ಸಾರಾಂಶ
ಮೊಗೇರ ಬಾಂಧವರಿಗೆ ಮಾತ್ರ ಆಯೋಜಿಸಲಾಗುತ್ತಿದ್ದು, ಒಟ್ಟು 40 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯದ ಶುಲ್ಕ 3,000 ರು. ನಿಗದಿ ಪಡಿಸಲಾಗಿದೆ. ಕ್ರೀಡಾಕೂಟದ ವಿನ್ನರ್ಸ್ ತಂಡಕ್ಕೆ 33,333 ರು. ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 22,222 ರು. ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ವತಿಯಿಂದ ತೃತೀಯ ಬಾರಿಗೆ ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಪಂದ್ಯಾವಳಿ ಮೇ 17 ಹಾಗೂ18 ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆಯಲಿದೆ.ಮೊಗೇರ ಬಾಂಧವರಿಗೆ ಮಾತ್ರ ಆಯೋಜಿಸಲಾಗುತ್ತಿದ್ದು, ಒಟ್ಟು 40 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯದ ಶುಲ್ಕ 3,000 ರು. ನಿಗದಿ ಪಡಿಸಲಾಗಿದೆ. ಕ್ರೀಡಾಕೂಟದ ವಿನ್ನರ್ಸ್ ತಂಡಕ್ಕೆ 33,333 ರು. ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 22,222 ರು. ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.
ಕ್ರೀಡಾಕೂಟವನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಗಣೇಶ್ ಪಿ.ಸಿ. ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜ ಅಧ್ಯಕ್ಷ ರಾಮು ಪಿ.ಎನ್., ಕೊಡಗು ಮೊಗೇರ ಜಿಲ್ಲಾಧ್ಯಕ್ಷ ಜನಾರ್ದನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರವಿ ಪಿ.ಎಂ., ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಹಾಗೂ ಸಮಾಜದ ಗೌರವ ಅಧ್ಯಕ್ಷ ಗೌತಮ್, ಶಿವಪ್ಪ ಅಕ್ಕಮ್ಮಮೂರ್ತಿ, ಸದಾನಂದ ಮಾಸ್ಟರ್, ವಸಂತ್, ಪಿ.ಕೆ. ಚಂದ್ರು, ದಾಮೋದರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ತಂಡಗಳು ನೋಂದಣಿಗೆ ರಾಮು 8792100317, ಗಣೇಶ್ 9591822879, ಶಿವರಾಜ್ 9035821141, ವಿಶ್ವ 734906026 ಅವರನ್ನು ಸಂಪರ್ಕಿಸಬಹುದು.