ಸಾರಾಂಶ
ಸರಸ್ವತಿ ನಿತಿನ್ ಕಿರವೆ (26), ಇವರ ಮಕ್ಕಳಾದ ದೀಪಿಕಾ (7), ರಿತಿಕಾ(4) ಮೃತಪಟ್ಟವರು.
ಪಾಲಬಾವಿ (ತಾ.ರಾಯಬಾಗ): ಸಮೀಪದ ಸುಲ್ತಾನಪುರ ಗ್ರಾಮದಲ್ಲಿ ಬುಧವಾರ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಸ್ವತಿ ನಿತಿನ್ ಕಿರವೆ (26), ಇವರ ಮಕ್ಕಳಾದ ದೀಪಿಕಾ (7), ರಿತಿಕಾ(4) ಮೃತಪಟ್ಟವರು.
ಮಹಾರಾಷ್ಟ್ರದ ಸಾಂಗ್ಲಿಯ ನಿತಿನ್ ಕಿರವೆ ಅವರೊಂದಿಗೆ 2016 ರಲ್ಲಿ ಸುಲ್ತಾನಪುರದ ಸರಸ್ವತಿ ಅವರ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಗಂಡನ ಮನೆಯವರ ಕಿರುಕುಳದಿಂದ ಬೇಸತ್ತ ಸರಸ್ವತಿ 8 ತಿಂಗಳ ಹಿಂದೆ ಸುಲ್ತಾನಪುರಕ್ಕೆ ಬಂದು ತವರು ಮನೆಯಲ್ಲಿ ವಾಸವಿದ್ದರು. ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಹಾರೂಗೇರಿ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.