ಸಾರಾಂಶ
ಸೊರಬ ತಾಲೂಕಿನ ಹೆಚ್ಚೆ ಗ್ರಾಮದ ಶ್ರೀ ಕಾಳಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಸೊರಬ:ತಾಲೂಕಿನ ಹೆಚ್ಚೆ ಗ್ರಾಮದ ಶ್ರೀ ಕಾಳಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ಏ.೧ರಿಂದ ಏ.೫ರ ವರೆಗೆ ಜಾತ್ರಾ ಮಹೋತ್ಸವ ನಡೆದು ಬಂದಿದ್ದು. ರಥೋತ್ಸವ ಸೇರಿ ವಿವಿಧ ಧಾರ್ಮಿಕ ಆಚರಣೆಗಳು ಶುಕ್ರವಾರ ಅತ್ಯಂತ ಸಂಭ್ರಮದಿಂದ ಸಂಪನ್ನಗೊಂಡಿವೆ. ಶ್ರೀ ಕಾಳಿಕಾಂಬಾ ದೇವಿ ಮಹಾರಥೋತ್ಸವದ ಬಳಿಕ ಅಮ್ಮನವರನ್ನು ಎರಡು ದಿನಗಳ ಕಾಲ ಗ್ರಾಮದ ಗದ್ದಿಗೆ ಮಂಟಪದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಭಕ್ತರು ದೇವಿಗೆ ಹರಕೆ, ಪಡ್ಲಿಗೆ ಮತ್ತು ಉಡಿ ತುಂಬಿಸುವುದು, ತುಲಾಭಾರ ಸೇರಿ ಮುಂತಾದ ಧಾರ್ಮಿಕ ಸೇವೆಗಳು ನಡೆಸಿದರು.ಜಾತ್ರಾ ಮಹೋತ್ಸವದ ಅಂಗವಾಗಿ ರಸಮಂಜರಿ ಕಾರ್ಯಕ್ರಮಗಳು ಪ್ರದರ್ಶನಗೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕಾಳಿಕಾಂಬಾ ಜಾತ್ರಾ ಮಹೋತ್ಸವ ಸಮಿತಿಯವರು, ಯುವಕ ಸಂಘ, ಹೆಚ್ಚೆ, ಒಕ್ಕಲಕೊಪ್ಪ, ಹೊಸಕೊಪ್ಪ, ಕಾರೆಹೊಂಡ ಗ್ರಾಮಸ್ಥರು ಕೂಡಿ ನಡೆಸುವ ದೇವಿಯ ಜಾತ್ರಾ ಮಹೋತ್ಸವ ಮಹತ್ವ ಪಡೆದಿದೆ.
ಕಾಳಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಬಂದಂತಹ ಹರಕೆ ವಸ್ತುಗಳನ್ನು ಶುಕ್ರವಾರ ಹರಾಜು ಮಾಡಲಾಯಿತು. ನಂತರ ದೇವಿಯ ಮೂರ್ತಿಯನ್ನು ಪಲ್ಲಕ್ಕಿ ಉತ್ಸವ ಮೆರವಣಿಗೆ ಮೂಲಕ ದೇವಾಲಯಕ್ಕೆ ತೆರಳಿತು, ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.