ಯಮಕನಮರಡಿಗೆ ಅತಿ ಹೆಚ್ಚು ಪ್ರಾಶಸ್ತ್ಯ: ಅಣ್ಣಾಸಾಹೇಬ ಜೋಲ್ಲೆ

| Published : Mar 17 2024, 02:01 AM IST

ಯಮಕನಮರಡಿಗೆ ಅತಿ ಹೆಚ್ಚು ಪ್ರಾಶಸ್ತ್ಯ: ಅಣ್ಣಾಸಾಹೇಬ ಜೋಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 36 ಮಂದಿರಗಳಿಗೆ ₹ 1.32 ಕೋಟಿಯಷ್ಟು ಮುಜರಾಯಿ ಇಲಾಖೆ ಅನುದಾನವನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ದೇಗುಲಗಳ ನಿರ್ವಹಣೆ ಮಾಡುವ ಟ್ರಸ್ಟ್ ಖಾತೆಗೆ ಚೆಕ್ ಮೂಲಕ ಹಣ ನೀಡಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸುಮಾರು 36 ಮಂದಿರಗಳಿಗೆ ₹ 1.32 ಕೋಟಿಯಷ್ಟು ಮುಜರಾಯಿ ಇಲಾಖೆ ಅನುದಾನವನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ದೇಗುಲಗಳ ನಿರ್ವಹಣೆ ಮಾಡುವ ಟ್ರಸ್ಟ್ ಖಾತೆಗೆ ಚೆಕ್ ಮೂಲಕ ಹಣ ನೀಡಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಯಮಕನಮರಡಿಯ ಬಿ.ಬಿ.ಹಂಜಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ 36 ದೇವಸ್ಥಾನಗಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, 8 ವಿಧಾನಸಭೆ ಕ್ಷೇತ್ರದಲ್ಲಿ ಯಮಕನಮರಡಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ. ಕೇಂದ್ರ ಸರ್ಕಾರದಿಂದ ಕಾಕತಿಯಿಂದ ಕೋಗನೊಳಿವರೆಗೆ ಸುಮಾರು ₹ 4000 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಾರಂಭವಾಗಿದೆ. ಅಥಣಿಯಿಂದ ಗೋಟೂರ ಗ್ರಾಮದವರೆಗೆ ಸುಮಾರು ₹ 2000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 40 ಸಾವಿರ ರೈತರಿಗೆ ತಲಾ ₹ 2000 ರೈತರ ಖಾತೆಗಳಿಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಜಮೆಯಾಗಿದೆ. ಉಜ್ವಲ ಗ್ಯಾಸ್‌, ಅಂಗವಿಕಲರಿಗೆ ದ್ವಿಚಕ್ರವಾಹನ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗಳಿಸಲಾಗಿದೆ. ಚಿಕ್ಕೊಡಿ ಲೋಕಸಭಾ ವ್ಯಾಪ್ತಿಯಲ್ಲಿ 650 ಒಟ್ಟು ಹಳ್ಳಿಗಳಲ್ಲಿ ಕೆಲ ಹಳ್ಳಿಗಳಿಗೆ ಅನುದಾನ ತಲುಪದೆ ಇರಬಹುದು. ಆದರೆ, ಮುಂಬರುವ ದಿನಗಳಲ್ಲಿ ಆ ಹಳ್ಳಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಬಿಜೆಪಿ ಮುಖಂಡ ರವೀಂದ್ರ ಹಂಜಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂತೀಶ ಅಪ್ಪಾಜಿಗೊಳ, ಸಿದ್ದಲಿಂಗ ಸಿದ್ದಗೌಡರ, ಯಮಕನಮರಡಿ ಬಿಜೆಪಿ ಉತ್ತರ ಮಂಡಳದ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳದ ಅಧ್ಯಕ್ಷ ಅಪ್ಪಯ್ಯ ಜಾಜರಿ, ದುಂಡಪ್ಪ ಬೆಣಿವಾಡಿ ಇತರರು ಉಪಸ್ಥಿತರಿದ್ದರು. ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.