ಮೋದಿಯ ಸರ್ವಾಧಿಕಾರ ದಲಿತರಿಗೆ ಸಂಚಕಾರ: ಜಯನ್ ಮಲ್ಪೆ

| Published : Apr 29 2024, 01:32 AM IST

ಮೋದಿಯ ಸರ್ವಾಧಿಕಾರ ದಲಿತರಿಗೆ ಸಂಚಕಾರ: ಜಯನ್ ಮಲ್ಪೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಜೈಭೀಮ್ ಬಳಗದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ ೧೩೩ನೇ ಜನ್ಮ ದಿನಾಚರಣೆ ನಡೆಯಿತು. ದಲಿತ ಚಿಂತಕ ಜಯನ್ ಮಲ್ಪೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಪ್ರಧಾನಿ ನರೇಂದ್ರ ಮೋದಿ ಉದ್ದೇಶದ ಹಿಂದೆ ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾವನ್ನು ನಾಶಮಾಡುವ ಸಂಚು ಅಡಗಿದೆ ದಲಿತ ಚಿಂತಕ ಜಯನ್ ಮಲ್ಪೆ ಆರೋಪಿಸಿದ್ದಾರೆ.

ಅವರು ಭಾನುವಾರ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಜೈಭೀಮ್ ಬಳಗ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ ೧೩೩ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾದ ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿ ಅಂಬೇಡ್ಕರ್‌ ಅವರನ್ನು ಸ್ವಾರ್ಥಕ್ಕೆ ಬಳಸುವುದು ದೇಶ ದ್ರೋಹಕ್ಕೆ ಸಮ, ನಿಜವಾದ ದಲಿತ ನಾಯಕರು ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು, ಮೌಢ್ಯಕ್ಕೆ ಬಲಿಯಾಗದೆ ಧಮ್ಮ ಮಾರ್ಗದಲ್ಲಿ ನಡೆದರೆ ಮಾತ್ರ ದಲಿತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಉಡುಪಿ ವಿಧ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಸೌರಭ ಬಳ್ಳಾಲ್ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯವನ್ನು ಉಳಿಸುವುದು ಇಂದು ಪ್ರತಿಯೊಬ್ಬರ ಕರ್ತವ್ಯ, ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಕೆಲಸ ಮಾಡಬೇಕು ಎಂದರು.

ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಗ್ರಾಮ ಪಂಚಾಯಿತಿ ಸದಸ್ಯೆ ಸುಲೋಚನಾ ಸುಧಾಕರ್, ಜೈಭೀಮ್ ಬಳಗದ ಅಧ್ಯಕ್ಷ ಅಣ್ಣಪ್ಪ ಗೆದ್ದೆಮನೆ, ಗಣೇಶ್ ಹಂಗಾಕಟ್ಟೆ ಉಪಸ್ಥಿತರಿದ್ದರು. ಸಂತೋಷ್ ಸ್ವಾಗತಿಸಿದರು. ರಂಗ ಹಂಗಾರಕಟ್ಟೆ ವಂದಿಸಿದರು. ಸದಾನಂದ ಕಾರ್ಯಕ್ರಮ ನಿರೂಪಿಸಿದರು.