ಕನ್ನಡಪ್ರಭ ವಾರ್ತೆ ಬೆಂಗಳೂರು

ಇರಾನ್-ಇಸ್ರೇಲ್‌ ನಡುವಿನ ಯುದ್ಧ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಹಾರಾಟ ನಡೆಸುವ 37ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಹಲವು ವಿಮಾನಗಳ ಹಾರಾಟದಲ್ಲಿ ಭಾನುವಾರ ವ್ಯತ್ಯಯ ಉಂಟಾಗಿದೆ.

ಇದರಿಂದ ಪ್ರವಾಸ, ವ್ಯಾಪಾರ, ಉದ್ಯಮ ಸೇರಿ ವಿವಿಧ ಉದ್ದೇಶಗಳಿಗೆ ದುಬೈ ಸೇರಿ ವಿವಿಧ ರಾಷ್ಟ್ರಗಳಿಗೆ ಪ್ರಯಾಣಿಸಬೇಕಿದ್ದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿಗೆ ಆಗಮಿಸಬೇಕಿದ್ದ 18 ವಿಮಾನಗಳು ಹಾಗೂ ನಿರ್ಗಮಿಸಬೇಕಿದ್ದ 19 ವಿಮಾನಗಳು ರದ್ದಾಗಿವೆ.

ಪ್ರಯಾಣಿಕರಿಗೆ ನೆರವಾಗಲು, ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಟರ್ಮಿನಲ್ 2ರ ಕರ್ಬ್‌ಸೈಡ್‌ನಲ್ಲಿ (ಹಂತ 3) ಮತ್ತು ಟರ್ಮಿನಲ್ 1ರ ಆಕಾಸಾ ಟಿಕೆಟಿಂಗ್‌ ಕೌಂಟರ್ ಪಕ್ಕದಲ್ಲಿ ಪ್ರತ್ಯೇಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರ ಸುಗಮ ಸಂಚಾರ ಖಚಿತಪಡಿಸಿಕೊಳ್ಳಲು ಮತ್ತು ಉಂಟಾಗಬಹುದಾದ ಅನನುಕೂಲ ಕಡಿಮೆ ಮಾಡಲು ವಿಮಾನಯಾನ ಸಂಸ್ಥೆಗಳು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೆಐಎ ತಿಳಿಸಿದೆ.

ಪ್ರಯಾಣಿಕರು ತಮ್ಮ ಪ್ರಯಾಣದ ಕುರಿತ ಮಾಹಿತಿಯನ್ನು ಸಂಬಂಧಿಸಿದ ಏರ್‌ಲೈನ್ಸ್‌ ಸಂಸ್ಥೆಗಳನ್ನು ಸಂಪರ್ಕಿಸಿ ಅಪ್ಡೇಟ್ ಪಡೆಯಬೇಕು ಎಂದು ಕೆಐಎ ಸಲಹೆ ನೀಡಲಾಗಿದೆ.ಖಮೇನಿ ಹತ್ಯೆಗೆ ಬೀದರ್‌ನಲ್ಲಿ ಇರಾನ್‌ ಬೆಂಬಲಿತರ ಆಕ್ರೋಶಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧ ಹಾಗೂ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಭಾನುವಾರ ಇರಾನಿ ಜನಾಂಗದವರು ಬೃಹತ್‌ ಪ್ರತಿಭಟನೆ ನಡೆಸಿದರು.ನಗರದ ಇರಾನಿ ಬಡಾವಣೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನ ನಿವಾಸಿಗರು ಬೀದಿಗೆ ಇಳಿದು ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇರಾನಿ ದರ್ಗಾದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನಗರದ ಸ್ಮಶಾನ ಭೂಮಿಯವರೆಗೆ ಸಾಗಿತು. ಈ ವೇಳೆ ಮಹಿಳೆಯರು, ವೃದ್ಧರು ಹಾಗೂ ಪುಟ್ಟ ಮಕ್ಕಳು ಕೈಯಲ್ಲಿ ಖಮೇನಿ ಅವರ ಭಾವಚಿತ್ರಗಳನ್ನು ಹಿಡಿದು ಬೆಂಬಲ ಸೂಚಿಸಿದರು. ಅಮೆರಿಕ ಇಸ್ರೇಲ್‌ ವಿರುದ್ಧ ಘೋಷಣೆ:ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಪ್ರತಿಭಟನಾಕಾರರು, ಅಮೆರಿಕ ಮತ್ತು ಇಸ್ರೇಲ್‌ ರಾಷ್ಟ್ರಗಳ ದಮನಕಾರಿ ನೀತಿಯ ವಿರುದ್ಧ ಕಿಡಿ ಕಾರಿದರು. ಇರಾನ್‌ನ ನಾಯಕತ್ವದ ಮೇಲೆ ನಡೆದಿರುವ ದಾಳಿ ಇಡೀ ಮಾನವೀಯತೆಯ ಮೇಲಿನ ದಾಳಿ ಎಂದು ಘೋಷಣೆಗಳನ್ನು ಕೂಗಿದರು. ಭಾರತದ ಮಧ್ಯಸ್ಥಿಕೆಗೆ ಆಗ್ರಹ:ಪ್ರತಿಭಟನಾಕಾರರು ಭಾರತ ಸರ್ಕಾರದ ಪಾತ್ರದ ಬಗ್ಗೆಯೂ ಮಾತನಾಡಿ, "ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ಇರಾನ್ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯವಿದೆ. ಅಮೆರಿಕದ ಇಂತಹ ಏಕಪಕ್ಷೀಯ ದಾಳಿಗಳ ವಿರುದ್ಧ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಬೇಕು " ಎಂದು ಒತ್ತಾಯಿಸಿದರು.