ಸ್ಮಾರಕಗಳು ದೇಶದ ಭವ್ಯ ಪರಂಪರೆಯ ಪ್ರತಿಬಿಂಬ: ರವಿಚೇಳ್ಳ ಗುರ್ಕಿ

| Published : May 14 2024, 01:01 AM IST / Updated: May 14 2024, 01:02 AM IST

ಸ್ಮಾರಕಗಳು ದೇಶದ ಭವ್ಯ ಪರಂಪರೆಯ ಪ್ರತಿಬಿಂಬ: ರವಿಚೇಳ್ಳ ಗುರ್ಕಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಮಾರಕಗಳು ದೇಶದ ಭೌವ್ಯ ಪರಂಪರೆಯನ್ನು, ಇತಿಹಾಸ ನಡೆದು ಬಂದ ದಾರಿಯನ್ನು ತಿಳಿಸುತ್ತವೆ.

ಬಳ್ಳಾರಿ: ಸ್ಮಾರಕಗಳು ರಾಜರ ಕಾಲದ ಆಡಳಿತ, ಜನಜೀವನ, ಆ ಕಾಲದ ಶ್ರೀಮಂತಿಕೆಯ ಬದುಕು, ಆಚಾರ-ವಿಚಾರ, ರೂಢಿ ಸಂಪ್ರದಾಯ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ರವಿಚೇಳ್ಳ ಗುರ್ಕಿ ಹೇಳಿದರು.

ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಸ್ಮಾರಕಗಳ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ಮಾರಕಗಳು ದೇಶದ ಭೌವ್ಯ ಪರಂಪರೆಯನ್ನು, ಇತಿಹಾಸ ನಡೆದು ಬಂದ ದಾರಿಯನ್ನು ತಿಳಿಸುತ್ತವೆ. ದೇಶದಲ್ಲಿರುವ ಅನೇಕ ಪಾರಂಪರಿಕ ತಾಣಗಳು ದೇಶ ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇದರಿಂದಾಗಿಯೇ ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದು ಸ್ಥಳೀಯ ಜನರು ಬದುಕು ಕಟ್ಟಿಕೊಳ್ಳಲು ಸಹ ಸಹಕಾರಿಯಾಗಿದೆ. ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಸ್ಮಾರಕ ನೋಡಿ ಅದರ ಇತಿಹಾಸ ತಿಳಿದುಕೊಳ್ಳಬೇಕು. ಸಾಧ್ಯವಾದರೆ ಸ್ಥಳಗಳನ್ನು ಭೇಟಿ ಮಾಡಿ ಐತಿಹ್ಯವನ್ನು ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಸ್ಮಾಕರಗಳ ಮಹತ್ವ ಕುರಿತು ಮಾತನಾಡಿದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮೇಘನಾ, ನಂದಿನಿ, ಮೇಘಮಾಲ ಹಾಗೂ ವೇಣುಗೋಪಾಲ ಅವರಿಗೆ ಬಹುಮಾನ ವಿತರಿಸಲಾಯಿತು.

ಪೋಷಕರಾದ ಗೌರಮ್ಮ, ಸುಂಕಮ್ಮ, ವಿದ್ಯಾರ್ಥಿಗಳಾದ ಅಶ್ವಿನಿ, ಇಂದು, ಜ್ಯೋತಿ, ಸಿಂಧೂ, ಪ್ರಸನ್ನ,ದಿವ್ಯ, ವಿಜಯ, ಸುದೀಪ್ ಮುಂತಾದವರು ಉಪಸ್ಥಿತರಿದ್ದರು.