ಭ್ರಷ್ಟರ ಹಣ ಬಡವರಿಗೆ ಮೋದಿ ಗ್ಯಾರಂಟಿ ಸ್ವಾಗತಾರ್ಹ

| Published : Apr 02 2024, 01:08 AM IST

ಭ್ರಷ್ಟರ ಹಣ ಬಡವರಿಗೆ ಮೋದಿ ಗ್ಯಾರಂಟಿ ಸ್ವಾಗತಾರ್ಹ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಕಳೆದ ಹತ್ತು ವರ್ಷಗಳಿಂದ ಬಡ ಮಧ್ಯಮ ವರ್ಗದವರ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನ ಜಾರಿ ಮಾಡುವುದರ ಮೂಲಕ ಉತ್ತಮ ಆಡಳಿತವನ್ನು ನೀಡಿದೆ. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟರ ಹಣ ಬಡವರಿಗೆ ಎಂಬ ಮೋದಿ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಂದ ಲೂಟಿ ಮಾಡಿದ ಹಣ, ಭ್ರಷ್ಟರಿಂದ ಇಡಿ ವಶಪಡಿಸಿಕೊಂಡ ಆಸ್ತಿಯನ್ನು ಜನರಿಗೆ ಹಿಂದಿರುಗಿಸಲು ಇರುವ ಕಾನೂನು ಆಯ್ಕೆಯನ್ನು ಹುಡುಕುತ್ತಿರುವುದಾಗಿ ಮೋದಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಅವರ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಕ್ಕೆ ಯಾವುದೇ ಬ್ರೇಕ್ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಒಂದು ನಿರ್ಧಾರ ಸ್ವಾಗತಾರ್ಹವಾಗಿದೆ. ದೇಶದಲ್ಲಿ ಬಡವರಿಂದ ಸುಲಿಗೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಹಣವನ್ನು ಬಡವರಿಗೆ ತಲುಪಿಸುವ ಕಾನೂನು ಹುಡುಕಿ ಬಡವರಿಗೆ ತಲುಪಿಸುವ ಕಾರ್ಯ ಮಾಡಬೇಕು. ಇದರಿಂದ ಬಡವರು ಬಡತನ ಮುಕ್ತರಾಗುತ್ತಾರೆ ಎಂದರು.

ರಾಮ ಮಂದಿರ ನಿರ್ಮಾಣ ದೊಡ್ಡ ಸಾಧನೆ:

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ನೂರಾರು ವರ್ಷಗಳಿಂದ ಇದ್ದ ಕಾನೂನು ತೊಡಕನ್ನು ಬಗೆಹರಿಸುವ ಮೂಲಕ ಕೋಟ್ಯಂತರ ಹಿಂದುಗಳ ಕನಸನ್ನ ರಾಮಮಂದಿರ ನಿರ್ಮಿಸಿ ನನಸು ಮಾಡಿದ್ದಾರೆ. ಅದರಿಂದ ನರೇಂದ್ರ ಮೋದಿಯವರ ಪಾರದರ್ಶಕ ಆಡಳಿತ ಹಾಗೂ ಅಭಿವೃದ್ಧಿಶೀಲ ಭಾರತದ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕರು ಬಿಜೆಪಿಗೆ ಮತ ನೀಡುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಡಾ.ಕೆ.ಸುಧಾಕರ್ ಉತ್ತಮ ಕಾರ್ಯ:

ಡಾ.ಕೆ.ಸುಧಾಕರ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕೊರೋನಾ ಸಂದರ್ಭದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಈಗ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ಧಾರೆ. ಆದ್ದರಿಂದ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಪ್ರಮುಖವಾಗಿ ಶಾಸಕರಾಗಿ ಚಿಕ್ಕಬಳ್ಳಾಪುರಕ್ಕೆ ಸಾಕಷ್ಟು ಶಾಶ್ವತ ಕೆಲಸ ಮಾಡಿದ್ದಾರೆ. ಲೋಕಸಭೆ ಗೆಲವು ಸಾಧಿಸಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಭಿವೃದ್ಧಿ ನಾಗಾಲೋಟ ಕಾಣಲಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.(ಮಗ್‌ಶಾಟ್‌ ಮಾತ್ರ)