ದೇಶದ ಅಭಿವೃದ್ಧಿಗೆ ಮೋದಿ ಅವಿರತ ಶ್ರಮ: ಸಂಸದ ಡಾ.ಜಿ.ಎಂ.ಸಿದ್ದೇಶ್ವರ

| Published : Mar 13 2024, 02:06 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದ್ದು, ಇ‍ವೇ ಯೋಜನೆಗಳೇ ದೇಶಕ್ಕೆ ಶಾಶ್ವತವಾದ ಗ್ಯಾರಂಟಿಗಳಾಗಿವೆ. ದೇಶದ ಅಭಿವೃದ್ಧಿಗಾಗಿ ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವಿಶ್ವದ ಆರ್ಥಿಕ ಸ್ಥಿತಿಯಲ್ಲಿ 13ನೇ ಸ್ಥಾನದಲ್ಲಿ ಭಾರತ ಈಗ 3ನೇ ಸ್ಥಾನದಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ನಂಬರ್ ಒನ್ ಆರ್ಥಿಕತೆಯ ದೇಶವಾಗಿ ಬೆಳೆಯಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದೊಂದು ದಶಕದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಡೀ ವಿಶ್ವವೇ ಕುತೂಹಲದಿಂದ ಭಾರತದತ್ತ ನೋಡುವಂತೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರೈಲ್ವೆ ಇಲಾಖೆ ಹಮ್ಮಿಕೊಂಡಿದ್ದ ಒಂದು ನಿಲ್ದಾಣ, ಒಂದು ಉತ್ಪನ್ನ ಮಳಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಉದ್ಘಾಟಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಆರೋಗ್ಯ, ನೀರು, ಮೂಲ ಸೌಕರ್ಯ ಸೇರಿ ಜನರಿಗೆ ಅಗತ್ಯ ಮೂಲ ಸೌಕರ್ಯಗಳ ಒದಗಿಸುವ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕೆಲಸ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದರು.

ಅಶೋಕ ರಸ್ತೆ ಸಮಸ್ಯೆ ಪರಿಹಾರಕ್ಕೆ ಯತ್ನ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದ್ದು, ಇ‍ವೇ ಯೋಜನೆಗಳೇ ದೇಶಕ್ಕೆ ಶಾಶ್ವತವಾದ ಗ್ಯಾರಂಟಿಗಳಾಗಿವೆ. ದೇಶದ ಅಭಿವೃದ್ಧಿಗಾಗಿ ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವಿಶ್ವದ ಆರ್ಥಿಕ ಸ್ಥಿತಿಯಲ್ಲಿ 13ನೇ ಸ್ಥಾನದಲ್ಲಿ ಭಾರತ ಈಗ 3ನೇ ಸ್ಥಾನದಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ನಂಬರ್ ಒನ್ ಆರ್ಥಿಕತೆಯ ದೇಶವಾಗಿ ಬೆಳೆಯಲಿದೆ. ದಾವಣಗೆರೆ ನಗರದ ಜ್ವಲಂತ ಸಮಸ್ಯೆಯಾಗಿರುವ ಅಶೋಕ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ₹49.50 ಕೋಟಿ ಹಣ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಶೀಘ್ರವೇ ಜಿಲ್ಲಾಧಿಕಾರಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು, ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ತಿಳಿಸಿದರು.

ಅಭೂತಪೂರ್ವ ಸಾಧನೆ:

ರೈಲ್ವೇ ಇಲಾಖೆಯೂ ಕಳೆದೊಂದು ದಶಕದಲ್ಲಿ ಅಭೂತಪೂರ್ವ ಸಾಧನೆಯಾಗುತ್ತಿವೆ. ದೇಶದ ಮೂಲೆ ಮೂಲೆಗೂ ರೈಲು ಮಾರ್ಗ ಕಲ್ಪಿಸಲಾಗಿದೆ. ರೈಲ್ವೆ ದ್ವಿಪಥ ಮಾರ್ಗ ವಿದ್ಯುದೀಕರಣ, ಕೋಚ್ ರೆಸ್ಟೋರೆಂಟ್ ಸೇರಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ವಿಶ್ವದ ಅತ್ಯುತ್ತಮ ರೈಲ್ವೇ ವ್ಯವಸ್ಥೆ ಸಾಲಿಗೆ ನಮ್ಮ ಭಾರತ ರೈಲ್ವೇ ಇಲಾಖೆಯಲ್ಲಿ ಅಭೂತಪೂರ್ವ ಸಾಧನೆಯಾಗುತ್ತಿದೆ. ಹೊಸ ರೈಲ್ವೇ ಮಾರ್ಗ, ರೈಲುಗಳ ಸೇವೆ, ರೈಲ್ವೇ ನಿಲ್ದಾಣಗಳು ಹೀಗೆ ನಾನಾ ರೀತಿಯಲ್ಲಿ ರೈಲ್ವೇ ಸೌಕರ್ಯ, ಸೇವೆ ಮತ್ತಷ್ಟು ವಿಸ್ತರಣೆಯಾಗುತ್ತಿದೆ ಎಂದು ಸಂಸದ ಸಿದ್ದೇಶ್ವರ ಹೇಳಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ರೈಲ್ವೆ ಇಲಾಖೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಿದ್ದು. ವಿಶ್ವದ ಅತೀ ಹೆಚ್ಚು ರೈಲ್ವೇ ಸಿಬ್ಬಂದಿ, ರೈಲ್ವೇ ಸೇವೆ ಹೊಂದಿರುವ ಇಲಾಖೆಯೆಂದರೆ ಅದು ಭಾರತೀಯ ರೈಲ್ವೇ ಇಲಾಖೆ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಉಪ ಮೇಯರ್ ಯಶೋಧಾ ಯೋಗೇಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಯಕೊಂಡ ಜಿ.ಎಸ್.ಶ್ಯಾಮ್‌, ಮಾಜಿ ಮೇಯರ್ ಎಸ್.ಟಿ.ವೀರೇಶ, ರೈಲ್ವೇ ಅಧಿಕಾರಿ ರೋಹನ್ ಡೌಂಗ್ರೆ, ಪ್ರಶಾಂತಕುಮಾರ ಇತರರಿದ್ದರು.

ಮೂರು ದಿಕ್ಕಿಗೂ ರೈಲ್ವೆ ಮಾರ್ಗ

ಹರಿಹರದ ರೈಲ್ವೇ ನಿಲ್ದಾಣವು ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗವನ್ನು ಬೆಸೆಯುವ ಹೆಬ್ಬಾಗಿಲಾಗಿದೆ. ಇಲ್ಲಿಂದ ನಿತ್ಯವೂ ಸಾವಿರಾರು ಪ್ರಯಾಣಿಕರು ದೇಶದ ಮೂಲೆ ಮೂಲೆಗೆ ಪ್ರಯಾಣಿಸುತ್ತಾರೆ. ಮೂರು ದಿಕ್ಕಿಗೆ ರೈಲ್ವೇ ಮಾರ್ಗ ಹೊಂದಿರುವ ಕ್ಷೇತ್ರ ತಮ್ಮದಾಗಿದೆ. ದೇಶಕ್ಕಾಗಿ ನರೇಂದ್ರ ಮೋದಿ ಕೊಡುಗೆ ಅವಿಸ್ಮರಣೀಯವಾದುದು.

ಬಿ.ಪಿ.ಹರೀಶ, ಹರಿಹರ ಶಾಸಕ