ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆದ 23ನೇ ವರ್ಷದ ಹೊನಲು ಬೆಳಕಿನ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಭಾನುವಾರ ರಾತ್ರಿ ಯಶಸ್ವಿಯಾಗಿ ಸಮಾಪನಗೊಂಡಿತು.
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆದ 23ನೇ ವರ್ಷದ ಹೊನಲು ಬೆಳಕಿನ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಭಾನುವಾರ ರಾತ್ರಿ ಯಶಸ್ವಿಯಾಗಿ ಸಮಾಪನಗೊಂಡಿತು. ಈ ಬಾರಿ ಕಂಬಳ ಕೂಟದಲ್ಲಿ ದಾಖಲೆಯ 236 ಕೋಣಗಳು ಪಾಲ್ಗೊಂಡಿದ್ದರೂ ಕೇವಲ 32 ಗಂಟೆಗಳಲ್ಲಿ ಕಂಬಳೋತ್ಸವವನ್ನು ಶಿಸ್ತುಬದ್ಧವಾಗಿ ನೆರವೇರಿಸುವ ಮೂಲಕ ಮೂಡುಬಿದಿರೆ ಕಂಬಳ ಮಾದರಿಯಾಗಿ ಮೂಡಿಬಂದಿದೆ.
ಫಲಿತಾಂಶದ ವಿವರ: ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 236 ಜೊತೆಕನೆಹಲಗೆ: 11 ಜೊತೆ
ಅಡ್ಡ ಹಲಗೆ: 9 ಜೊತೆಪ್ರಥಮ: ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (12.33)
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ದ್ವಿತೀಯ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ (12.64), ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.ಹಗ್ಗ ಹಿರಿಯ: (19 ಜೊತೆ): ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.45),
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ: ಅತ್ತೂರು ಮನ್ಮಥ ಜೆ ಶೆಟ್ಟಿ "ಬಿ " (12.02) ಓಡಿಸಿದವರು: ಬಾರಾಡಿ ನತೀಶ್ ಸಫಲಿಗಹಗ್ಗ ಕಿರಿಯ (39 ಜೊತೆ): ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ " (11.72) ಓಡಿಸಿದವರು: ಕಾವೂರುದೋಟ ಸುದರ್ಶನ್, ದ್ವಿತೀಯ: ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ "ಬಿ " (12.02) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ನೇಗಿಲು ಹಿರಿಯ (36 ಜೊತೆ): ಪ್ರಥಮ: ತೊಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ (12.10) ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ (12.13) ಓಡಿಸಿದವರು: ನಕ್ರೆ ಪವನ್ ಮಡಿವಾಳನೇಗಿಲು ಕಿರಿಯ (122 ಜೊತೆ): ಪ್ರಥಮ: ಮಿಯಾರ್ ಬೋರ್ಕಟ್ಟೆ ಮಿತ್ಲೊಟ್ಟು ಪೃಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ "ಎ " (11.22) ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್,
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಎ " (11.46) ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್.ಅಬ್ಬಕ್ಕ ಪ್ರಶಸ್ತಿ ಪ್ರದಾನ:ಕಂಬಳೋತ್ಸವದಲ್ಲಿ ಎಂ.ಆರ್.ಜಿ.ಗ್ರೂಪ್‌ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ರಾಜ್ಯಮಟ್ಟದ ವೀರ ರಾಣಿ ಅಬ್ಬಕ್ಕ 500ರ ಸಂಭ್ರಮದ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು. ಕಂಬಳೋತ್ಸವದ ಮೊದಲ ದಿನ ಸಂಜೆ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹಿರಿತನದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ಎಸ್. ಕೋಟ್ಯಾನ್ ಕೊಳಕೆ ಇರ್ವತ್ತೂರು, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ರವಿ ಕೋಟ್ಯಾನ್ ಮೂಡುಬಿದಿರೆ, ವಿಶ್ವಕಪ್ ವಿಜೇತ ಭಾರತ ತಂಡದ ಕಬಡ್ಡಿ ಪಟು ಧನಲಕ್ಷ್ಮೀ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂತೋಷ್ ಶೆಟ್ಟಿ ಕಡಂದಲೆ ಪರಾರಿ, ರುಕ್ಕಯ್ಯ ಪೂಜಾರಿ ಅಳೆಯೂರು, ಗೋಪಾಲ್ ಕೋಟ್ಯಾನ್ ಮಾರೂರು, ದಿನೇಶ್ ದೇವಾಡಿಗ ಅಶ್ವತ್ಥಪುರ, ಪ್ರಗತಿಪರ ಕೃಷಿಕರಾದ ಡೊಂಬಯ್ಯ ಮೈಲಿ ಪುತ್ತಿಗೆ ಹಾಗೂ ಪಾಪಣ್ಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಪ್ರ. ಕಾರ್ಯದರ್ಶಿ ಗುಣಪಾಲ ಕಡಂಬ, ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು ಸಹಿತ ಪದಾಧಿಕಾರಿಗಳು, ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳದ ಮಾಜಿ ಓಟಗಾರ ಕಾಬೆಟ್ಟು ಸುಂದರ ಹೆಗ್ಡೆ, ಪ್ರಮುಖರಾದ ಲಕ್ಷ್ಮಣ್ ಪೂಜಾರಿ, ಸುರೇಂದ್ರ ಶೆಟ್ಟಿ,ನಾಗೇಶ್ ಇರುವೈಲು ಉಮೇಶ್ ಹೆಗ್ಡೆ, ರೋಹಣ್ ಅತಿಕಾರಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶನಿವಾರ ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆಯಲ್ಲಿ ವಿವಿಧ ಆರಾಧನ ಕೇಂದ್ರಗಳ ಪ್ರಸಾದ, ತೀರ್ಥವನ್ನು ಕರೆಗೆ ಸಮರ್ಪಿಸಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ಈಶ್ವರ ಭಟ್, ಆಲಂಗಾರು ಚರ್ಚ್‌ನ ಧರ್ಮ ಗುರುಗಳಾದ ಫಾ.ಮೆಲ್ವಿನ್ ನೊರೊನ್ಹಾ ಕುಂಟಾಡಿ ಸುಧೀರ್ ಹೆಗ್ಡೆ ಅವರು ಕರೆಯಲ್ಲಿ ದೀಪ ಬೆಳಗಿಸಿ ಕಂಬಳ ಉದ್ಘಾಟಿಸಿದ್ದರು. ಈಶ್ವರ ಭಟ್ ಪ್ರಾರ್ಥಿಸಿದರು. ರೆ.ಫಾ. ಮೆಲ್ವಿನ್ ನೊರೋನ್ನಾ ಶುಭ ಹಾರೈಸಿದರು. ಕಂಬಳ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕೋಶಾಧಿಕಾರಿ ಭಾಸ್ಕರ ಎಸ್.ಕೋಟ್ಯಾನ್, ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಪ್ರಮುಖರಾದ ಹರಿಪ್ರಸಾದ್, ಕುಮಾರ ಪ್ರಸಾದ್. ಕೆ. ಆರ್. ಪಂಡಿತ್, ಸುರೇಶ್ ಕೆ. ಪೂಜಾರಿ, ಪುರಸಭಾ ನಿರ್ಗಮನ ಅಧ್ಯಕ್ಷೆ ಜಯಶ್ರೀ ಕೇಶವ್, ನಿರ್ಗಮನ ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ ವೆಂಕಟರಮಣ, ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಬೆಳುವಾಯಿ ಗ್ರಾ.ಪಂ. ಸದಸ್ಯ ರಘು ಪೆಲಕುಂಜ, ಪಾಣಿಲ ಕೋಣಗಳ ಯಜಮಾನ ಇರುವಲು ಯೋಗೀಶ್ ಶೆಟ್ಟಿ ಲಕ್ಷ್ಮಣ್ ಪೂಜಾರಿ, ಸತೀಶ್ಚಂದ್ರ ಸಾಲ್ಯಾನ್, ರಾಜೇಶ್ ಕಡಲಕರೆ, ಲೇಖಕಿ ರೆಶೆಲ್ ಬ್ರಿಟ್ಟಿ ಫರ್ನಾಂಡಿಸ್ ಮೊದಲಾದವರಿದ್ದರು.
ಶ್ರೀನಾಥ ಸುವರ್ಣ ಮೂಡು ಮಾರ್ನಾಡು, ಸುಹಾನ್ ಶೆಟ್ಟಿ ಬಜಪೆ, ಅಭಿಷೇಕ್ ಆಳ್ವ ತಿರುವೈಲುಗುತ್ತು ಇವರಿಗೆ ವಿಜೇತ್ ಅಮೀನ್ ಮೂಡುಬಿದಿರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಂಬಳಗಳಲ್ಲಿ ಬೋಳಾರ ಚ್ಯಾಂಪಿಯನ್ ಕುಟ್ಟಿ (ಕೋಣ) ವನ್ನು ಸ್ಮರಿಸಿಕೊಂಡ ಫ್ಲೆಕ್ಸ್ ಗಳು ಗಮನ ಸೆಳೆದವು.