ಮಣಿಪಾಲ ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳಿಂದ ಬೀಚ್ ಕ್ಲೀನ್

| Published : Feb 01 2024, 02:07 AM IST

ಮಣಿಪಾಲ ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳಿಂದ ಬೀಚ್ ಕ್ಲೀನ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ನಗರಸಭೆ ಆಯುಕ್ತ ರಾಯಪ್ಪ ಅವರು ಶುಚಿತ್ವ, ಕಸದ ವಿಲೇವಾರಿ ಹಾಗೂ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆಯನ್ನು ಕಾಪಾಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ರಾಷ್ಟ್ರೀಯ ಪ್ರವಾಸೋದ್ಯಮದ ಪ್ರಯುಕ್ತ “ಸುಸ್ಥಿರ ಪ್ರವಾಸೋದ್ಯಮ ಹಾಗೂ ಕೊನೆ ಇಲ್ಲದ ನೆನಪುಗಳು” ಎಂಬ ಥೀಮ್ ನಡಿ ಇಲ್ಲಿನ ಮಾಧವಕೃಪಾ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳು ಮಲ್ಪೆ ಕಡಲ ತೀರ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದರು.

ಈ ಕಾರ್ಯದಲ್ಲಿ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಂಗ್ರಹಿಸಿದ ತ್ಯಾಜ್ಯವನ್ನು ಉಡುಪಿ ನಗರಸಭೆಯವರಿಗೆ ವಿಲೇವಾರಿ ಮಾಡಲಾಯಿತು.

ಈ ಕಾರ್ಯಕ್ರಮದ ಪ್ರಯುಕ್ತ ಉಡುಪಿಯ ನಗರಸಭೆ ಆಯುಕ್ತ ರಾಯಪ್ಪ ಅವರು ಶುಚಿತ್ವ, ಕಸದ ವಿಲೇವಾರಿ ಹಾಗೂ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆಯನ್ನು ಕಾಪಾಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ನಗರಸಭೆಯ ಆರೋಗ್ಯ ನಿರೀಕ್ಷಕ ಮನೋಹರ್ ಮತ್ತು ಮಲ್ಪೆಯ ಸ್ಥಳೀಯ ಪ್ರಮುಖರಾದ ಮಂಜು ಕೋಳ ಅವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸ್ಪೂರ್ತಿ ಇವರು ರಾಷ್ಟ್ರೀಯ ಪ್ರವಾಸೋದ್ಯಮದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಶಿಕ್ಷಕಿ ಗ್ರೇಸ್ ವಂದಿಸಿದರು. ಶಾಲಾ ಶಿಕ್ಷಕರಾದ ವಿನಯ್, ಅನಿಲ್, ಶೋಭಾ ಹೆಗ್ಡೆ ಹಾಗೂ ಉಷಾ ಸಾಮಂತ್ ಅವರು ಈ ಕಾರ್ಯಕ್ರಮವನ್ನು ಸಂಯೋಜಿಸಿದರು.