ಡಾ. ವೈ.ಎಸ್. ವೀರಭದ್ರಪ್ಪ ಅವರ ಜೀವನ ಪಯಣ, ಬಾಲ್ಯ, ಶಿಕ್ಷಣ, ಸಾಧನೆ, ಸಂಘಟನಾ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯ ವಿವಿಧ ಆಯಾಮಗಳನ್ನು ಕೃತಿಯಲ್ಲಿ ನೈಜ ಘಟನೆಗಳ ಆಧಾರದಲ್ಲಿ ದಾಖಲಿಸಲಾಗಿದೆ ಎಂದರು. ವೀರಭದ್ರಪ್ಪ ಅವರು ತಮ್ಮ ಬದುಕಿನಲ್ಲಿ ಕೈಗೊಂಡ ಹಲವು ಮಹತ್ವದ ನಿರ್ಧಾರಗಳು, ಸಾಮಾಜಿಕ ಅನಿಷ್ಟಗಳ ವಿರುದ್ಧ ನಡೆಸಿದ ಹೋರಾಟ, ಕಾಯಕನಿಷ್ಠೆ, ನಿಷ್ಠುರವಾದಿ ನಿಲುವು, ಸಂಘಟನಾ ಚಾತುರ್ಯ ಹಾಗೂ ಸಮಾಜ ಸುಧಾರಣೆಯ ಬದ್ಧತೆಯನ್ನು ಕೃತಿಯಲ್ಲಿ ವಸ್ತುನಿಷ್ಠವಾಗಿ ಚಿತ್ರಿಸಲಾಗಿದೆ. ಹೀಗಾಗಿ ‘ಸೇವಾ ರತ್ನ’ ಕೃತಿ ಕೇವಲ ವ್ಯಕ್ತಿ ಪ್ರಶಂಸೆಗೆ ಸೀಮಿತವಾಗದೆ, ವ್ಯಕ್ತಿಯ ಆಂತರಿಕ ಸಂಘರ್ಷ, ಮೌಲ್ಯಗಳು, ಗುರಿಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿಶ್ಲೇಷಿಸುವ ಜೀವನಚರಿತ್ರೆಯಾಗಿದೆ ಎಂದು ಡಾ. ಲೋಕೇಶ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನ
ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ ೩೪೬ನೇ ತಿಂಗಳ ಕವಿಗೋಷ್ಠಿ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬೊಮ್ಮೇಗೌಡ ಅವರ ಪ್ರಾಯೋಜಕತ್ವದಲ್ಲಿ ನಗರದ ಎಸ್. ಎಂ.ಕೆ. ನಗರದ ಕಾರುಣ್ಯಾಲಯ ನಿವಾಸದಲ್ಲಿ ನಡೆಯಿತು.ಎನ್.ಎಲ್. ಚನ್ನೇಗೌಡ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕವಿಗೋಷ್ಠಿಯ ಸಂಚಾಲಕಿ ಕಾಮಾಕ್ಷಿ ಕೃಷ್ಣಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕವಯತ್ರಿ ಬಿ.ಎಸ್. ವನಜಾಕ್ಷಿ ಸುರೇಶ್ ಬೆಟ್ಟದಲ್ಲೂರು ಅವರು ರಚಿಸಿರುವ ‘ಸೇವಾ ರತ್ನ’ ಜೀವನಚರಿತ್ರೆ ಕೃತಿಯ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರದ ಡಾ. ಲೋಕೇಶ್ ಅವರು ವಿಮರ್ಶೆ ಮಾಡಿದರು.
ಡಾ. ವೈ.ಎಸ್. ವೀರಭದ್ರಪ್ಪ ಅವರ ಜೀವನ ಪಯಣ, ಬಾಲ್ಯ, ಶಿಕ್ಷಣ, ಸಾಧನೆ, ಸಂಘಟನಾ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯ ವಿವಿಧ ಆಯಾಮಗಳನ್ನು ಕೃತಿಯಲ್ಲಿ ನೈಜ ಘಟನೆಗಳ ಆಧಾರದಲ್ಲಿ ದಾಖಲಿಸಲಾಗಿದೆ ಎಂದರು. ವೀರಭದ್ರಪ್ಪ ಅವರು ತಮ್ಮ ಬದುಕಿನಲ್ಲಿ ಕೈಗೊಂಡ ಹಲವು ಮಹತ್ವದ ನಿರ್ಧಾರಗಳು, ಸಾಮಾಜಿಕ ಅನಿಷ್ಟಗಳ ವಿರುದ್ಧ ನಡೆಸಿದ ಹೋರಾಟ, ಕಾಯಕನಿಷ್ಠೆ, ನಿಷ್ಠುರವಾದಿ ನಿಲುವು, ಸಂಘಟನಾ ಚಾತುರ್ಯ ಹಾಗೂ ಸಮಾಜ ಸುಧಾರಣೆಯ ಬದ್ಧತೆಯನ್ನು ಕೃತಿಯಲ್ಲಿ ವಸ್ತುನಿಷ್ಠವಾಗಿ ಚಿತ್ರಿಸಲಾಗಿದೆ. ಹೀಗಾಗಿ ‘ಸೇವಾ ರತ್ನ’ ಕೃತಿ ಕೇವಲ ವ್ಯಕ್ತಿ ಪ್ರಶಂಸೆಗೆ ಸೀಮಿತವಾಗದೆ, ವ್ಯಕ್ತಿಯ ಆಂತರಿಕ ಸಂಘರ್ಷ, ಮೌಲ್ಯಗಳು, ಗುರಿಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿಶ್ಲೇಷಿಸುವ ಜೀವನಚರಿತ್ರೆಯಾಗಿದೆ ಎಂದು ಡಾ. ಲೋಕೇಶ್ ಅಭಿಪ್ರಾಯಪಟ್ಟರು. ಕವಿಗೋಷ್ಠಿಯಲ್ಲಿ ಭಾನುಪ್ರಕಾಶ್, ಚೆನ್ನೇಗೌಡ, ಪ್ರಮಿತೇಶ್, ಲೋಕೇಶ್, ಮಂಜುಳಾ, ಬಿ.ಬಿ. ತಿಮ್ಮೇಗೌಡ, ರವಿ, ಗಿರಿಜಾಂಬಿಕೆ, ಸುಕನ್ಯಾ, ಮುಕುಂದ, ವನಜಾಕ್ಷಿ, ಮಮತಾ ಸುರೇಶ್, ಜಯರಾಜು, ಶೃತಿ ಸೇರಿದಂತೆ ಹಲವು ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಕಾವ್ಯ, ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಯಿತು. ಕವಿಗೋಷ್ಠಿಯ ನಿರೂಪಣೆಯನ್ನು ರೇಖಾ ಪ್ರಕಾಶ್ ನಡೆಸಿಕೊಟ್ಟರು. ಎಚ್.ಎನ್. ಭಾರತಿ ವಂದನಾರ್ಪಣೆ ಸಲ್ಲಿಸಿದರು. ಬೊಮ್ಮೇಗೌಡ ಅವರ ಕುಟುಂಬದ ಸದಸ್ಯರು ಸೇರಿದಂತೆ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಇದ್ದರು.