ಸಾರಾಂಶ
ಜನವರಿಯಲ್ಲಿ ಇಳಿಮುಖವಾಗಿದ್ದ ಸೋಂಕು । ಇದೀಗ ನಿತ್ಯ 2-3 ಪ್ರಕರಣಗಳು ದಾಖಲು । ಜನರಲ್ಲಿ ಮೂಡಿದ ಆತಂಕ
ಕನ್ನಡಪ್ರಭ ವಾರ್ತೆ, ಬೀರೂರು.ಬೀರೂರು ವ್ಯಾಪ್ತಿಯಲ್ಲಿ ಮಂಗನ ಬಾವು (ಗದ್ದಬಾವು) ಹೆಚ್ಚಾಗಿ ಹರಡುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಎಲ್ಲೆಡೆ ಆತಂಕ ಸೃಷ್ಠಿಯಾಗಿದೆ.ಮಂಗನ ಬಾವು ಕಾಯಿಲೆಗೆ ಇಂಗ್ಲೀಷಿನಲ್ಲಿ ಮಮ್ಸ್ ಎಂದು ಸ್ಥಳೀಯವಾಗಿ ಗದ್ದಮ್ಮ ಎನ್ನುತ್ತಾರೆ. ಈ ಸೋಂಕು ಡಿಸೆಂಬರ್ ನಲ್ಲಿ ಹೆಚ್ಚಾಗಿ ಪ್ರತಿದಿನ 30-50 ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನವರಿ ನಂತರದಲ್ಲಿ ಇಳಿಮುಖಗೊಂಡಿತ್ತು. ಆದರೆ ಇದೀಗ ನಿತ್ಯ 2-3 ಪ್ರಕರಣಗಳು ದಾಖಲಾಗುತ್ತಿವೆ. ಈ ವೈರಸ್ ಗಂಟಲಿನಲ್ಲಿರುವ ಪ್ಯಾರೋಟಿಕ್ ಗ್ರಂಥಿಗಳಿಗೆ ಆಕ್ರಮಿಸಿಕೊಳ್ಳುವ ಕಾರಣ ಗಂಟಲಲ್ಲಿ ನೋವು, ಬಳಲಿಕೆ, ಜ್ವರ, ವಾಂತಿ ಹಾಗೂ ತಲೆನೋವು ಆಂಭವಾಗುತ್ತದೆ. 4-5 ದಿನಗಳವರೆಗೂ ಬಾಧಿಸುವುದಲ್ಲದೆ. ವಾರದವರೆಗೂ ದೇಹದ ಶಕ್ತಿಯನ್ನೆ ಕುಂದಿಸಿ ಜನರು ಬಳಲಿ ಬೆಂಡಾಗುವಂತೆ ಮಾಡುತ್ತದೆ.
ಪಿ.ಕೆ.ಎಸ್.ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಅರುಣ್ ಈ ಬಗ್ಗೆ ಪ್ರತಿಕ್ರಹಿಸಿ ಮಂಗನ ಬಾವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ.ಲಸಿಕೆಯು ಇಲ್ಲ. ಬದಲಾಗಿ 9ರಿಂದ 15 ತಿಂ ಗಳೊಳಗಿನ ಮಕ್ಕಳಿಗೆ ನೀಡುವ ರೋಗ ನಿರೋಧಕ ಲಸಿಕೆಯನ್ನು ತಪ್ಪದೆ ಹಾಕಿಸಬೇಕು. ಇದರಿಂದ ಮಂಗನ ಬಾವು ಹರಡುವ ಸಾಧ್ಯತೆ ಇರುವುದಿಲ್ಲ ಎಂದು ಪ್ರತಿಕ್ರಹಿಸಿದರು.ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕೆಂಚೇಗೌಡ ಪತ್ರಿಕೆಗೆ ಮಾಹಿತಿ ನೀಡಿ, ಮಮ್ಸ್ ರೋಗಕ್ಕೆ ಯಾವುದೇ ನಿರ್ಧಿಷ್ಟವಾದ ಲಸಿಕೆಗಳಿಲ್ಲ. ವಾರದವರೆಗೂ ಇದ್ದು ದೇಹದ ಶಕ್ತಿಯನ್ನು ಕುಗ್ಗಿಸಿ ಅದೇ ಹೊರಟು ಹೋಗುತ್ತದೆ.ಜ್ವರ ಸುಸ್ತುಗಳಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು ಎಂದರು.
23 ಬೀರೂರು 1ಬೀರೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗನಬಾವು ಸೋಂಕಿನಿಂದ ಬಳಲುತ್ತಿರುವ ಮಗುವನ್ನು ಮಕ್ಕಳ ತಜ್ಞ ಡಾ.ಅರುಣ್ ಪರೀಕ್ಷಿಸುತ್ತಿರುವುದು.