಗಳ ಪ್ರಗತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ನೀಡಿದ್ದು, ಆಧ್ಯಾತ್ಮಿಕ ವಿಚಾರ ರೂಪಿಸುವ ಮೂಲಕ ಪ್ರಗತಿಗೆ ಸಹಕಾರ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ.
ಪಾವಗಡ: ರೈತರಿಗೆ, ಮಹಿಳೆಯರಿಗೆ ವ್ಯಾಪಾರ, ವ್ಯವಸಾಯ, ವ್ಯವಹಾರಕ್ಕಾಗಿ ಸಾಲ ಸೌಲಭ್ಯ ಕಲ್ಪಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಕಾರ್ಯ ಮಾದರಿ ಹಾಗೂ ಶ್ಲಾಘನೀಯವಾದುದೆಂದು ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪಾವಗಡ ವಲಯ ಇವರ ವತಿಯಿಂದ ಬುಧವಾರ ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಪ್ರಗತಿ ಕುರಿತು ವಿವರಿಸಿದ ಅವರು, ವೀರೇಂದ್ರ ಹೆಗ್ಗಡೆ ಅವರ ಸಹಕಾರದ ಮೇರೆಗೆ ತಾಲೂಕಿನ ಗ್ರಾಮಗಳ ಪ್ರಗತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ನೀಡಿದ್ದು, ಆಧ್ಯಾತ್ಮಿಕ ವಿಚಾರ ರೂಪಿಸುವ ಮೂಲಕ ಪ್ರಗತಿಗೆ ಸಹಕಾರ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದ ಮಹಾರಾಜ್ ಜೀ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡಹಟ್ಡಿ ಪೂಜಾರಪ್ಪ, ಸುದೇಶ್ ಬಾಬು, ಬತ್ತಿನೇನಿ ನಾಗೇಂದ್ರ ರಾವ್, ಜಿ.ಎಸ್.ಅನಿಲ್ ಕುಮಾರ್, ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಇತರರಿದ್ದರು.