ಸಾರಾಂಶ
ಈ ಪ್ರಯತ್ನಕ್ಕಾಗಿ ಗಿನ್ನಿಸ್ ದಾಖಲೆ ಸಂಸ್ಥೆಯು ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿದ್ದರು ಹಾಗೂ ಇದು ಸತತ ಪಾರಾಯಣ ಗಿನ್ನಿಸ್ ವಿಶ್ವ ದಾಖಲೆ ಸೇರ್ಪಡೆಯಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯ ಅಧ್ವರ್ಯದಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ 650ಕ್ಕೂ ಹೆಚ್ಚು ಜನರು ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸ್ ಪಾರಾಯಣ ಮಾಡಿ. ಹನುಮಾನ್ ಜಯಂತಿ ದಿನ ಸಂಜೆ ಈ ಪಾರಾಯಣವು ಸಂಪನ್ನಗೊಂಡಿತು.ಈ ಪ್ರಯತ್ನಕ್ಕಾಗಿ ಗಿನ್ನಿಸ್ ದಾಖಲೆ ಸಂಸ್ಥೆಯು ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿದ್ದರು ಹಾಗೂ ಇದು ಸತತ ಪಾರಾಯಣ ಗಿನ್ನಿಸ್ ವಿಶ್ವ ದಾಖಲೆ ಸೇರ್ಪಡೆಯಾಗಿದೆ.
ವಡೋದರದ ಸ್ವಾಮಿನಾರಾಯಣ ಭಜನ್ ಯಾಗ, ಶ್ರೀ ಜ್ಞಾನಿವಂದಸ್ಜಿ ಸ್ವಾಮಿ - ಕುಂಡಲಧಾಮ ಅವರು 2022ನೇ ಜು. 23 ರಂದು 27 ಗಂಟೆ 27 ನಿಮಿಷ 27 ಸೆಕೆಂಡ್ ಪಾರಾಯಣ ಮಾಡಿ ಈ ಹಿಂದೆ ದಾಖಲೆ ನಿರ್ಮಿಸಿದ್ದರು.ನಾದಮಂಟಪದ ಬೆಳ್ಳಿ ಮಹೋತ್ಸವ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಹೊರತಂದಿರುವ ಅಂಚೆ ಚೀಟಿ ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ (ಪೋಸ್ಟಲ್ ಸ್ಟ್ಯಾಂಪ್) (3.12 ಮೀಟರ್- 4.2 ಮೀಟರ್ಸ್) ಅಳತೆವುಳ್ಳದು ಕೂಡ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.