ಮೋದಿ ಮತ್ತೇ ಪ್ರಧಾನಿ ಆಗಬೇಕು: ರಾಮಚಂದ್ರ

| Published : Mar 24 2024, 01:31 AM IST

ಸಾರಾಂಶ

ಇಡೀ ವಿಶ್ವದಲ್ಲೇ ಭಾರತ ನಂಬರ್‌ ಒನ್ ದೇಶ ಆಗಬೇಕಾದರೆ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಇಡೀ ವಿಶ್ವದಲ್ಲೇ ಭಾರತ ನಂಬರ್‌ ಒನ್ ದೇಶ ಆಗಬೇಕಾದರೆ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್‌ಸಿ ಮೋರ್ಚಾದ ಪದಗ್ರಹಣ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದ ಅವರು,ದೇಶ ಬಲಿಷ್ಠವಾಗಬೇಕಾದರೆ, ದೇಶ ವಿಶ್ವದಲ್ಲಿ ನಂಬರ್‌ ಒನ್‌ ಆಗಬೇಕಾದರೆ ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಬೇಕೆಂದರು.

ವಿರೋಧಪಕ್ಷದವರು ಬಿಜೆಪಿ ಸಂವಿಧಾನ ವಿರೋಧಿ ಎಂದು ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ನಿಜವಾದ ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್. ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಆದರೆ ನರೇಂದ್ರಮೋದಿಯವರು ಪ್ರಧಾನಿಯಾದ ಮೇಲೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಗೌರವಾರ್ಥ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪಕ್ಷದ ಎಲ್ಲ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು ಮನೆಮನೆಗೆ ತಿಳಿಸಿಕೊಡುವ ಮೂಲಕ ಪಕ್ಷದ ಅಭ್ಯರ್ಥಿ ಎಸ್.ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ನರೇಂದ್ರಮೋದಿಯವರು ಮತ್ತೆ ಪ್ರಧಾನಿಯಾಗಿಸಲು ಕೊಡುಗೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೂಡಹಳ್ಳಿ ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಮೋರ್ಚಾವನ್ನು ತಳಮಟ್ಟದಲ್ಲಿ ಸಂಘಟಿಸಲು. ಒತ್ತು ನೀಡಲಾಗಿದ್ದು, ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಬಾಲರಾಜು ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ಅಧಿಕಾರ ಹಸ್ತಾಂತರ: ನಿಕಟಪೂರ್ವ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ನೂತನ ಅಧ್ಯಕ್ಷರಾದ ಮೂಡಳ್ಳಿಮೂರ್ತಿ ಅವರಿಗೆ ಪಕ್ಷದ ಧ್ವಜ ಕೊಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ಸಭೆಯಲ್ಲಿ ಚಾಮುಲ್ ಅಧ್ಯಕ್ಷ ವೈ.ವಿ.ನಾಗೇಂದ್ರ, ಪ್ರಧಾನ. ಕಾರ್ಯದರ್ಶಿ ಮೂಡ್ನಾಕೂಡುಪ್ರಕಾಶ್, ಬಿಜೆಪಿ ಎಸ್‌ಸಿ ಮೋರ್ಚಾದ ಉಸ್ತುವಾರಿ ಮಲ್ಲೇಶ್, ಚುನಾವಣಾ ಸಂಚಾಲಕ ಸುಂದ್ರಪ್ಪ, ಓಬಿಸಿ ಮೋರ್ಚಾದ ರಾಜ್ಯ ಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ಮಾಜಿ ಅಧ್ಯಕ್ಷ ಆರ್.ಸುಂದರ್, ಮುಖಂಡ ಕಪಿನಿನಾಯಕ, ಉಪಾಧ್ಯಕ್ಷರಾದ ಬೂದಿತಿಟ್ಟು ರಾಜೇಂದ್ರ, ಮುತ್ತಿಗೆಮೂರ್ತಿ ಇತರರು ಭಾಗವಹಿಸಿದ್ದರು.