ಸಾರಾಂಶ
ಸುಮಾರು 2 ಕೋಟಿ ಅನುದಾನವನ್ನು ಕೆ.ಎಂ.ದೊಡ್ಡಿ ಗ್ರಾಮದ ದೇವಾಲಯಗಳು, ರಸ್ತೆಗಳ ಅಭಿವೃದ್ಧಿಗೆ ನೀಡಿದ್ದೇನೆ. ಸ್ಮಶಾನ ಅಭಿವೃದ್ದಿಗೆ 1 ಕೋಟಿ ರು ಅನುದಾನದಲ್ಲಿ ಅಭಿವೃದ್ಧಿ ಪಡಿಸಿ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಅಣ್ಣೂರು ಗ್ರಾಮವನ್ನು ಮಾದರಿಯಾಗಿಸಲು ಸಾಕಷ್ಟು ಅನುದಾನಗಳನ್ನು ನೀಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ಗ್ರಾಮದಲ್ಲಿ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುಮಾರು 2 ಕೋಟಿ ಅನುದಾನವನ್ನು ಗ್ರಾಮದ ದೇವಾಲಯಗಳು, ರಸ್ತೆಗಳ ಅಭಿವೃದ್ಧಿಗೆ ನೀಡಿದ್ದೇನೆ. ಸ್ಮಶಾನ ಅಭಿವೃದ್ದಿಗೆ 1 ಕೋಟಿ ರು ಅನುದಾನದಲ್ಲಿ ಅಭಿವೃದ್ಧಿ ಪಡಿಸಿ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಚುನಾವಣಾ ಪೂರ್ವದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವು ಸಮುದಾಯಗಳು, ದೇವಾಲಯಗಳ ಪುನಃಶ್ಚೇತನಕ್ಕೆ ಧನ ಸಹಾಯ ಮಾಡಿದ್ದೇನೆ. ಹಲವು ಮಂದಿಗೆ ಸಹಾಯಹಸ್ತ ನೀಡಿದ್ದೇನೆ. ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ನೀಡಿ ನಿಮ್ಮ ಸೇವೆಗೆ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ರಸ್ತೆಗಳ ಅಗಲಿಕರಣಕ್ಕೆ ಗ್ರಾಮಸ್ಥರು ಸಹಕರಿಸಬೇಕು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಸೂಳೆಕೆರೆ ಜಲಾನಯನ ಪ್ರದೇಶಗಳಲ್ಲಿನ ಕಾಲುವೆಗಳ ಅಭಿವೃದ್ಧಿಗಾಗಿ ಸುಮಾರು 73 ಕೋಟಿ ರು. ವೆಚ್ಚದಲ್ಲಿ ಕಾಲುವೆಗಳ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾಯಿತರಾಗಿರುವ ಮಾರಸಿಂಗನಹಳ್ಳಿ ಹರೀಶ್ ಅವರನ್ನು ಅಣ್ಣೂರು ಗ್ರಾಮಸ್ಥರು ಹಾಗೂ ಡೇರಿ ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿದರು.
ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ತಾಪಂ ಮಾಜಿ ಸದಸ್ಯ ರೈತಸಂಘದ ರಾಜಣ್ಣ, ಉಪಾಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷರಾದ ಮರಿಚನ್ನೇಗೌಡ, ಶೇಖರ್, ಚಂದ್ರಶೇಖರ್, ಸ್ಟೋರ್ ಜಯರಾಮು, ವರದರಾಜು, ನಾಗಮಣಿ ಮಹೇಂದ್ರ, ಸದಸ್ಯರಾದ ಸತೀಶ್, ಸೊಸೈಟಿ ಅಧ್ಯಕ್ಷ ಪ್ರಸನ್ನ, ಡೈರಿ ಅಧ್ಯಕ್ಷ ಬೊಮ್ಮಾಯಿ, ಮುಖಂಡರಾದ ಆಟೋಪಾರ್ಟ್ಸ್ ವರದರಾಜು, ಮನೋಹರ್, ರಾಘವೇಂದ್ರ, ವೀರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.