ಸಾರಾಂಶ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದನ್ನು, ಮತ್ತೆ ನಾವು ಇಂದಿರಾ ಗಾಂಧಿ ಅವರ ಕಾಲದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಳೆದುಕೊಂಡೆವು, ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡಿ, ಕಾಂಗ್ರೆಸ್ ಪಕ್ಷ ಭಷ್ಟಾಚಾರ ಆಡಳಿತ ಹಾಗೂ ಜನವಿರೋಧಿ ಅಡಳಿತಕ್ಕೆ ಮುಂದಾದಾಗ ಯುವಕರು ಸೇರಿದಂತೆ ದೇಶದ ತುಂಬ ಜನದಂಗೆ ಎದ್ದರು. ಮೋದಿ ಅವರ 11 ವರ್ಷದ ಆಡಳಿತದಲ್ಲಿ ವಿಶ್ವ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ ಎಂದ ಸಂಸದ ಬಿ. ವೈ ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದನ್ನು, ಮತ್ತೆ ನಾವು ಇಂದಿರಾ ಗಾಂಧಿ ಅವರ ಕಾಲದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಳೆದುಕೊಂಡೆವು, ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡಿ, ಕಾಂಗ್ರೆಸ್ ಪಕ್ಷ ಭಷ್ಟಾಚಾರ ಆಡಳಿತ ಹಾಗೂ ಜನವಿರೋಧಿ ಅಡಳಿತಕ್ಕೆ ಮುಂದಾದಾಗ ಯುವಕರು ಸೇರಿದಂತೆ ದೇಶದ ತುಂಬ ಜನದಂಗೆ ಎದ್ದರು. ಮೋದಿ ಅವರ 11 ವರ್ಷದ ಆಡಳಿತದಲ್ಲಿ ವಿಶ್ವ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ ಎಂದ ಸಂಸದ ಬಿ. ವೈ ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಸೋಮವಾರ ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಮೋದಿ ಸರ್ಕಾರದ 11 ನೇ ವರ್ಷ, ವಿಕಸಿತ ಭಾರತದ ಅಮೃತ ಕಾಲ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದ ಸವಾಲುಗಳನ್ನು ಎದುರಿಸುವ ರೀತಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ನೀಡುತ್ತಿರುವ ಯೋಜನೆಗಳು, ದೇಶದ ಭದ್ರತೆ, ರಾಜತಾಂತ್ರಿಕ ನಿಪುಣತೆ, ಶೈಕ್ಷಣಿಕ ಪ್ರಗತಿ, ತೆರಿಗೆ ಸೋರಿಕೆ ತಡೆ, ತಂತ್ರಜ್ಞಾನಕ್ಕೆ ಆಧ್ಯತೆ, ಮಹಿಳಾ ಸಬಲೀಕರಣಕ್ಕೆ ಒತ್ತು, ಸರ್ವಧರ್ಮಗಳಿಗೂ ಆಧ್ಯತೆ, ಎಲ್ಲಾ ಜಾತಿ ಧರ್ಮದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಮೂಲಕ ಸ್ವತಂತ್ರ ನಂತರದಲ್ಲಿ ಭಾರತ ಕಂಡ ಅತ್ಯಂತ ದಕ್ಷ ಪ್ರಧಾನಿ ನರೇಂದ್ರ ಮೋದಿ ಎಂದು ಶ್ಲಾಘನೆ ಮಾಡಿದರು.ಸೊರಬ, ಆನವಟ್ಟಿ, ಶಿರಾಳಕೊಪ್ಪಕ್ಕೆ ಶರವಾತಿ ನದಿಯಿಂದ ಕುಡಿಯುವ ನೀರು ಒದಗಿಸುವ ಯೋಜನೆ ಕೇಂದ್ರ ಸರ್ಕಾರದ ಶೇ60 ರಾಜ್ಯದ ಸರ್ಕಾರ ಶೇ 40 ಅನುದಾನದಲ್ಲಿ ಯೋಜನೆ ಸಿದ್ದವಾಗಿ ಟೆಂಡರ್ ಆಗಿದೆ, ಆದಷ್ಟು ಬೇಗ ಕಾಮಗಾರಿ ಮುಗಿಸಿ ನೀರು ಒದಗಿಸಲಾಗುವುದು ಎಂದರು.
ಮಡಿವಾಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ. ತಲ್ಲೂರು ಮಾತನಾಡಿ, ಮೋದಿ ಅವರಿಂದ ಭಾರತ ವಿಕಸಿತ ಆದಂತೆ, ಸಂಸದ ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶ್ರಮದಿಂದ ಶಿವಮೊಗ್ಗ ಜಿಲ್ಲೆ ವಿಕಸಿತವಾಗಿದೆ. ಆದರೆ ನಂಜುಂಡಪ್ಪ ವರದಿಯಂತೆ ಹಿಂದೆ ಉಳಿದಿರುವ ಸೊರಬದಲ್ಲಿ ಈ ಇಬ್ಬರ ಶ್ರಮದಿಂದ ಮೂಡಿ, ಮೂಗುರು ಏತ ನೀರಾವರಿ, ಕೆಶಿಪ್ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ.ಬಿಜೆಪಿ ಆಡಳಿತದಲ್ಲಿ ನಿರ್ಮಾಣ ಮಾಡಿರುವ ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಉದ್ಘಾಟನೆ ಮಾಡಲು ಸೊರಬ ತಾಲೂಕಿನಿಂದ ಆಯ್ಕೆಯಾಗಿರುವ ಸಚಿವರಿಗೆ ಸಾಧ್ಯವಾಗಿಲ್ಲ. ಗ್ಯಾರಂಟಿಗಳ ಜಪದಲ್ಲಿ ತಾಲೂಕಿನ ಹದಗೆಟ್ಟ ರಸ್ತೆಗಳ ಗುಂಡಿ ಮುಚ್ಚಲು ಅವರಿಗೆ ಸಾದ್ಯವಾಗಿಲ್ಲ. ಬೇರೆಯವರನ್ನು ನಿಂದಿಸುವ ಮೊದಲು, ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಲಿ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮುಖಂಡರಾದ ಮೇಘರಾಜ್, ಕೊಟ್ರಯ್ಯ ಸ್ವಾಮಿ, ಪ್ರಕಾಶ ತಲಕಾಲುಕೊಪ್ಪ, ಗೀತಾ ಮಲ್ಲಿಕಾರ್ಜುನ, ಬಿ.ಎಚ್ ಕೃಷ್ಣಮೂರ್ತಿ, ಹೊನ್ನಪ್ಪ ಎಣ್ಣೆಕೊಪ್ಪ, ಬಸವನ ಗೌಡ ಮಲ್ಲಾಫುರ, ಕೆರಿಯಪ್ಪ, ಸುಧಾ ಶಿವಪ್ರಸಾದ್ ಕುಸದ್, ರಾಜು ಬಡಗಿ, ವಿಶ್ವನಾಥ, ವಿನಯ್ ಗುತ್ತೇರ್, ಮಂಜಪ್ಪ ಹುರುಳಿಕೊಪ್ಪ ಇದ್ದರು.