ಇತ್ತೀಚಿನ ದಿನಗಳಲ್ಲಿ ಸಂಬವಿಸುತ್ತಿರುವ ಚಿಕ್ಕ ವಯಸ್ಸಿನಲ್ಲೇ ಹೃದಯಘಾತ , ಒತ್ತಡ ನಿಯಂತ್ರಣ. ಬಿಪಿ ಶುಗರ್ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿವೆ ಆದ್ದರಿಂದ ಇಂತಹ ಆರೋಗ್ಯ ಶಿಬಿರಗಳು ಅಗತ್ಯವಿರುವ ಬಗ್ಗೆ ತಿಳಿಸಿದ ಅವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ತರೀಕೆರೆ: ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಅವರಣದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರಕ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಂಬವಿಸುತ್ತಿರುವ ಚಿಕ್ಕ ವಯಸ್ಸಿನಲ್ಲೇ ಹೃದಯಘಾತ , ಒತ್ತಡ ನಿಯಂತ್ರಣ. ಬಿಪಿ ಶುಗರ್ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿವೆ ಆದ್ದರಿಂದ ಇಂತಹ ಆರೋಗ್ಯ ಶಿಬಿರಗಳು ಅಗತ್ಯವಿರುವ ಬಗ್ಗೆ ತಿಳಿಸಿದ ಅವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಜನಹಿತ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ವಾಣಿ ಶ್ರೀನಿವಾಸ್, ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಮೀರಾ ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ತಾಲೂಕು ಪಂಚಾಯತಿ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ತರೀಕೆರೆ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, 26 ಗ್ರಾಪಂ ಮಟ್ಟದ ಒಕ್ಕೂಟ, ಜಿ.ಎಚ್.ಶ್ರೀನಿವಾಸ ಜನಹಿತ ಸೇವಾ ಟ್ರಸ್ಟ್, ಇನ್ನರ್ ವ್ಹೀಲ್ ಕ್ಲಬ್, ತರೀಕೆರೆ, ಸಪ್ತಗಿರಿ ವೈದ್ಯಕೀಯ ಮಹಾಸಂಸ್ಥೆ ಸಂಶೋಧನಾ ಕೇಂದ್ರ ಹೆಸರುಘಟ್ಟ, ಬೆಂಗಳೂರು, ಡಾ.ಶರತ್ ಆರ್. ಯಜಮಾನ್ ಶರತ್ ಕಣ್ಣಿನ ಆಸ್ಪತ್ರೆ, ಕಡೂರು, ಡಾ.ವತ್ಸಲ ಶರತ್, ಸಿರೀಶ್ ಶುಗರ್ ಕ್ಲಿನಿಕ್ ಕಡೂರು. ಕಾರ್ಯನಿರ್ವಾಹಕ ಅಧಿಕಾರಿಗಳು ಡಾ.ಆರ್. ದೇವೇಂದ್ರಪ್ಪ, ವೈಧ್ಯಾಧಿಕಾರಿಗಳು ಭಾಗವಹಿಸಿದ್ದರು.