ಕೊಟ್ಟ ಮಾತು ಉಳಿಸಿಕೊಳ್ಳ ಮೋದಿ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Apr 30 2024, 02:03 AM IST

ಕೊಟ್ಟ ಮಾತು ಉಳಿಸಿಕೊಳ್ಳ ಮೋದಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪುಲ್ವಾಮ ವಿಚಾರ ಪ್ರಸ್ತಾಪ ಮಾಡಿದ್ರು. ದೇಶದ ರಕ್ಷಣೆಗೆ ಮೋದಿ ಮಾತ್ರ ಎಂದುಕೊಂಡು ಜನ ಮತ ನೀಡಿದ್ರು. ಈಗ ಯಾವುದೇ ಭಾವನಾತ್ಮಕ ವಿಚಾರವಿಲ್ಲ.

ಕೂಡ್ಲಿಗಿ: ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳಲ್ಲಿ ಆರ್ಥಿಕ, ಸಾಮಾಜಿಕವಾಗಿ ಏನು ಅಭಿವೃದ್ಧಿ ಮಾಡಿದ್ದಾರೆ? ಕೊಟ್ಟ ಮಾತು ಮೋದಿ ಉಳಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರ ಮತಯಾಚಿಸಿದ ಅವರು, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು 28ರಲ್ಲಿ 25 ಸ್ಥಾನ ಗೆದ್ದರೂ ಅದು ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡಿ ಗೆದ್ದಿದ್ದಾರೆ ಎಂದರು.

ಪುಲ್ವಾಮ ವಿಚಾರ ಪ್ರಸ್ತಾಪ ಮಾಡಿದ್ರು. ದೇಶದ ರಕ್ಷಣೆಗೆ ಮೋದಿ ಮಾತ್ರ ಎಂದುಕೊಂಡು ಜನ ಮತ ನೀಡಿದ್ರು. ಈಗ ಯಾವುದೇ ಭಾವನಾತ್ಮಕ ವಿಚಾರವಿಲ್ಲ. ಹೀಗಾಗಿ ಸುಳ್ಳು ಹೇಳ್ತಿದ್ದಾರೆ. ಕರ್ನಾಟಕ ಬಗ್ಗೆ ಹೆಚ್ಚು ಕೇಂದ್ರೀಕರಿಸಿದ್ದಾರೆ. ಎಲ್ಲ ಸಮಾವೇಶದಲ್ಲಿ ಮೋದಿ ಸುಳ್ಳು ಹೇಳ್ತಿದ್ದಾರೆ ಎಂದರು.

ಸುಪ್ರೀಂ ಕೋರ್ಟ್ ಛೀಮಾರಿ:

ಕೇಂದ್ರದಿಂದ ಬರ ಪರಿಹಾರ ನೀಡಿರಲಿಲ್ಲ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ಶೇ.10ರಷ್ಟು ಮಾತ್ರ ಬರದ ಹಣ ನೀಡಿದ್ದಾರೆ. ದೇಶದ ಜನರಿಗೆ ಮೋದಿ ಖಾಲಿ ಚೊಂಬು ನೀಡಿದ್ದಾರೆ. ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ಬೊಮ್ಮಾಯಿ, ಮಿಸ್ಟರ್ ಆಶೋಕ... ಬಜೆಟ್ ಪುಸ್ತಕ ತೆಗೆದು ನೋಡಿ, ಕಾಂಗ್ರೆಸ್ ಧರ್ಮ, ಜಾತಿ ಹೆಸರಲ್ಲಿ ವಿಂಗಡಣೆ ಮಾಡುವ ಪಕ್ಷವಲ್ಲ ಎಂದರು.

ಎಲ್ಲ ಕಾಲದಲ್ಲಿಯೂ ಆರ್‌ಎಸ್‌ಎಸ್‌ ಮೀಸಲಾತಿ ವಿರೋಧಿಸಿದೆ. ಬಿಜೆಪಿ ಮೀಸಲಾತಿ ಪರ ಇಲ್ಲ. ಸಂವಿಧಾನ ಬದಲಾವಣೆ ಮಾಡೋರಿದ್ದಾರೆ. ಮೋಹನ್‌ ಭಾಗವತ್ ಕೂಡ ಮೀಸಲಾತಿ ಬಗ್ಗೆ ಸುಳ್ಳು ಹೇಳ್ತಿದ್ದಾರೆ.‌ ಮೋದಿ ಸಂವಿಧಾನದ ವಿರುದ್ಧ ಮಾತನಾಡ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧ ಯಾರೂ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಚೆನ್ನಮ್ಮ, ಶಿವಾಜಿಗೆ ಗೌರವ:

ಬಿಜೆಪಿಯವರು ಶಿವಾಜಿ ಮಹಾರಾಜರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನ ಮಾಡಿದ್ದಾರೆ. ನಾನು ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಿಸಲು ಆದೇಶ ಮಾಡಿದೆ ಎಂದು ಹೇಳಿದರು.

ಶ್ರೀರಾಮುಲು ಆರೋಗ್ಯ ಮಂತ್ರಿಯಾಗಿದ್ದಾಗ ಕೋವಿಡ್ ನಿರ್ವಹಣೆ ಮಾಡಲಿಲ್ಲ ಅಂತ ಅವರನ್ನು ಕಿತ್ತು ಹಾಕಿ ಸುಧಾಕರ್ ಅವರನ್ನು ಆರೋಗ್ಯ ಸಚಿವರನ್ನಾಗಿ ಮಾಡಿದ್ರು. ಸುಧಾಕರ್ ಸಹ ಕೋವಿಡ್ ಹೆಸರಲ್ಲಿ ಭ್ರಷ್ಟಾಚಾರ ಮಾಡಿದರು ಎಂದು ಸಿದ್ದರಾಮಯ್ಯ ಆರೋಪಿಸಿದರು.