ಸ್ವತಂತ್ರ ಭಾರತದ ಇತಿಹಾಸದಲ್ಲಿ ವಿಕಸಿತ ಭಾರತಕ್ಕೆ ಅಡಿಗಲ್ಲು ಹಾಕಿದವರು ಪ್ರಧಾನಿ ನರೇಂದ್ರ ಮೋದಿ, ಒಂದು ಕಾಲದಲ್ಲಿ ಜಗತ್ತು ಭಾರತದತ್ತ ನಿರ್ಲಕ್ಷದಿಂದ ನೋಡುತ್ತಿತ್ತು, ಇಂದು ಅದೇ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ, ಇದಕ್ಕೆ ಕಾರಣ ನರೇಂದ್ರ ಮೋದಿ ಅವರ ಆಡಳಿತ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ; ಸ್ವತಂತ್ರ ಭಾರತದ ಇತಿಹಾಸದಲ್ಲಿ ವಿಕಸಿತ ಭಾರತಕ್ಕೆ ಅಡಿಗಲ್ಲು ಹಾಕಿದವರು ಪ್ರಧಾನಿ ನರೇಂದ್ರ ಮೋದಿ, ಒಂದು ಕಾಲದಲ್ಲಿ ಜಗತ್ತು ಭಾರತದತ್ತ ನಿರ್ಲಕ್ಷದಿಂದ ನೋಡುತ್ತಿತ್ತು, ಇಂದು ಅದೇ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ, ಇದಕ್ಕೆ ಕಾರಣ ನರೇಂದ್ರ ಮೋದಿ ಅವರ ಆಡಳಿತ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ನಗರದ ಪುರಭವನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ಹುದ್ದೆಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡುತ್ತಿದ್ದರು. ವಂದೇ ಮಾತರಂ ಗೀತೆ ಅಂದು ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿಯ ಪ್ರೇರಣೆಯಾಗಿತ್ತು, ಇಂದು ರಾಜ್ಯದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣ ಹಾಡಿದರೇ ಕ್ರಿಮಿನಲ್ ಕೇಸು ಹಾಕಲಾಗುತ್ತಿದೆ, ಇದು ಕಾಂಗ್ರೆಸ್ ಸರ್ಕಾರದ ದೇಶಭಕ್ತಿಯ ಸಂಕೇತವಾಗಿದೆ ಎಂದರು.ಎಸ್‌ಐಆರ್‌ನ ಬಗ್ಗೆ ಟೀಕೆಟಿಪ್ಪಣಿ ಮಾಡುವ ಅಧಿಕಾರ ಎಲ್ಲರಿಗೂ ಇದೆ, ಆದರೇ ಫಾರಂ 7ನ್ನು ತುಂಬಿಸಿ ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಅವರು ಇಡೀ ಸಂಪುಟವನ್ನೇ ತೆಗೆದುಕೊಂಡು ಹೋಗಿ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಮಾಡುತ್ತಾರೆ ಎನ್ನುವುದು ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ ಎಂದವರು ಆರೋಪಿಸಿದರು.
ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ ಶೆಟ್ಟಿ, ಕಿರಣ್ ಕೊಡ್ಗಿ, ಪಕ್ಷದ ಪ್ರಮುಖರಾದ ದಿನಕರ ಬಾಬು, ಶಿಲ್ಪಾ ಸುವರ್ಣ, ಶ್ರೀಕಾಂತ್ ನಾಯಕ್, ರೇಶ್ಮಾ ಉದಯ ಶೆಟ್ಟಿ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ಸ್ವಾಗತಿಸಿದರು, ಜಿಲ್ಲಾ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು.3 ಭಾಗಗಳಲ್ಲಿ ಸೇವಾ ಜ್ಯೋತಿಗೆ ಚಾಲನೆ: ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ವಿಕಸಿತ ಭಾರತ ಸಂಕಲ್ಪದಂಗವಾಗಿ ಮಾಡಿದ ಭಾಷಣದ ನೇರಪ್ರಸಾರವನ್ನು ಬೃಹತ್ ಪರದೆ ಮೇಲೆ ವೀಕ್ಷಣೆ ಮಾಡಲಾಯಿತು. ಇದಕ್ಕೆ ಮೊದಲು ಜಿಲ್ಲೆಯ 3 ಭಾಗಗಳಲ್ಲಿ ಸೇವಾ ಜ್ಯೋತಿಗೆ ಚಾಲನೆ ನೀಡಲಾಯಿತು.