ಭಾರತ ಶಕ್ತಿಶಾಲಿಯಾಗಲು ಮೋದಿ ಮತ್ತೆ ಗೆಲ್ಲಬೇಕು: ಹಾರಿಕಾ ಮಂಜುನಾಥ

| Published : Mar 03 2024, 01:31 AM IST

ಸಾರಾಂಶ

ನರೇಂದ್ರ ಮೋದಿ ಅಭಿಮಾನಿ ಬಳಗದಿಂದ ಶನಿವಾರ ದಾವಣಗೆರೆಯಲ್ಲಿ ‘ಯುವಕರ ನಡೆ..ಮೋದಿಯ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶತಮಾನದ ಹಿಂದೆ ದೇಶವನ್ನು ಜಾಗೃತಿಗೊಳಿಸವು ಸ್ವಾಮಿ ವಿವೇಕಾನಂದರು ಬಂದರೆ, ಈಗ ನರೇಂದ್ರ ಮೋದಿ ಬಂದಿದ್ದು, ಭಾರತವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿಸಲು ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕಾದ ಅವಶ್ಯಕತೆ ಇದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ ತಿಳಿಸಿದರು.

ನಗರದ ಆಂಜನೇಯ ಬಡಾವಣೆಯಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಯುವಕರ ನಡೆ..ಮೋದಿಯ ಕಡೆ ಕಾರ್ಯಕ್ರಮ ದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ವಿಶ್ವದ ಮುಂಚೂಣಿ ರಾಷ್ಟ್ರವಾಗಿಸಲು, ಭಾರತವನ್ನು ಜಗತ್ತಿನ ಶಕ್ತಿ ರಾಷ್ಟ್ರವನ್ನಾಗಿಸಲು ಮತ್ತೊಮ್ಮೆ ನರೇಂದ್ರ ಮೋದಿಯವರ ಸುರಕ್ಷಿತ ಕೈಗಳಿಗೆ ದೇಶದ ಆಡಳಿತವನ್ನು ನೀಡಬೇಕಿದೆ ಎಂದರು.

ಸಮಾಜಘಾತುಕ ಶಕ್ತಿಗಳು 2047ರ ಹೊತ್ತಿಗೆ ಭಾರತವನ್ನು ಇಸ್ಲಾಮೀಕರಣ ಮಾಡುವ ಘೋಷಣೆ ಹಾಕಿವೆ. ಈ ನಿಟ್ಟಿನಲ್ಲಿ ದೇಶದಲ್ಲಿ ನಡೆಯುವ ಸಮಾಜಘಾತುಕ ಶಕ್ತಿಗಳ ಕೃತ್ಯಗಳನ್ನು ತಡೆಯಲು ದೇಶದ ಯುವ ಜನರು ಜಾಗೃತರಾಗಬೇಕು. ಸಂವಿಧಾನದಡಿ ಹಿಂದು ರಾಷ್ಟ್ರವನ್ನಾಗಿಸಲು ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಬೇಕಿದೆ. ಭಾರೀ ಬಹುಮತದೊಂದಿಗೆ ದೇಶದಲ್ಲಿ ಮೋದಿ ನಾಯಕತ್ವಕ್ಕೆ ಅಧಿಕಾರ ನೀಡುವ ಕೆಲಸ ದೇಶವಾಸಿಗಳಿಂದ ಆಗಬೇಕು ಎಂದು ಅವರು ಮನವಿ ಮಾಡಿದರು.

ಭಾರತವನ್ನು ಜಾಗೃತಗೊಳಿಸಲು, ಉತ್ಕೃಷ್ಟ ದೇಶವನ್ನಾಗಿಸಲು ಯುವಕರು ಸನ್ನದ್ಧರಾಗಬೇಕು. ಸಮಾಜಘಾತುಕ ಶಕ್ತಿಗಳಿಂದ ದೇಶವನ್ನು ರಕ್ಷಿಸಿ, ಭಾರತವನ್ನು ಹಿಂದುರಾಷ್ಟ್ರವೆಂದು ಘೋಷಿಸಲು ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರಬೇಕಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಮ ಮಂದಿರ ನಿರ್ಮಿಸುವ ಮೂಲಕ ದೇಶದ ಜನರ ಶತಮಾನಗಳ ಕನಸ್ಸನ್ನು ಸಾಕಾರಗೊಳಿಸಿತು. ಅಧರ ಪೂರ್ಣ ಲಾಭವು ಬಿಜೆಪಿಗೆ ಸಲ್ಲಬೇಕಾಗಿದೆ ಎಂದು ಅವರು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಿದ್ದ ಕಾಂಗ್ರೆಸ್ ನಾಯಕರೇ ಈಗ ಬದಲಾಗಿದ್ದಾರೆ. ಬಿಜೆಪಿಯ ಮುಂದಿನ ಗುರಿ ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳ ನಿರ್ಮಾಣ ಮಾಡುವುದಾಗಿದೆ. ಹಿಂದು ಸಮಾಜ ಈಗ ಜಾಗೃತವಾಗಬೇಕು. ಅದು ಆಗಬೇಕೆಂದರೆ ಪ್ರತಿಯೊಬ್ಬರಿಂದಲೂ ಹನುಮ ಬಲ ಬೇಕಾಗಿದೆ. ಭಾರತವನ್ನು ಸುರಕ್ಷಿತವಾಗಿ, ಸದೃಢವಾಗಿ, ಬಲಿಷ್ಠವಾಗಿ ಮುನ್ನಡೆಸುತ್ತಿರುವ ಮೋದಿಯವರ ಸುರಕ್ಷಿತ ಕೈಗಳಿಗೆ ಮತ್ತೊಮ್ಮೆ ಅಧಿಕಾರ ನೀಡುವ ಕೆಲಸ ದೇಶದ ಜನತೆ ಮಾಡ ಬೇಕು ಎಂದು ಅವರು ಮನವಿ ಮಾಡಿದರು.

ಈಚೆಗಂತೂ ಜಾತ್ಯತೀತರು ಯಾರೂ ಇಲ್ಲ. ಮುಸಲ್ಮಾನರೂ ಒಳ್ಳೆಯ ಮುಸಲ್ಮಾನರಾಗಬೇಕು. ಕ್ರಿಶ್ಚಿಯನ್ನರು ಒಳ್ಳೆಯ ಕ್ರಿಶ್ಚಿಯನ್ನರಾಗಬೇಕು. ಆದರೆ, ಹಿಂದುಗಳು ಮಾತ್ರವೇ ಜಾತ್ಯತೀತರಾಗಬೇಕೆಂದು ಬಯಸುತ್ತಾರೆ. ಇದನ್ನು ಜಾತ್ಯತೀತತೆ ಎನ್ನುವುದಿಲ್ಲ. ಇದನ್ನು ಬೂಟಾಟಿಕೆ ಎನ್ನುತ್ತಾರೆ. ಬುದ್ಧಿ ಜೀವಿಗಳು ಹಿಂದು ಸಮಾಜವನ್ನು ಒಡೆಯುವ, ಛಿದ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಸಮಾಜವು ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ ಕಿವಿಮಾತು ಹೇಳಿದರು.

ಹರಿಹರದ ಶಾಸಕ ಬಿ.ಪರಿ.ಹರೀಶ ಗೌಡ ಮಾತನಾಡಿ, ಹಿಂದು ಧರ್ಮ, ಸಂಸ್ಕೃತಿ ಉಳಿಯಬೇಕೆಂದರೆ ಭಾರತ ವಿಶ್ವಗುರುವಾಗಬೇಕು. ಭಾರತವು ವಿಶ್ವಗುರು ವಾಗಬೇಕಾದರೆ ನರೇಂದ್ರ ಮೋದಿಯವರ ಅವಶ್ಯಕತೆ ಇದೆ. ಅನೇಕ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಸಹ ಭಾರತದ ಲೋಕಸಭೆ ಚುನಾವಣೆಯನ್ನು ಇದಿರು ನೋಡುತ್ತಿವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ಮತ್ತಷ್ಟು ವೇಗದಲ್ಲಿ ಅಭಿವೃದ್ಧಿ ಹೊಂದುವ ರಾಷ್ಟ್ರವಾಗುತ್ತದೆ ಎಂದರು.

ಬಿಜೆಪಿ ಯುವ ಮುಖಂಡ ಅಥಿತ್ ಅಂಬರಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಎಸ್.ಎ.ರವೀಂದ್ರ ನಾಥ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಹಿರಿಯ ಮುಖಂಡ ಕೆ.ಬಿ.ಶಂಕರ ನಾರಾಯಣ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಯುವ ಮುಖಂಡ ಜಿ.ಎಸ್.ಅನಿತಕುಮಾರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಬೇತೂರು ಸಂಗನಗೌಡ, ಬಾತಿ ವೀರೇಶ ದೊಗ್ಗಳ್ಳಿ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಶಿವರಾಜ ಪಾಟೀಲ್, ಕೆಟಿಜೆ ನಗರ ಆನಂದ, ನಿಂಗರಾಜ ರೆಡ್ಡಿ, ಕೊಟ್ರೇಶ ಗೌಡ, ಸಿದ್ದೇಶ ಇತರರು ಇದ್ದರು.