ಸುಮಾರು ೨೦ಜನಕ್ಕೆ ವಾಂತಿ ಬೇಧಿ ಕಾಣಿಸಿಸಿಕೊಂಡಿದ್ದರಿಂದ ಎಲ್ಲರನ್ನೂ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಮದುವೆ ಊಟ ಸೇವಿಸಿದ ಹಿನ್ನೆಲೆಯಲ್ಲಿ ೧೬ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ.

ತಾಲೂಕಿನ ಹೊನ್ನವಳ್ಳಿ ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಕುಮಾರಯ್ಯ ಎಂಬುವವರ ಮನೆಯಲ್ಲಿ ಮದುವೆಯ ದೇವತಾ ಕಾರ್ಯಕ್ರಮದಲ್ಲಿ ಸುಮಾರು ೧೫೦ ಜನ ಊಟ ಮಾಡಿದ್ದಾರೆ. ಅದರಲ್ಲಿ ಸುಮಾರು ೨೦ಜನಕ್ಕೆ ವಾಂತಿ ಬೇಧಿ ಕಾಣಿಸಿಸಿಕೊಂಡಿದ್ದರಿಂದ ಎಲ್ಲರನ್ನೂ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.ಘಟನೆ ಕುರಿತು ಮಾಹಿತಿ ತಿಳಿದ ತಾಲೂಕು ಆರೋಗ್ಯ ಅಧಿಕಾರಿ ಚೆನ್ನಕೇಶವ ಗ್ರಾಮಕ್ಕೆ ಭೇಟಿ ನೀಡಿ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಿದರು. ಸುಮಾರು ೩೫ ಜನ ಚಿಕಿತ್ಸೆ ಪಡೆದಿದ್ದು ೧೬ ಜನ ಆಸ್ಪತ್ರೆಯಲ್ಲಿ ದಾಖಲಾಗಿ ಅದರಲ್ಲಿ ಒಬ್ಬರನ್ನು ಹೃದಯ ಸಂಬಂಧಿ ಕಾಯಿಲೆ ಇದ್ದುದರಿಂದ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಇಂದು ೧೬ ಜನರಲ್ಲಿ ೮ಜನರನ್ನು ಮನೆಗೆ ಕಳುಹಿಸಿದ್ದು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಪ್ರಾಣಾಪಾಯದ ಅಪಾಯಗಳಿಲ್ಲ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ೨೪ ಗಂಟೆ ಕಾರ್ಯನಿರ್ವಹಿಸುವ ಮುಂದಿನ ಭಾನುವಾರದವರೆಗೂ ಕ್ಲಿನಿಕ್ ತೆರೆಯಲಾಗಿದೆ ಎಂದು ಟಿಎಚ್‌ಓ ತಿಳಿಸಿದ್ದು ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಬೇಧಿಯ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ.ಶಾಸಕರಾದ ಕೆ. ಷಡಕ್ಷರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮೇಗೌಡ, ಟಿಎಚ್‌ಓ ಡಾ. ಚನ್ನಕೇಶವ ಮತ್ತು ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಣೆ ಮಾಡಿದ್ದಾರೆ.ಫೋಟೋ ೩೦-ಟಿಪಿಟಿ೨ ರಲ್ಲಿ ಕಳುಹಿಸಿದೆ. ಗ್ರಾಮದಲ್ಲಿ ಕ್ಲಿನಿಕ್ ತೆರೆದಿರುವ ದೃಶ್ಯ