ದೊಡ್ಡಬಳ್ಳಾಪುರ: ಇಸ್ಲಾಂ ಧರ್ಮದ ಪ್ರವಾದಿ ಹಜರತ್ ಮೊಹಮದ್ ಪೈಗಂಬರ್ ಅವರ ಜನ್ಮದಿನವನ್ನು ಈದ್ ಮಿಲಾದ್ ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಮಸೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಶೇಷ ಪ್ರಾರ್ಥನೆ ಹಾಗೂ ಪವಿತ್ರ ಖುರಾನ್ ಪಠಣ ನಡೆಯಿತು
ದೊಡ್ಡಬಳ್ಳಾಪುರ: ಇಸ್ಲಾಂ ಧರ್ಮದ ಪ್ರವಾದಿ ಹಜರತ್ ಮೊಹಮದ್ ಪೈಗಂಬರ್ ಅವರ ಜನ್ಮದಿನವನ್ನು ಈದ್ ಮಿಲಾದ್ ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಮಸೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಶೇಷ ಪ್ರಾರ್ಥನೆ ಹಾಗೂ ಪವಿತ್ರ ಖುರಾನ್ ಪಠಣ ನಡೆಯಿತು.
ಸಂದೇಶ ನೀಡಿರುವ ಗಣ್ಯರು, ಶಾಂತಿ-ಸಹಬಾಳ್ವೆ ಮತ್ತು ಸಹೋದರತ್ವದ ಮಹತ್ವ ಸಾರಿದ ಇಸ್ಲಾಂ ಧರ್ಮದ ಸಂಸ್ಥಾಪಕರೂ ಆಗಿರುವ ಮೊಹಮ್ಮದ್ ಪೈಗಂಬರ್ ಅವರ ಜೀವನಾದರ್ಶ ಇಡೀ ಜಗತ್ತಿಗೆ ದಾರಿದೀಪವಾಗಿದೆ. ಸಹನೆ ಮತ್ತು ಸಹೋದರತ್ವದ ಮೂಲಕ ಇಡೀ ವಿಶ್ವದ ಜನತೆಗೆ ಮಾರ್ಗದರ್ಶನ ಮಾಡಿದ ಇಸ್ಲಾಂ ಧರ್ಮಗುರುಗಳ ದಿನವಾದ ಇಂದು ಈದ್-ಮಿಲಾದ್ ಆಚರಿಸುತ್ತಿರುವ ಎಲ್ಲ ಮುಸ್ಲಿಂ ಬಾಂಧವರಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.ಮೆರವಣಿಗೆ: ಈದ್‌ಮಿಲಾದ್ ಹಬ್ಬದ ಅಂಗವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ಮೆರವಣಿಗೆ ನಡೆಯಿತು. ಇಸ್ಲಾಂ ಧರ್ಮದ ಮಹತ್ವ ಸಾರುವ ಸ್ತಬ್ಧಚಿತ್ರಗಳು, ಮೆಕ್ಕಾ ಮಸೀದಿ, ಟಿಪ್ಪು ಸುಲ್ತಾನ್, ಪ್ರವಾದಿ ಮೊಹ್ಮದರ ಸಂದೇಶಗಳನ್ನು ಹೊತ್ತ ಟ್ಯಾಬ್ಲೋಗಳು ಗಮನ ಸೆಳೆದವು. ದೊಡ್ಡಬಳ್ಳಾಪುರ ನಗರದ ಮಕ್ಕ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆ ದೊಡ್ಡಬಳ್ಳಾಪುರದ ಮುಖ್ಯ ರಸ್ತೆಯಿಂದ ಮುಖ್ಯರಸ್ತೆ ಹಾಗೂ ಚಿಕ್ಕಪೇಟೆ ಮುಖಾಂತರ ತಾಲೂಕು ಕಚೇರಿ ರಸ್ತೆ ಮೂಲಕ ಇಸ್ಲಾಂಪುರ ಮಕ್ಕ ಮಸೀದಿವರೆಗೆ ನಡೆಯಿತು.
26ಕೆಡಿಬಿಪಿ4-ದೊಡ್ಡಬಳ್ಳಾಪುರದಲ್ಲಿ ಈದ್‌ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಗಮನ ಸೆಳೆದವು.