ದೇಶಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಬಿಜೆಪಿ ಮುಖಂಡ ರಮೇಶ್ ರಾವ್

| Published : Mar 21 2024, 01:12 AM IST

ದೇಶಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಬಿಜೆಪಿ ಮುಖಂಡ ರಮೇಶ್ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪಿವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಪ್ರತಿಯೊಬ್ಬ ಕಾರ್ಯಕರ್ತ ಸಂಕಲ್ಪ ಮಾಡಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬಿಜೆಪಿಯ ಗ್ರಾಮಾಂತರ ಮಂಡಲದ ವತಿಯಿಂದ ಕುರೂಡಿ ಗ್ರಾಮದಲ್ಲಿ ಬೂತ್ ಸಭೆ ನಡೆಸಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ಜಿ.ರಮೇಶ್ ರಾವ್ ಮಾತನಾಡಿ, ಬೂತ್ ಮಟ್ಟದ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ರಾತ್ರಿ ಹಗಲೆನ್ನದೇ ನಿಷ್ಠೆಯಿಂದ ಕೆಲಸ ಮಾಡಬೇಕು. ಮನೆಮನೆಗೂ ತೆರಳಿ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಬೇಕೆಂದು ಕರೆ ನೀಡಿದರು. ಪಕ್ಷದ ಮುಖಂಡ ಡಾ.ಎಚ್.ಎಸ್. ಶಶಿಧರ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪಿವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಪ್ರತಿಯೊಬ್ಬ ಕಾರ್ಯಕರ್ತ ಸಂಕಲ್ಪ ಮಾಡಬೇಕೆಂದು ತಿಳಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಕೋಡಿಲ್ಲಪ್ಪ, ಹೊಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಗೌಡ ಹಾಗೂ ಪಕ್ಷದ ಮುಖಂಡರಾದ ಗೋವಿಂದ ರೆಡ್ಡಿ, ಸುಬ್ಬಣ್ಣ, ರಾಜ ರಾವ್, ರಮೇಶ್, ಶ್ರೀ ಆನಂದ್,ರಂಗಸ್ವಾಮಿಗೌಡ, ರಂಗನಾಥ್, ರಾಮಕೃಷ್ಣಪ್ಪ, ಮೋಹನ್,ನವೀನ್, ಮಹೇಶ್, ಪ್ರಕಾಶ್,ರಾಜಕುಮಾರ್ ನಾಯ್ಕ್, ಗಿರೀಶ್ ನಾಯ್ಕ್, ನಾಗಭುಷನ್, ಸಿದ್ದಲಿಂಗಪ್ಪ,ಶ್ರೀನಿವಾಸ್, ಕುಮಾರ್, ಶ್ರೀಕಂಠಪ್ಪ, ಪ್ರಸನ್ನ,ಚಂದ್ರಶೇಖರ್, ಅಶ್ವತಪ್ಪ, ಲಕ್ಷ್ಮೀಪತಿ, ಬೂತನಾರಾಯಣ್,ಮಮತಾ, ನರಸಮ್ಮ ಹಾಗೂ ಇನ್ನಿತರರು ಭಾಗಿಯಾಗಿದ್ದರು.