ರಾಮನಗರ: ಹೃದಯಾಘಾತದಿಂದ ಸಾವನ್ನಪ್ಪಿದ ವೃದ್ಧೆಯ ಪಾರ್ಥಿವ ಶರೀರವನ್ನು ಮಂಗವೊಂದು ತಬ್ಬಿಕೊಂಡು, ಮುತ್ತಿಕ್ಕಿ, ಕಣ್ಣೀರಿಟ್ಟು ಮರುಗಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ

ರಾಮನಗರ: ಹೃದಯಾಘಾತದಿಂದ ಸಾವನ್ನಪ್ಪಿದ ವೃದ್ಧೆಯ ಪಾರ್ಥಿವ ಶರೀರವನ್ನು ಮಂಗವೊಂದು ತಬ್ಬಿಕೊಂಡು, ಮುತ್ತಿಕ್ಕಿ, ಕಣ್ಣೀರಿಟ್ಟು ಮರುಗಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ.

ಚನ್ನಪಟ್ಟಣ ತಾಲೂಕು ಬಿ.ವಿ.ಹಳ್ಳಿ ವಾಸಿ ಪಾರ್ವತಮ್ಮ(85) ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಪಾರ್ಥಿವ ಶರೀರವನ್ನು ರಾಮನಗರದ ರಾಯರದೊಡ್ಡಿಯಲ್ಲಿರುವ ಮಗಳ ಮನೆಯಲ್ಲಿ ಇರಿಸಿದಾಗ ಮಂಗ ಕಣ್ಣೀರಿಟ್ಟು ರೋಧಿಸಿದೆ.

ಪಾರ್ವತಮ್ಮ ಮಗ ಮತ್ತು ಮಗಳೊಂದಿಗೆ ರಾಯರದೊಡ್ಡಿಯಲ್ಲಿ ವಾಸವಾಗಿದ್ದರು. ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ಪಾರ್ವತಮ್ಮ ಆಹಾರ ಕೊಡುತ್ತಿದ್ದರು. ನಾಲ್ಕೈದು ವರ್ಷಗಳ ಹಿಂದೆ ಬಿ.ವಿ.ಹಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದು ಸ್ಥಳಾಂತರಗೊಂಡಿದ್ದರು. ಮಗಳ ಮನೆಗೆ ಹೋದಾಗಲೆಲ್ಲ ಮಂಗಗಳಿಗೆ ಆಹಾರ ಕೊಡುವುದನ್ನು ರೂಢಿಸಿಕೊಂಡಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಬಿ.ವಿ.ಹಳ್ಳಿಯಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಸಂಬಂಧಿಕರು ಮಂಗಳವಾರ ಬೆಳಗ್ಗೆ ರಾಯರದೊಡ್ಡಿಯಲ್ಲಿರುವ ಮಗಳ ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿದೆ.

ಮನೆ ಬಾಗಿಲಲ್ಲಿಟ್ಟಿದ್ದ ಪಾರ್ಥಿವ ಶರೀರವನ್ನು ಮಂಗ ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ. ಮೃತ ವೃದ್ಧೆ ಜೊತೆಗೆ ಮಾನವ ರಕ್ತ ಸಂಬಂಧವನ್ನು ಮೀರಿಸಿ, ಮಂಗ ಜನ್ಮಜನ್ಮದ ಅನುಬಂಧವೆಂಬಂತೆ ಮುದ್ದಾಡಿದ್ದು ಎಲ್ಲರನ್ನು ಬೆರಗುಗೊಳಿಸಿದೆ. ವೃದ್ಧೆ ಮತ್ತು ಮಂಗನ ಬಾಂಧವ್ಯ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದರು.31ಕೆಆರ್ ಎಂಎನ್ 3,4.ಜೆಪಿಜಿ

ವೃದ್ಧೆಯ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮಂಗ ಕಣ್ಣೀರಿಡುತ್ತಿರುವುದು.