ಮೂಡ್ಲಕಟ್ಟೆ ಐ.ಎಂ.ಜೆ.ಐ.ಎಸ್.ಸಿ ಪ್ರೀಮಿಯರ್ ಲೀಗ್ ಸಂಪನ್ನ

| Published : Mar 24 2024, 01:33 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಕೂಟವನ್ನು ಹಾಗೂ ವಿದ್ಯಾರ್ಥಿನಿಯರಿಗೆ ತ್ರೋಬಾಲ್ ಪಂದ್ಯಕೂಟವನ್ನು ಆಯೋಜಿಸಲಾಗಿದ್ದು, ಲೀಗ್ ಮಾದರಿಯಲ್ಲಿ ನಡೆದ ಪಂದ್ಯಕೂಟದಲ್ಲಿ ತಲಾ 13 ಪಂದ್ಯಗಳು ನಡೆಯಿತು. ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಕೂಟದಲ್ಲಿ ತಲಾ 5 ತಂಡಗಳು ಭಾಗವಹಿಸಿದ್ದವು.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಸಂಸ್ಥೆಯ ಕ್ರೀಡಾ ವೇದಿಕೆಯಾದ ಐಕ್ಯಂ ಆಯೋಜಿಸಿದ್ದ ‘ಐ.ಎಂ.ಜೆ.ಐ.ಎಸ್.ಸಿ ಪ್ರೀಮಿಯರ್ ಲೀಗ್ 2024’ ಯಶಸ್ವಿಯಾಗಿ ನೆರವೇರಿತು. ಈ ಪಂದ್ಯಕೂಟವನ್ನು ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ ಉದ್ಘಾಟಿಸಿದರು.ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಕೂಟವನ್ನು ಹಾಗೂ ವಿದ್ಯಾರ್ಥಿನಿಯರಿಗೆ ತ್ರೋಬಾಲ್ ಪಂದ್ಯಕೂಟವನ್ನು ಆಯೋಜಿಸಲಾಗಿದ್ದು, ಲೀಗ್ ಮಾದರಿಯಲ್ಲಿ ನಡೆದ ಪಂದ್ಯಕೂಟದಲ್ಲಿ ತಲಾ 13 ಪಂದ್ಯಗಳು ನಡೆಯಿತು. ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಕೂಟದಲ್ಲಿ ತಲಾ 5 ತಂಡಗಳು ಭಾಗವಹಿಸಿದ್ದವು.ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅದ್ವೈತ, ಚಾಣಕ್ಯ, ವಸಿಷ್ಟ, ಅಗಸ್ತ್ಯ ಹಾಗೂ ವಾಲ್ಮೀಕಿ ತಂಡವು ಭಾಗವಹಿಸಿದ್ದು, ಪುರುಷರ ಕ್ರಿಕೆಟ್ ಪಂದ್ಯಕೂಟದಲ್ಲಿ ಅಗಸ್ತ್ಯ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅದ್ವೈತ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಗಸ್ತ್ಯ ತಂಡದ ಅನ್ವಿತ್ ಸರಣಿ ಶ್ರೇಷ್ಠ ಪ್ರಶಸ್ತಿ, ಅದ್ವೈತ ತಂಡದ ದೀಕ್ಷಿತ್ ಉತ್ತಮ ದಾಂಡಿಗ ಪ್ರಶಸ್ತಿ, ಚಾಣಕ್ಯ ತಂಡದ ಸನಿತ್ ಉತ್ತಮ ಎಸೆತಗಾರ ಪ್ರಶಸ್ತಿ ಹಾಗೂ ವಸಿಷ್ಠ ತಂಡದ ಅಶ್ವಿತ್ ಒನ್ ಮ್ಯಾನ್ ಶೋ ಪ್ರಶಸ್ತಿಯನ್ನು ಪಡೆದುಕೊಂಡರು.ವಿದ್ಯಾರ್ಥಿನಿಯರ ವಿಭಾಗದ ತ್ರೋಬಾಲ್ ಪಂದ್ಯಕೂಟದಲ್ಲಿ ಚಾಣಕ್ಯ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಅಗಸ್ತ್ಯ ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಗಸ್ತ್ಯ ತಂಡದ ನಿರೋಷ ಖಾರ್ವಿ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಚಾಣಕ್ಯ ತಂಡದ ರಕ್ಷಿತಾ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಿದ ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್, ಉಪ ಪ್ರಾಂಶುಪಾಲ ಜಯಶೀಲ ಕುಮಾರ್ ಹಾಗೂ ದೈಹಿಕ ನಿರ್ದೇಶಕ ಪ್ರವೀಣ್ ಖಾರ್ವಿ, ವಿದ್ಯಾರ್ಥಿಗಳ ಅಚ್ಚುಕಟ್ಟಾದ ಆಯೋಜನಾ ಕೌಶಲ್ಯವನ್ನು ಶ್ಲಾಘಿಸಿದರು.