ರೈತರು ಆಧುನಿಕ ತಂತ್ರಜ್ಞಾನ ಬಳಸಿ ಎಂದ ಮೋಹನ್‌ ಕುಮಾರ್

| Published : Aug 01 2025, 11:45 PM IST

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನಲ್ಲಿ ರೈತರು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುವತ್ತ ಗಮನಹರಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಮೋಹನ್‌ ಕುಮಾರ್ ತಿಳಿಸಿದರು. . ರೈತರು ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಗಳನ್ನು ಅನುಸರಣೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿಯನ್ನೂ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಡ್ರೋನ್‌ ಯೋಜನೆಯಿಂದ ಕಾರ್ಮಿಕ ಸಮಸ್ಯೆಯನ್ನು ನೀಗಿಸಬಹುದಾಗಿದೆಯಲ್ಲದೆ ಹಣದ ಉಳಿತಾಯವೂ ಆಗುತ್ತದೆ. ಒಂದು ಎಕರೆ ಜಮೀನು ಪ್ರಯೋಜನ ಇರುವವರೂ ಸಹ ಇದರ ಪಡೆಯಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನಲ್ಲಿ ರೈತರು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುವತ್ತ ಗಮನಹರಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಮೋಹನ್‌ ಕುಮಾರ್ ತಿಳಿಸಿದರು.

ತಾಲೂಕಿನ ಬರಗೂರು ಗ್ರಾಮ ವ್ಯಾಪ್ತಿಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ.ರವಿ ಅವರ ತೋಟದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಆಯೋಜಿಸಿದ್ದ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಮತ್ತು ಡಿಎಪಿ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಚೀಲ ಯೂರಿಯಾ ಬಳಕೆ ಮಾಡುವ ಬದಲು ಅಷ್ಟೇ ಪರಿಣಾಮಕಾರಿಯಾದ ೫೦೦ ಎಂಎಲ್ ನ್ಯಾನೋ ಯೂರಿಯಾವನ್ನು ಬಳಕೆ ಮಾಡಬಹುದು. ಅಂತೆಯೇ ಡಿಎಪಿ ಕೂಡ ನ್ಯಾನೋ ರೂಪದಲ್ಲಿ ದೊರೆತಿದ್ದು, ಅದರ ಸದುಪಯೋಗ ದೊರೆಯುವ ಚೀಲದಲ್ಲಿ ಮಾಡಿಕೊಳ್ಳಬೇಕು. ಯೂರಿಯಾವನ್ನು ಯಥೇಚ್ಛವಾಗಿ ಬಳಕೆ ಮಾಡುವುದರಿಂದ ಮಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದಲ್ಲದೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ನ್ಯಾನೋ ಪರಿಣಾಮಕಾರಿಯಗಲಿದೆ ಎಂದರು. ರೈತರು ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಗಳನ್ನು ಅನುಸರಣೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿಯನ್ನೂ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಡ್ರೋನ್‌ ಯೋಜನೆಯಿಂದ ಕಾರ್ಮಿಕ ಸಮಸ್ಯೆಯನ್ನು ನೀಗಿಸಬಹುದಾಗಿದೆಯಲ್ಲದೆ ಹಣದ ಉಳಿತಾಯವೂ ಆಗುತ್ತದೆ. ಒಂದು ಎಕರೆ ಜಮೀನು ಪ್ರಯೋಜನ ಇರುವವರೂ ಸಹ ಇದರ ಪಡೆಯಬಹುದು ಎಂದು ಹೇಳಿದರು.

ತಾಲೂಕು ರೈತರ ಸಂಘದ ಅಧ್ಯಕ್ಷ ಸಿ.ಜಿ.ರವಿ ಮಾತನಾಡಿ, ಡ್ರೋನ್‌ ಬಳಕೆ ಮಾಡಿಕೊಳ್ಳುವುದರಿಂದ ಹಣ ಮತ್ತು ಸಮಯದ ಉಳಿತಾಯವಾಗಲಿದೆ. ರೈತರು ಹೊಸ ಹೊಸ ಪದ್ಧತಿಗಳನ್ನು ಅನುಸರಿಸುವುದು ಒಳ್ಳೆಯದು ಎಂದು ತಿಳಿಸಿದರು.

ರೈತ ಸಂಘದ ಮುಖಂಡ ಮೀಸೆ ಮಂಜಣ್ಣ, ಶ್ರೀನಿವಾಸ್‌ ಶೆಟ್ಟಿಹಳ್ಳಿ, ಪ್ರವೀಣ್ ಅನ್ನು ಮತ್ತಿತರರು ಹಾಜರಿದ್ದರು.