ದಾಬಸ್‍ಪೇಟೆ: ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಕೃಷಿ ಕೈಗೊಂಡಲ್ಲಿ ರೈತರ ಆರ್ಥಿಕ ಪ್ರಗತಿ ಸಾಧ್ಯ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಪಂಕಜ ತಿಳಿಸಿದರು.

ದಾಬಸ್‍ಪೇಟೆ: ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಕೃಷಿ ಕೈಗೊಂಡಲ್ಲಿ ರೈತರ ಆರ್ಥಿಕ ಪ್ರಗತಿ ಸಾಧ್ಯ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಪಂಕಜ ತಿಳಿಸಿದರು.

ಪಟ್ಟಣದ ಶಿವಶ್ರೀ ಬಸವಶ್ರೀ ಸಮುದಾಯ ಭವನದಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಮತ್ತು ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೌಧರಿ ಚರಣಸಿಂಗ್ ಅವರು ಅಲ್ಪಾವಧಿಗೆ ದೇಶದ ಪ್ರಧಾನಿಯಾಗಿದ್ದರೂ ರೈತರ ಕಲ್ಯಾಣಕ್ಕಾಗಿ ಅನೇಕ ರೈತಪರ ಯೋಜನೆಗಳನ್ನು ತಂದರು. ಹನಿ ನೀರಾವರಿ, ಮಳೆಕೊಯ್ಲು, ಕೃಷಿ ಹೊಂಡ ಪದ್ದತಿ ಅಳವಡಿಸಿಕೊಳ್ಳಬೇಕು ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಹೆಚ್ಚು ಕೀಟನಾಶಕ ಬಳಸುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತದೆ. ಮುಂದಿನ ದಿನಗಳಲ್ಲಿ ಇದು ಮಾರಕವಾಗಲಿದ್ದು, ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು. ರಾಸಾಯನಿಕ ಮುಕ್ತ ಆಹಾರ ಧಾನ್ಯಗಳ ಉತ್ಪಾದನೆಗೆ ರೈತರು ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದರು.

ಕೃಷಿ ಅಧಿಕಾರಿ ರವಿಕುಮಾರ್ ವಿರುದ್ಧ ಆಕ್ರೋಶ: ಸೋಂಪುರ ಕೃಷಿ ಕೇಂದ್ರದ ಕೃಷಿ ಅಧಿಕಾರಿ ರವಿಕುಮಾರ್ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದು, ರೈತರಿಗೆ, ಮಾಧ್ಯಮದವರಿಗೆ ಕಾರ್ಯಕ್ರಮದ ಮಾಹಿತಿ ನೀಡಿಲ್ಲ ಎಂದು ರವಿಕುಮಾರ್ ಮೇಲೆ ಸಾಕಷ್ಟು ಭ್ರಷ್ಟಾಚಾರದ ದೂರು ಕೇಳಿಬರುತ್ತಿದ್ದು ಮೇಲಧಿಕಾರಿಗಳು ಗಮನಹರಿಸಬೇಕೆಂದು ಕೃಷಿಕ ಸಮಾಜದ ಉಪಾಧ್ಯಕ್ಷ ಗಿರೀಶ್ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ಜಿಪಂ ಮಾಜಿ ಸದಸ್ಯ ಹೊನ್ನಸಿದ್ದಪ್ಪ, ಎನ್‌ಪಿ ಸದಸ್ಯರಾದ ಪ್ರಕಾಶ್, ಅಂಜನಮೂರ್ತಿ, ಕೃಷಿಕ ಸಮಾಜದ ಪುರುಷೋತ್ತಮ್, ನಾಗರಾಜು, ಗುರುರಾಜು, ವೆಂಕಟೇಶಯ್ಯ, ನಾರಾಯಣಸ್ವಾಮಿ, ರಾಮಚಂದ್ರಯ್ಯ, ಅರುಣ್ ಕುಮಾರ್, ರಂಗರಾಜು, ಮೂರ್ತಿ, ಸರೋಜಮ್ಮ, ಶ್ರೀನಿವಾಸ್, ಸೋಮಶೇಖರ್, ಜಿಕೆವಿಕೆ ವಿಜ್ಞಾನಿಗಳಾದ ಹನುಮಂತರಾಯಪ್ಪ, ಸುರೇಶ್, ಮೀನುಗಾರಿಕೆ ಇಲಾಖೆ ಅಮೃತ, ತೋಟಗಾರಿಕೆ ಇಲಾಖೆ ವಿಜಯ್, ಮುಖಂಡರಾದ ರಾಜಣ್ಣ, ಗಂಗರುದ್ರಯ್ಯ, ರಾಜಣ್ಣ ಮಾದೇನಹಳ್ಳಿ, ಯೋಗಾನಂದೀಶ್, ವೇದಾವತಿ, ದಿವಾಕರ್, ಶ್ರೀನಿವಾಸ್, ಕೃಷಿ ಅಧಿಕಾರಿಗಳಾದ ಶಬಾನಾ, ಅಂಜನಾ, ಪ್ರಭು, ಸಿಬ್ಬಂದಿಗಳಾದ ರವಿಕುಮಾರ್, ವೀಣಾ, ಕೆಂಪರಾಜು, ಕೃಷಿಸಖಿಯರು, ರೈತರು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌ ಪ್ಯಾನಲ್‌ನಲ್ಲಿ ಬಳಸಿ)ದಾಬಸ್‍ಪೇಟೆಯಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚಾರಣೆ ಮತ್ತು ಕಿಸಾನ್‌ಗೋಷ್ಠಿಯನ್ನು ಕೃಷಿ ಇಲಾಖೆ ಉಪನಿರ್ದೇಶಕಿ ಪಂಕಜ ಉದ್ಘಾಟಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ಚನ್ನೇಗೌಡ, ಗಿರೀಶ್‌, ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಮುಖಂಡ ಅಗಳಕುಪ್ಪೆ ಗೋವಿಂದರಾಜು ಇತರರಿದ್ದರು.