-MP Govinda Karajola Information. Central Road and Infrastructure Fund Grant
-ಸಂಸದ ಗೋವಿಂದ ಕಾರಜೋಳ ಮಾಹಿತಿ । ಕೇಂದ್ರ ರಸ್ತೆ ಮತ್ತು ಮೂಲಸೌಲಭ್ಯ ನಿಧಿ ಅನುದಾನ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕೇಂದ್ರ ರಸ್ತೆ ಮತ್ತು ಮೂಲ ಸೌಲಭ್ಯ ನಿಧಿಯಿಂದ ಲೋಕಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವಾಲಯ ₹23 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇನ್ನೊಂದು ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರೈಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಹೆದ್ದಾರಿ ವಿಭಾಗ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ತಾಲೂಕಿನ ಜಾನುಕೊಂಡ-ಬುರುಜನರೊಪ್ಪ ರಸ್ತೆಯಿಂದ ಅನ್ನೇಹಾಳ್-ವಡ್ಡರಹಟ್ಟಿ ರಸ್ತೆ 10 ಕಿಮೀ ರವರೆಗೆ ಆಯ್ದ ಭಾಗಗಳಲ್ಲಿ ಉಪ್ಪನಾಯಕನಹಳ್ಳಿ, ಒಬೇನಹಳ್ಳಿ, ನಂದೀಪುರ, ಸೊಂಡೇಕೊಳ, ಗೊಡಬನಾಳ್, ಮುಸಂಡಿಹಾಳ್ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ₹3 ಕೋಟಿ, ಚಳ್ಳಕೆರೆ ತಾಲೂಕಿನ ದೊಡ್ಡೇರಿಯಿಂದ ಒಬೇನಹಳ್ಳಿಗೆ ಸಂಪರ್ಕಿಸುವ ರಸ್ತೆಯ ಕಿ.ಮೀ 3.60 ರಿಂದ 16ರವರೆಗೆ ಹಾಗೂ ಕಿಮೀ 17ರಿಂದ ಕಿಮೀ 36.13 ರವರೆಗೆ ಆಯ್ದ ಭಾಗಗಳಲ್ಲಿ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟ, ಕೋನಿಹಾರಹಳ್ಳಿ, ಗೋಸಿಕೆರೆ ಕಾವಲ್, ಗೋಸಿಕೆರೆ ಚಿಕ್ಕಚೆಲ್ಲೂರು ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ₹3 ಕೋಟಿ ಅನುದಾನ ವ್ಯಯ ಮಾಡಲಾಗುತ್ತದೆ.ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ನಾಯಕನಹಟ್ಟಿಯಿಂದ ತೊರೆಕೋಲಮ್ಮನಹಳ್ಳಿಯಿಂದ ಗುಂತಕೋಲ್ಲಮ್ಮನಹಳ್ಳಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ₹3 ಕೋಟಿ, ಹಿರಿಯೂರು ತಾಲೂಕಿನ ರಾಜ್ಯ ಹೆದ್ದಾರಿ ಕಿಮೀ 123 ರಿಂದ 142.64 ರವರೆಗೆ, ಚಳ್ಳಕೆರೆಯಿಂದ ವಿಶ್ವನಾಥನಹಳ್ಳಿ ಸಂಪರ್ಕಿಸುವ ಪರಶುರಾಮ ದೇವರಕೋಟೆ, ಧರ್ಮಪುರ, ಸಕ್ಕರ, ದ್ವಾರನಕುಂಟೆ, ಕೋಡಿಹಳ್ಳಿ, ಇಕ್ಕನೂರು, ಪಿಟ್ಲಾಲಿ, ಆದಿವಾಲ, ಹಿರಿಯೂರು, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಕುರುಬರಹಳ್ಳಿ, ಭರಮಗಿರಿ ಮಾರ್ಗಗಳಲ್ಲಿ ಆಯ್ದ ಭಾಗಗಳ ಅಭಿವೃದ್ಧಿಗಾಗಿ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ.
ಶಿವಗಂಗಾದಿಂದ ಅಮ್ಮನಹಟ್ಟಿ ರಸ್ತೆಯ ಕಿಮೀ 43.56 ರಿಂದ 53.56 ರವರೆಗೆ ಮದ್ದೇರು, ತಾಳ್ಯ ಕುಮ್ಮಿನಗಟ್ಟ, ಜಾನಕಲ್-ಹೊಸದುರ್ಗ, ಹಾಗಲಕೆರೆ, ಮತ್ತೋಡು, ವಡ್ಡರಹಟ್ಟಿ, ಕಿಟ್ಟದಹಳ್ಳಿ, ಚಿಕ್ಕಬ್ಯಾಲದಕೆರೆ ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ₹3 ಕೋಟಿ, ಹೊಳಲ್ಕೆರೆ ತಾಲೂಕಿನಲ್ಲಿ ಕಡೂರು-ಹಿರೇನಲ್ಲೂರು-ಅಜ್ಜಂಪುರ-ಯರಗನಹಳ್ಳಿ ರಸ್ತೆ ಅಭಿವೃದ್ಧಿಗಾಗಿ ₹3 ಕೋಟಿ ಅನುದಾನ ವ್ಯಯ ಮಾಡಲಾಗುತ್ತಿದೆ.ತುಮಕೂರು ಜಿಲ್ಲೆಯ ಸಿರಾ ತಾಲೂಕಿನಲ್ಲಿ ಪಟ್ಟನಾಯಕನಹಳ್ಳಿ, ಬರಗೂರು, ಹಾರೋಗೆರೆ ಮುಖಾಂತರ ಆಂಧ್ರಪ್ರದೇಶ ಗಡಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ₹2.50 ಕೋಟಿ, ಪಾವಗಡ ತಾಲೂಕಿನ ವಿರುಪಸಮುದ್ರ ಗ್ರಾಮದಲ್ಲಿ ಆಂಧ್ರಪ್ರದೇಶ ಗಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ₹2.50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.