ನೀವು ಆ ರಾಜ್ಯ ಈ ರಾಜ್ಯ, ಆ ಕ್ಷೇತ್ರ ಈ ಕ್ಷೇತ್ರ, ಆ ಜಾತಿ ಈ ಜಾತಿ ಯಾವುದನ್ನು ತರಬಾರದು ನಾವೆಲ್ಲರೂ ಒಂದೇ ಎಂಬ ಭಾವನೆ ಬಂದರೆ ನಮ್ಮ ಜೀವನ ಸಾರ್ಥಕತೆಯಾಗುತ್ತದೆ. ಇಂದಿನ ಯುವ ಜನತೆ ಕೃಷಿಯನ್ನು ಬಿಟ್ಟು ನಗರ ಸೇರುತ್ತಿರುವುದು ಹಾಗೂ ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂಬುದು ಸತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ರೈತ ಬಂಧುಗಳೇ ನಮ್ಮ ಪೂರ್ವಜನರು ಸಮೃದ್ಧಿಯಾಗಿ ಬೆಳೆದು ಯಾವುದೇ ಸಾಲ ಮಾಡದೇ ಬದುಕುತ್ತಿದ್ದರು. ಆದರೆ ಈಗ ಹೈಬ್ರಿಡ್ ಬಿತ್ತನೆ ಬೀಜಗಳಿಂದ ರೈತರ ಸಾಲ-ಸಾವು ಎರಡೂ ಕೂಡ ಹೆಚ್ಚಾಗುತ್ತಿದೆ ಎಂದು ಪುಷ್ಪಗಿರಿ ಶ್ರೀ ಸೋಮಶೇಖರ ಶಿವಾಚಾರ್ಯ ವಿಷಾದಿಸಿದರು.

ಹಳೇಬೀಡಿನ ಸಮೀಪ ಶ್ರೀ ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ನಿಶಾನೆ ಇವರ ಸಾಮೂಹಿಕ ನಾಯಕತ್ವದಲ್ಲಿ ಡಾ. ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯ ಕಾರ್ಯಾಗಾರದ ಪ್ರಚಾರದ ವಾಹನ ಚಾಲನೆಯನ್ನು ನೀಡುತ್ತಾ ರೈತರು ನಾವೆಲ್ಲ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕು. ನೀವು ಆ ರಾಜ್ಯ ಈ ರಾಜ್ಯ, ಆ ಕ್ಷೇತ್ರ ಈ ಕ್ಷೇತ್ರ, ಆ ಜಾತಿ ಈ ಜಾತಿ ಯಾವುದನ್ನು ತರಬಾರದು ನಾವೆಲ್ಲರೂ ಒಂದೇ ಎಂಬ ಭಾವನೆ ಬಂದರೆ ನಮ್ಮ ಜೀವನ ಸಾರ್ಥಕತೆಯಾಗುತ್ತದೆ. ಇಂದಿನ ಯುವ ಜನತೆ ಕೃಷಿಯನ್ನು ಬಿಟ್ಟು ನಗರ ಸೇರುತ್ತಿರುವುದು ಹಾಗೂ ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂಬುದು ಸತ್ಯವಾಗಿದೆ. ರಸಗೊಬ್ಬರ ಗುಲಾಮಗಿರಿಯನ್ನು ಓಡಿಸಿ ಹಸಿರು ಕ್ರಾಂತಿ ತಂತ್ರದ ಜ್ಞಾನ ಹೊಣೆ ಕಾರ್ಯಕ್ಕೆ ಬಂದು ಸೇರಿ ನೋಂದಣಿಯನ್ನು ಮಾಡಿಸಿ ಈ ಕಾರ್ಯಕ್ಕೆ ಅರ್ಥಪೂರ್ಣ ಬರುವ ಹಾಗೆ ಸ್ಥಳೀಯ ರೈತರು, ರೈತ ಕುಟುಂಬದ ಹೆಣ್ಣುಮಕ್ಕಳು ಸಹ ಈ ಕಾರ್ಯಕ್ರಮಕ್ಕೆ ಬರಬೇಕು ಎಂದರು.

ಈಗಾಗಲೇ ಪುಷ್ಪಗಿರಿಯಲ್ಲಿ ಜನವರಿ ೩ರಿಂದ ೬ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ೬೦೦ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಸಾವಿರ ಜನ ಬರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಬರುವ ಜನತೆಗೆ ಯಾವುದೇ ತೊಂದರೆಯಾಗಬಾರದು. ಇದು ನಿಮ್ಮ ಧಾರ್ಮಿಕ ಕ್ಷೇತ್ರವಾಗಿರುತ್ತದೆ. ಈ ಕಾರ್ಯಕ್ಕೆ ಸುಮಾರು ೩೦ ಸಾವಿರ ಕರಪತ್ರ ಮಾಡಿಸಿದ್ದಾರೆ. ಪ್ರತಿ ರೈತರ ಮನೆ ಬಾಗಿಲಿಗೆ ಹಾಗೂ ಎಲ್ಲಾ ಹಳ್ಳಿ, ಹೋಬಳಿ, ತಾಲೂಕು ಹೋಗಬೇಕು. ಬರುವ ಎಲ್ಲಾ ರೈತರಿಗೂ ಪ್ರೀತಿಯ ಸ್ವಾಗತ ಬಯಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಣಗಾಲ್‌ ಮೂರ್ತಿ, ಗ್ಯಾರಂಟಿ ರಾಮಣ್ಣ ಹಾಗೂ ಸ್ಥಳೀಯ ಮುಖಂಡರಾದ ಶಿವಪ್ಪ, ಗಂಗಾಧರಪ್ಪ, ಹಾಲಪ್ಪ, ಪರಮೇಶ್, ರುದ್ರೇಶ್, ಮುನ್ನಬಾಯಿ, ಮಹೇಶ್ ತಟ್ಟೇಹಳ್ಳಿಯ ಶ್ರೀನಿವಾಸ್, ಶಿವಕುಮಾರ್‌ ಇನ್ನು ಹಲವಾರು ಮುಖಂಡರು ಹಾಜರಿದ್ದರು.