ಸಾರಾಂಶ
ಪಟ್ಟಣದ ಜೇಸಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಂಗ್ಲಾದೇಶದಲ್ಲಿರುವ ಅಸಂಖ್ಯಾತ ಹಿಂದೂಗಳು ಸಾಮರಸ್ಯದಿಂದ ಬದುಕುತ್ತಿದ್ದು, ಅವರಿಗೆ ಇದೀಗ ಸಂಚಕಾರ ಬಂದಿದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು ಹೇಳಿದರು.ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಪಟ್ಟಣದ ಜೇಸಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಬಾಂಗ್ಲಾದಲ್ಲಿ ಜಿಹಾದಿಗಳು ಹಿಂದೂಗಳ ಹತ್ಯೆ ಮಾಡಿ ಸಂಪೂರ್ಣ ಮುಸಲ್ಮಾನ ರಾಷ್ಟ್ರ ಮಾಡಲು ಹೊರಟಿದ್ದಾರೆ. ಸಾಮರಸ್ಯದಿಂದ ಬದುಕುತ್ತಿರುವ ಹಿಂದೂಗಳ ಜೀವನಕ್ಕೆ ಭದ್ರತೆಯಿಲ್ಲದಂತಾಗಿ ಇದರೊಂದಿಗೆ ಅಲ್ಲಿನ ವಾಸಿಗಳು ಇಂದು ಭಾರತದ ಗಡಿಯಲ್ಲಿ ಭಾರತಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ.
ಈಗಾಗಲೇ ಭಾರತದಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು ಸಹಸ್ರ ಸಂಖ್ಯೆಯಲ್ಲಿ ಬರುತ್ತಿದ್ದು, ಸ್ಥಳೀಯ ಮಧ್ಯವರ್ತಿಗಳು ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕಾಗಿ ರವಾನಿಸುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಇದು ನಮ್ಮ ದೇಶಕ್ಕೆ ಕಂಟಕವಾಗಲಿದ್ದು ಕೇಂದ್ರಸರ್ಕಾರ ಬಾಂಗ್ಲಾದಲ್ಲಿನ ಹಿಂದೂಗಳನ್ನು ರಕ್ಷಣೆ ಮಾಡಬೇಕು. ನುಸುಳುಕೋರರನ್ನು ಹೊರಗಟ್ಟಬೇಕು. ಈ ದೌರ್ಜನ್ಯ ತಡೆಯಲು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ವಕ್ತಾರ ಬಿ.ಜಗದೀಶ್ಚಂದ್ರ, ಪ್ರಮುಖರಾದ ರವೀಂದ್ರ ಆಚಾರ್ಯ, ವೆಂಕಟೇಶ್, ಗುರುಪ್ರಸಾದ್, ಮಂಜು ಹಲಸೂರು, ಪ್ರದೀಪ್ ಕಿಚ್ಚಬ್ಬಿ, ಅಣ್ಣಪ್ಪ ಹೇರೂರು, ಅರುಣ್‌ಕುಮಾರ್, ಮಂಜು ಆಚಾರ್ಯ ಮತ್ತಿತರರು ಹಾಜರಿದ್ದರು. ೧೩ಬಿಹೆಚ್‌ಆರ್ ೧:ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಾಳೆಹೊನ್ನೂರಿನ ಜೇಸಿ ವೃತ್ತದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಶಾಂಕ್, ಪ್ರಭಾಕರ್, ಜಗದೀಶ್ಚಂದ್ರ, ವೆಂಕಟೇಶ್, ಮಂಜು ಇದ್ದರು.