ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಇಲ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ದ್ವೈಮಾಸಿಕ ಕಾರ್ಯಾಗಾರ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಟಿ.ಎನ್. ರುದ್ರೇಶಪ್ಪ ಮಾತನಾಡಿ, ಕೃಷಿ ಬೆಳೆಗಳ ಸಮಗ್ರ ಮಾಹಿತಿ, ಮಳೆಯ ಪ್ರಮಾಣ, ಬಿತ್ತನೆ ಕ್ಷೇತ್ರ, ರೋಗ ಮತ್ತು ಕೀಟಗಳ ನಿಯಂತ್ರಣ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಿಕೆ ಮತ್ತು ಬೆಳೆ ಸಮೀಕ್ಷೆ ಮುಂತಾದ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಲು ಕಾರ್ಯಾಗಾರ ನಡೆಸಲಾಗುತ್ತಿದೆ. ಆಸಕ್ತರು ಪಾಲ್ಗೊಂಡು ವಿವಿಧ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಕುಲಪತಿ ಡಾ. ಎಂ. ಹನುಮಂತಪ್ಪ ಉದ್ಘಾಟಿಸಿದರು. ಕೊಪ್ಪಳ ಜಿಲ್ಲೆಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಕೃಷಿ ವಿವಿ ರಾಯಚೂರಿನ ಸಹವಿಸ್ತಾರಣಾ ನಿರ್ದೇಶಕ ಡಾ.ಎ.ಆರ್. ಕುರುಬರ್ , ಕೃಷಿ ವಿಜ್ಞಾನ ಕೇಂದ್ರ ಗಂಗಾವತಿಯ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ,, ಕೃಷಿ ವಿಜ್ಞಾನಿಗಳಾದ ಡಾ. ಪರಮೇಶ, ಡಾ. ಮಹಾಂತ ಶಿವಯೋಗಿ, ಡಾ. ಸುಜಯ ಉರುಳಿ. ಡಾ. ಜ್ಯೋತಿ, ಡಾ. ಕವಿತಾ ಉಳ್ಳಿಕಾಶಿ, ಡಾ. ರೇವತಿ ಭಾಗವಹಿಸಿದ್ದರು.ರಾಯಚೂರಿನಿಂದ ಕರ್ಕಿಹಳ್ಳಿಗೆ ದಿಂಡಿ ಯಾತ್ರೆ:
ಕನ್ನಡಪ್ರಭ ವಾರ್ತೆ ಗಂಗಾವತಿರಾಯಚೂರಿನಿಂದ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಗೆ ಭಕ್ತರು ದಿಂಡಿಯಾತ್ರೆ ಕೈಗೊಂಡರು. ರಾಯಚೂರಿನ ರಾಮಾಚಾರ್ ಜೋಶಿ ಅವರ ನೇತೃತ್ವದಲ್ಲಿ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಜು. 21ರಂದು ಜರುಗಲಿರುವ ಶ್ರೀ ಮೃತ್ಯುಂಜಯೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಾಯಚೂರಿನಿಂದ ಆಗಮಿಸಿದ ಭಕ್ತರು ಜು. 16ರಂದು ಜೂರಟಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಸಿದ್ದಾಪುರ, ಶ್ರೀರಾಮನಗರ, ಪ್ರಗತಿ ನಗರದ ಮಾರ್ಗವಾಗಿ ಮರಳಿ ಗ್ರಾಮಕ್ಕೆ ಆಗಮಿಸಿದರು. ಮರಳಿ ಗ್ರಾಮದಲ್ಲಿ ವಿಪ್ರ ಸಮುದಾಯದವರು ಹಾಗೂ ಗ್ರಾಮಸ್ಥರು ಸ್ವಾಗತಿಸಿದರು. ನಂತರ ವಿಪ್ರ ಸಮಾಜದ ಮುಖಂಡ ರಮೇಶ್ ಕುಲಕರ್ಣಿ ಅವರ ನಿವಾಸದಲ್ಲಿ ಪಾದಯಾತ್ರೆ ತಂಡ ಆಗಮಿಸಿ ಭಜನೆ ಹಾಗೂ ಉಪನ್ಯಾಸ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಕೈಗೊಂಡರು.ಈ ಸಂದರ್ಭದಲ್ಲಿ ಪವನ ಕುಲಕರ್ಣಿ, ಮನೋಹರ್ ಜಾಲಿಹಾಳ, ಶೇಷಗಿರಿ ಕುಲಕರ್ಣಿ, ಪ್ರಾಣೇಶರಾವ್, ತಾರಾಬಾಯಿ, ಗಿರಿಜಾಬಾಯಿ, ದಿವ್ಯಾ, ರಂಜನಾ ಅಳವಂಡಿ, ಸುಭದ್ರಬಾಯಿ, ರಮಾ ಕಾತರಕಿ, ಪವಿತ್ರ, ಸೀತಾ ಜಾಲಿಹಾಳ ಇನ್ನಿತರರು ಉಪಸ್ಥಿತರಿದ್ದರು. ನಂತರ ಜಂಗಮರ ಕಲ್ಗುಡಿ ಗ್ರಾಮಕ್ಕೆ ಬಿಳ್ಕೋಟ್ಟರು.