ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಚಿನ್ನಾಭರಣ ಖರೀದಿಗೆಂದು ಬಂದಿದ್ದ ಮಹಿಳೆ ಓರ್ವಳು ನಂತರದಲ್ಲಿ ತನ್ನ ಮಗುವನ್ನೆ ಮರೆತು ಮನೆಗೆ ಹೋದ ಘಟನೆ ನಗರದ ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದಿದೆ.ತಾಯಿ ಉಷಾ ತನ್ನ ಎರಡೂವರೆ ವರ್ಷದ ಪುತ್ರಿ ಸುಪ್ರಿಯಾ ಜೊತೆ ಚಿನ್ನ ಖರೀದಿಗೆ ಬಂದಿದ್ದರು. ತಾಯಿ ತನ್ನ ಮಗುವನ್ನು ಮರೆತು ಹೋದ ಬಂತರ ಕೆಲ ಸಮಯದಲ್ಲಿ ಜ್ಯೂವೆಲರಿ ಶಾಪ್‌ನಿಂದ ಹೊರಗೆ ಬಂದ ಕಂದಮ್ಮ ಅಳುತ್ತ ನಿಂತಿತು. ಮಗುವನ್ನ ನೋಡಿದ ಮಹಿಳೆ ಓರ್ವಳು ಸಂತೈಸಿ ನಂತರ ಕರೆದೊಯ್ದಳು. ಮಗುವಿನ ಪೋಷಕರು ಯಾರೂ ಕಾಣದ ಹಿನ್ನೆಲೆಯಲ್ಲಿ ಮಗುವನ್ನು ತನ್ನೊಟ್ಟಿಗೆ ಮಹಿಳೆ ಕರೆದುಕೊಂಡು ಹೋದಳು. ಮಗು ಮರೆತು ಮನೆಗೆ ಹೋಗಿದ ಬಳಿಕ ಮಗು ಜೊತೆಯಲ್ಲಿ ಇಲ್ಲ, ಕಾಣೆಯಾದ ಬಗ್ಗೆ ಆತಂಕ ಕಾಡಿತು. ಮಗಳು ಸಿಗದಿದ್ದಾಗ ಕಳುವಾಗಿದೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ನಂತರ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ಕೆಲ ಸಮಯದಲ್ಲಿಯೇ ಮಗುವನ್ನು ಕರೆದೊಯ್ದು ಊಟ ತಿನ್ನಿಸಿ ನಂತರ ಪೊಲೀಸರಿಗೆ ಒಪ್ಪಿಸಲು ಭವಾನಿ ಬಂದಳು. ಪೊಲೀಸರ ಸಮ್ಮುಖದಲ್ಲಿ ಭವಾನಿ ಮಗುವನ್ನು ತಾಯಿಗೆ ಹಸ್ತಾಂತರಿಸಲಾಯಿತು. ಒಟ್ಟಾರೆ ಮಗು ಕಾಣೆಯಾದ ಪ್ರಕರಣ ಸುಖಾಂತ್ಯಗೊಂಡಿತು. ಮಗುವನ್ನು ಭವಾನಿ ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ.