ಸಾರಾಂಶ
ಪೇರೂರು ಧವಸ ಭಂಡಾರದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೂವೇರ ಪೆಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಪೇರೂರು ಧವಸ ಭಂಡಾರದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೂವೇರ ಪೆಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಬೊಟ್ಟೋಳಂಡ ಕರುಂಬಯ್ಯ ನಿರ್ದೇಶಕರಾಗಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ತೋಲಂಡ ಕಾವೇರಪ್ಪ, ಬೊಟ್ಟೋಳಂಡ ಕುಶಾಲಪ್ಪ, ಮಚ್ಚುರ ಬಿದ್ದಯ್ಯ, ಪಾಲೇಯಡ ದೇವಯ್ಯ, ಆನೇಡ ಚಿಣ್ಣಪ್ಪ, ತೆಕ್ಕಡ ಭೀಮಯ್ಯ, ಬೊಟ್ಟೋಳಂಡ ರೇಷ್ಮ, ಪಾಲೇಯಡ ಪೂವಮ್ಮ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ಸಹ ನಿಬಂಧಕರಾದ ಸಂದೀಪ್ ಮತ್ತು ಪೇರೂರು ಧವಸಭಂಡಾರದ ಕಾರ್ಯದರ್ಶಿ ಅಪ್ಪಚ್ಚೀರ ಬೋಪಯ್ಯ ಕಾರ್ಯ ನಿರ್ವಹಿಸಿದರು.