ಸಾರಾಂಶ
ಮೂಡುಬಿದಿರೆ ಭಗವತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಶಾರದಾ ಪೊಸಲಾಯಿ ಅಧ್ಯಕ್ಷತೆಯಲ್ಲಿ ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಮೂಡುಬಿದಿರೆ: ಭಗವತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಶಾರದಾ ಪೊಸಲಾಯಿ ಅಧ್ಯಕ್ಷತೆಯಲ್ಲಿ ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಎನ್.ಆರ್.ಐ.ಎಂ ವ್ಯವಸ್ಥಾಪಕ ನಿಖಿಲ್ ಮಾತನಾಡಿ, ಒಕ್ಕೂಟದ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಗೆ ಒದಗಿಸಲು ಸದಸ್ಯರು ಪ್ರಚಾರ ಮಾಡುವಂತಾಗಬೇಕು. ಒಕ್ಕೂಟದಿಂದಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.ಪಾಲಡ್ಕ ಗ್ರಾ.ಪಂ. ಅಧ್ಯಕ್ಷ ಅಮಿತಾ, ಸದಸ್ಯರಾದ ದಿನೇಶ್, ರಂಜಿತ್ ಭಂಡಾರಿ, ಕಾಂತಿ ಶೆಟ್ಟಿ, ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ದಿನಕರ್ ಕಂಬಾಶಿ, ಪತ್ರಕರ್ತ ಜಗದೀಶ್ ಪೂಜಾರಿ, ಬ್ರಹ್ಮಶ್ರೀ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಕುರಂಗಲ್, ತಾಪಂ ಕೆಡಿಪಿ ಸದಸ್ಯ, ನಿವೃತ್ತ ಶಿಕ್ಷಕ ತುಕ್ರಪ್ಪ ಕೆಂಬರೆ, ಕಿರಿಯ ಆರೋಗ್ಯ ಸಹಾಯಕಿ ಶ್ವೇತಾ ಉಪಸ್ಥಿತರಿದ್ದರು.ಮೀನಾಕ್ಷಿ ಸ್ವಾಗತಿಸಿದರು. ಜಾನಕಿ ವಸಂತ್ ನಿರೂಪಿಸಿದರು. ಸುಚಿತ್ರಾ ಹಾಗೂ ಗೀತಾ ಕಡಂದಲೆ ವರದಿ ಮಂಡಿಸಿದರು. ಪದಾಧಿಕಾರಿಗಳು: ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸವಿತಾ ಟಿ.ಎನ್.(ಅಧ್ಯಕ್ಷೆ), ಸುಚಿತ್ರಾ (ಕಾರ್ಯದರ್ಶಿ), ಗೀತಾ (ಉಪಾಧ್ಯಕ್ಷರು), ಲೀಲಾ (ಜೊತೆ ಕಾರ್ಯದರ್ಶಿ), ಮಂಜುಳಾ (ಕೋಶಾಧಿಕಾರಿ), ಜ್ಯೋತಿ, ವಿಮಲಾ, ಸವಿತಾ, ಅಮಿತಾ(ಸದಸ್ಯೆಯರು) ಆಯ್ಕೆಯಾಗಿದ್ದಾರೆ.