ಹೆಜಮಾಡಿ ಕಡಲ ತೀರದಲ್ಲಿ ರಾಶಿರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದು ಮೀನುಪ್ರಿಯರಿಗೆ ಸುಗ್ಗಿಯಾದ ಘಟನೆ ಶುಕ್ರವಾರ ನಡೆದಿದೆ.
ಕಾಪು: ಇಲ್ಲಿನ ಹೆಜಮಾಡಿ ಕಡಲ ತೀರದಲ್ಲಿ ರಾಶಿರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದು ಮೀನುಪ್ರಿಯರಿಗೆ ಸುಗ್ಗಿಯಾದ ಘಟನೆ ಶುಕ್ರವಾರ ನಡೆದಿದೆ.
ಮೀನುಗಾರರು ಸಾಂಪ್ರದಾಯಿಕವಾಗಿ ದಡದಲ್ಲಿ ನಿಂತ ಕೈರಂಪಣಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತೀರ ಪ್ರದೇಶಕ್ಕೆ ಬಂದ ಲಕ್ಷಾಂತರ ಬೂತಾಯಿ ಮೀನುಗಳ ಗುಂಪೊಂದು ದಡಕ್ಕೆ ಬಂತು. ಇದನ್ನು ನೋಡಿದ ಮೀನುಗಾರರು ಮತ್ತು ಸ್ಥಳೀಯ ನಿವಾಸಿಗಳು ಚೀಲ, ಪ್ಲಾಸ್ಟಿಕ್ ಬ್ಯಾಗ್, ಗೋಣಿಗಳಲ್ಲಿ ಮೀನು ತುಂಬಿಸಿ ತೆಗೆದುಕೊಂಡು ಹೋದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.ಸದ್ಯ ಸಮುದ್ರದಲ್ಲಿ ಬೂತಾಯಿ ಮೀನುಗಳು ಗುಂಪು ಗುಂಪಾಗಿ ದಡದತ್ತ ಬಂದು ಬಲೆಗೆ ಬೀಳುತ್ತಿವೆ. ಇದರಿಂದ ಬೂತಾಯಿ ಇತರ ಮೀನುಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಚೆಗಳಲ್ಲಿ ಮಾರಾಟವಾಗುತ್ತಿದೆ.