ಪ್ರಿಯಕರನಿಂದಲೇ ಮೋಳೆ ಸೋನಾಕ್ಷಿ ಕೊಲೆ

| Published : Jun 23 2025, 11:48 PM IST

ಸಾರಾಂಶ

ಹಳೇ ಹಂಪಾಪುರ ಗ್ರಾಮದ ಸುವರ್ಣಾವತಿ ನದಿ ದಡದ ಮಣ್ಣಿನಲ್ಲಿ ಹೊತಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಪೊಲೀಸರು ತಾರ್ಕಿಕ ಅಂತ್ಯ ಕಂಡಿದ್ದು ಮಹಿಳೆ ಕೊಲೆಗೆ ತ್ರಿಕೋನ ಸಂಬಂಧ ಕಾರಣವಾಗಿದೆ ಎಂದು ತಿಳಿಸಿದ್ದಾರೆ.‌

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣಾವತಿ ನದಿ ದಡದ ಮಣ್ಣಿನಲ್ಲಿ ಹೊತಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಪೊಲೀಸರು ತಾರ್ಕಿಕ ಅಂತ್ಯ ಕಂಡಿದ್ದು ಮಹಿಳೆ ಕೊಲೆಗೆ ತ್ರಿಕೋನ ಸಂಬಂಧ ಕಾರಣವಾಗಿದೆ ಎಂದು ತಿಳಿಸಿದ್ದಾರೆ.‌ಸೋದರ ಮಾವನನ್ನು ಮದುವೆಯಾಗಿದ್ದರೂ ವಿವಾಹ ಸಂಬಂಧದಲ್ಲಿ ವೈಮನಸ್ಸು ಮೂಡಿ ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದ ಮಹಿಳೆಯನ್ನು ಪ್ರಿಯಕರ ಶಾಶ್ವತವಾಗಿ ಮಣ್ಣು ಮಾಡಿ ಕೊನೆಗೆ ಪೊಲೀಸರ ಕೈಲಿ ಸಿಕ್ಕಿಬಿದ್ದಿದ್ದಾನೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಕಳೆದ ಗುರುವಾರ ರಾತ್ರಿ ಶವದ ಮುಂಗೈ ಕಾಣಿಸಿಕೊಂಡ ಪ್ರಕರಣದಲ್ಲಿ ಮೃತಪಟ್ಟವಳ ಗುರುತನ್ನು ಪತ್ತೆಹಚ್ಚಿದ ಪೊಲೀಸರು ಇದರ ಹಿಂದೆ ಪ್ರಿಯಕರನ ಕೈವಾಡವನ್ನು ಗುರುತಿಸಿದ್ದಾರೆ. ಕೊಳ್ಳೇಗಾಲದ ಮೋಳೆ ಬಡಾವಣೆಯ ನಿವಾಸಿ ಸೋನಾಕ್ಷಿ (29) ಕೊಲೆಯಾಗಿದ್ದು ಇದೇ ಗ್ರಾಮದ ನಿವಾಸಿ ಮಾದೇಶ ಅಲಿಯಾಸ್ ಮಹೇಶ್ (38) ಕೊಲೆ ಮಾಡಿ ಮಣ್ಣು ಮಾಡಿದ್ದ ಪ್ರಿಯಕರ. ಸೋನಾಕ್ಷಿಗೆ ಇಬ್ಬರು ಮಕ್ಕಳಿದ್ದು ಸೋನಾಕ್ಷಿ ಗಂಡನ ಜೊತೆ ಆಗಾಗ ಜಗಳ ಮಾಡಿಕೊಂಡು ಗಂಡನನ್ನು ಬಿಟ್ಟು ನಾಪತ್ತೆಯಾಗುತ್ತಿದ್ದಳು. ನಾಪತ್ತೆಯಾದ ಬಗ್ಗೆ ಪತಿ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ 2-3 ಬಾರಿ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಗಂಡನ ಜೊತೆ ಕಳುಹಿಸಿ ಠಾಣೆಯಲ್ಲಿ ನ್ಯಾಯ ಪಂಚಾಯತಿ ನಡೆದು ಗಂಡನ ಜೊತೆ ಬಾಳುತ್ತೇನೆ ಎಂದು ಹೋಗುತ್ತಿದ್ದಳು. ಸೋನಾಕ್ಷಿ ಕಳೆದ ಒಂದು ತಿಂಗಳಿಂದ ಮತ್ತೆ ಗಂಡನ ಜೊತೆ ಜಗಳ ಮಾಡಿಕೊಂಡು ಒಬ್ಬಳೇ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದು ಈಕೆಯ ಮನೆಯವರಿಗೂ ಸಹ ತಿಳಿದಿತ್ತು ಇದಾದ ನಂತರ ಸೋನಾಕ್ಷಿ ಮತ್ತೆ ನಾಪತ್ತೆ ಆದಳು ನಾಪತ್ತೆಯಾಗಿರುವ ವಿಷಯ ಈಕೆಯ ಗಂಡನಿಗೆ ಹಾಗೂ ಕುಟುಂಬಸ್ಥರಿಗೆ ತಿಳಿದಿದ್ದು ಆದರೆ ಯಾರು ಸಹ ದೂರು ನೀಡಿರಲಿಲ್ಲ.ಪ್ರಿಯಕರನಿಂದಲೇ ಕೊಲೆಯಾದ ಮಹಿಳೆ:ಮತ್ತೊಬ್ಬನ ಜೊತೆ ಲವ್ ಆಗಿದ್ದಕ್ಕೆ ಮರ್ಡರ್‌ಗೆ ಮಹೂರ್ಥ: ಹಳೇ ಹಂಪಾಪುರದಲ್ಲಿ ಶವ ಸಿಕ್ಕ ಬಳಿಕ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ ವೇಳೆ ಸಿಕ್ಕ ಶವ ಸೋನಾಕ್ಷಿಯದ್ದೇ ಎಂದು ಖಚಿತಪಡಿಸಿಕೊಂಡ ಪೊಲೀಸರು ಈಕೆ ಮನೆ ಬಿಟ್ಟು ಹೋಗುತ್ತಿದ್ದಕ್ಕೆ ಪ್ರಿಯಕರ ಮಾದೇಶನೇ ಕಾರಣ ಎಂದು ತಿಳಿದುಬಂದಿತ್ತು. ಸೋನಾಕ್ಷಿ ತನ್ನ ಗಂಡನ ಜತೆಗೆ ಬಾಳದೆ ಮತ್ತೆ ಕಾಣೆಯಾಗಿ ಬಸ್ತೀಫುರದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು.ಮೃತ ಸೋನಾಕ್ಷಿಗೆ ಇನ್ನೋರ್ವನ ಜೊತೆ ಸಂಬಂಧ ಇದ್ದಿದ್ದು ಗೊತ್ತಾಗಿ ಜೂ.13ರಂದು ಸೋನಾಕ್ಷಿ ಮತ್ತು ಮಾದೇಶನ ನಡುವೆ ಗಲಾಟೆಯಾಗಿದೆ‌. ಜೂ.14ರಂದು ಗಲಾಟೆ ತಾರಕಕ್ಕೇರಿ ನೀನು ಒಂಟಿಯಾಗಿ ಇರುವುದು ಬೇಡ ನಿನ್ನಿಂದ ನನ್ನ ಸಂಸಾರ ಹಾಳಾಗುತ್ತಿದೆ, ನಿನ್ನನ್ನು ನಿನ್ನ ಗಂಡನ ಮನೆಗೆ ಬಿಡುತ್ತೇನೆ ಬಾ ಎಂದು ಸೋನಾಕ್ಷಿಯನ್ನು ಬೈಕಿನಲ್ಲಿ ಕರೆದೊಯ್ದು ಹಳೇ ಹಂಪಾಪುರದ ನದಿ ದಡದ ಬಳಿ ಸೋನಾಕ್ಷಿಯನ್ನು ಹೊಡೆದು ಸಾಯಿಸಿದ್ದಾನೆ. ಮಾದೇಶ ಎತ್ತಿನಗಾಡಿಯಲ್ಲಿ ಮರಳು ಸಾಗಿಸುತ್ತಿದ್ದ ಕೆಲಸ ಮಾಡುತ್ತಿದ್ದರಿಂದ ಮಾವಟಿ, ದಬ್ಬಿಗೆ ಹಾಗೂ ಇತರೆ ಸಲಾಕೆಗಳಿಂದ ಹಳ್ಳ ತೆಗೆದು ಮಣ್ಣಿನಲ್ಲಿ ಸೋನಾಕ್ಷಿಯನ್ನು ಹೂತಿದ್ದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಈ ಎಲ್ಲದರ ನಡುವೆ ಸೋನಾಕ್ಷಿ ಕುಟುಂಬಸ್ಥರು, ಆರೋಪಿ ಮಾದೇಶನ ಮನೆ ಮೇಲೆ ದಾಳಿ ಮಾಡಿ ಮಾಡಿದ್ದಾರೆ. ಸೋನಾಕ್ಷಿಯನ್ನು ಕೊಂದನೆಂದು ಸಂಬಂಧಿಕರು ಕುಪಿತಗೊಂಡು ಏಕಾಏಕಿ ಮನೆ ಮೇಲೆ ದಾಳಿ ಮಾಡಿದ್ದು ಹೆಂಚುಗಳು, ಚಾವಣಿ, ಬಾಗಿಲು ಜಖಂಗೊಂಡಿದೆ‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಯಾರೂ ದೂರು ಕೊಡದಿದ್ದರಿಂದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಸುಮುಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋನಾಕ್ಷಿ ಕೊಲೆ ಪ್ರಕರಣಕ್ಕೆ ತ್ರಿಕೋನ ಸಂಬಂಧ ಕಾರಣ ಎಂಬುದು ದೃಢವಾಗಿದೆ. ಮಾದೇಶ, ಜೈಲುಪಾಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೋನಾಕ್ಷಿ ಮನೆ ಮೇಲೆ ಮೃತರ ಕುಟುಂಬಸ್ಥರು ದಾಳಿ

ಮಹಿಳೆ ಕೊಂದು ಮಣ್ಣು ಮಾಡಿದ್ದ ಪ್ರಕರಣದಲ್ಲಿ ಮೃತ ಸೋನಾಕ್ಷಿ ಕುಟುಂಬಸ್ಥರು, ಆರೋಪಿ ಮನೆ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ಕೊಳ್ಳೇಗಾಲದ ಮೋಳೆ ಗ್ರಾಮದಲ್ಲಿ ನಡೆದಿದೆ. ಸೋನಾಕ್ಷಿ ಸಂಬಂಧಿಕರು ತಮ್ಮ ಮಗಳನ್ನು ಕೊಂದನೆಂದು ಕುಪಿತಗೊಂಡು ಏಕಾಏಕಿ ಅದೇ ಗ್ರಾಮದ ಆರೋಪಿ ಮಾದೇಶ್ ಮನೆ ಮೇಲೆ ದಾಳಿ ನಡೆಸಿದ್ದು ಮಾದೇಶನ ಮನೆಯವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕುಟುಂಬಸ್ಥರ ಕೋಪಕ್ಕೆ ಎರಡು ಮನೆಗಳಿಗೆ ಹಾನಿಯಾಗಿದ್ದು ಹೆಂಚುಗಳು, ಛಾವಣಿ, ಬಾಗಿಲು ಜಖಂಗೊಂಡಿದೆ‌. ಇನ್ನು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.