ಮೈಸೂರು ಜಿಲ್ಲೆ ಮಳೆ ಅವಾಂತರಕ್ಕೆ ಇಬ್ಬರು ಬಲಿ- ಸುತ್ತೂರಿನಲ್ಲಿ ಜಾರಿ ಬಿದ್ದು ಮಹಿಳೆ ಸಾವು

| Published : May 05 2024, 02:01 AM IST / Updated: May 05 2024, 02:02 AM IST

ಮೈಸೂರು ಜಿಲ್ಲೆ ಮಳೆ ಅವಾಂತರಕ್ಕೆ ಇಬ್ಬರು ಬಲಿ- ಸುತ್ತೂರಿನಲ್ಲಿ ಜಾರಿ ಬಿದ್ದು ಮಹಿಳೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ತಾಲೂಕು ಮಾರಶೆಟ್ಟಿಹಳ್ಳಿ ನಿವಾಸಿ ಶಿವಕುಮಾರ್(36) ಎಂಬವರೇ ಮೃತಪಟ್ಟವರು. ಇವರು ಶುಕ್ರವಾರ ಟಿ. ನರಸೀಪುರ ರಸ್ತೆಯಲ್ಲಿರುವ ನಾಡನಹಳ್ಳಿಯಲ್ಲಿ ಖಾಸಗಿ ಕಟ್ಟಡದ ಬಳಿ ಕೆಲಸ ಮಾಡುತ್ತಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಜಿಂಕ್ ಶೀಟ್ ತಲೆ ಮೇಲೆ ಬಿದ್ದು ಗಾರೆ ಕೆಲಸಗಾರರೊಬ್ಬರು ಮೃತಪಟ್ಟಿದ್ದಾರೆ.ಮೈಸೂರು ತಾಲೂಕು ಮಾರಶೆಟ್ಟಿಹಳ್ಳಿ ನಿವಾಸಿ ಶಿವಕುಮಾರ್(36) ಎಂಬವರೇ ಮೃತಪಟ್ಟವರು. ಇವರು ಶುಕ್ರವಾರ ಟಿ. ನರಸೀಪುರ ರಸ್ತೆಯಲ್ಲಿರುವ ನಾಡನಹಳ್ಳಿಯಲ್ಲಿ ಖಾಸಗಿ ಕಟ್ಟಡದ ಬಳಿ ಕೆಲಸ ಮಾಡುತ್ತಿದ್ದರು. ಸಂಜೆ 4.30ರ ಸಮಯದಲ್ಲಿ ಗಾಳಿ ಮಳೆ ಆರಂಭವಾದಾಗ ಪಕ್ಕದ ಶೆಡ್ ನಲ್ಲಿ ಆಶ್ರಯ ಪಡೆದಿದ್ದು, ಈ ವೇಳೆ ಗಾಳಿಯ ರಭಸಕ್ಕೆ ಜಿಂಕ್ ಶೀಟ್ತಲೆಗೆ ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮರ ಬಿದ್ದು ಆಟೋ ಚಾಲಕನಿಗೆ ಗಾಯಜೋರು ಮಳೆಗೆ ಆಟೋ ಮೇಲೆ ಮರ ಬಿದ್ದು ಆಟೋ ಚಾಲಕ ಗಾಯಗೊಂಡಿರುವ ಘಟನೆ ಮೈಸೂರಿನ ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ.ರಾಜೀವ್ ನಗರದ ನಿವಾಸಿಯಾದ ಆಟೋ ಚಾಲಕ ನೂರ್ ಅಹಮ್ಮದ್(54) ಎಂಬವರೇ ಗಾಯಗೊಂಡವರು. ಇವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಬಸ್ ನಿಲ್ದಾಣ ಬಳಿ ಮರದ ಕೊಂಬೆಯು ಆಟೋ ಮೇಲೆ ಬಿದ್ದಿದ್ದು, ಆಟೋದಲ್ಲಿದ್ದ ನೂರ್ ಅಹಮ್ಮದ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.