ವಿವಿಧ ಕಾಮಗಾರಿಗೆ ಸಂಸದ ತುಕಾರಾಂ ಭೂಮಿಪೂಜೆ

| Published : Sep 24 2024, 01:52 AM IST

ಸಾರಾಂಶ

₹೧ ಕೋಟಿ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ೬ ಕೊಠಡಿಗಳು.

ಸಂಡೂರು: ಸಂಸದ ಈ. ತುಕಾರಾಂ ಶನಿವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಪೂಜೆ ಪೂಜೆ ನೆರವೇರಿಸಿದರು ಹಾಗೂ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದರು.₹೬೦ ಲಕ್ಷ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ೪೦ ರಿಂದ ಗಂಗಲಾಪುರದವರೆಗಿನ ರಸ್ತೆ ಅಭಿವೃದ್ಧಿ, ₹೪ ಕೋಟಿ ವೆಚ್ಚದಲ್ಲಿ ತಾಳೂರು ಗ್ರಾಮದಿಂದ ಭುವನಹಳ್ಳಿವರೆಗಿನ ರಸ್ತೆ ಅಭಿವೃದ್ಧಿ, ₹೪೫ ಲಕ್ಷ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಮುಖ್ಯರಸ್ತೆಯಿಂದ ಸರ್ಕಾರಿ ಪ್ರೌಢ ಶಾಲೆಯವರೆಗಿನ ರಸ್ತೆ ಅಭಿವೃದ್ಧಿ, ₹೪೦ ಲಕ್ಷ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ೧೩೧ ರಿಂದ ಲಿಂಗದಹಳ್ಳಿಯವರೆಗಿನ ರಸ್ತೆ ಅಭಿವೃದ್ಧಿ, ₹೪.೫೦ ಕೋಟಿ ವೆಚ್ಚದಲ್ಲಿ ಮಾಳಾಪುರ ಗ್ರಾಮದಿಂದ ಡಿ. ಅಂತಾಪುರದವರೆಗೆ ರಸ್ತೆ ಅಭಿವೃದ್ಧಿ ಹಾಗೂ ಬಸ್ ತಂಗುದಾಣ ಉದ್ಘಾಟನೆ, ₹೪೦ ಲಕ್ಷ ವೆಚ್ಚದಲ್ಲಿ ಯು.ರಾಜಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ೨ ಕೋಟಿ ವೆಚ್ಚದಲ್ಲಿ ತಿಮ್ಮಲಾಪುರ ಗ್ರಾಮದ ಬಳಿಯಲ್ಲಿ ಸೇತುವೆ ನಿರ್ಮಾಣ, ₹೨೫ ಲಕ್ಷ ವೆಚ್ಚದಲ್ಲಿ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ. ₹೭೫ ಲಕ್ಷ ವೆಚ್ಚದಲ್ಲಿ ಎಂ. ಬಸಾಪುರ ಗ್ರಾಮದಿಂದ ತಾಲೂಕಿನ ಗಡಿ ಭಾಗದವರೆಗೆ ರಸ್ತೆ ಅಭಿವೃದ್ಧಿ, ₹೧.೫೦ ಕೋಟಿ ವೆಚ್ಚದಲ್ಲಿ ಕೆರೆರಾಂಪುರ ಗ್ರಾಮದಿಂದ ತಿಮ್ಮಲಾಪುರ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ, ₹೧.೫೦ ಕೋಟಿ ವೆಚ್ಚದಲ್ಲಿ ವಿಠಲಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಿಂದ ಮೆಟ್ರಿಕಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ, ₹೬೦ ಲಕ್ಷ ವೆಚ್ಚದಲ್ಲಿ ವಿಠಲಾಪುರ ಗ್ರಾಮದಲ್ಲಿ ಪ.ಜಾತಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ, ₹೪.೪೩ ಕೋಟಿ ವೆಚ್ಚದಲ್ಲಿ ವಿಠಲಾಪುರ ಗ್ರಾಮದಿಂದ ಡಿ. ಅಂತಾಪುರ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ, ವಿಠಲಾಪುರ ಕ್ರಾಸ್‌ದಿಂದ ತುಮಟಿ ಗ್ರಾಮದವರೆಗಿನ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಹಾಗೂ ₹೫೦ ಲಕ್ಷ ವೆಚ್ಚದಲ್ಲಿ ಬೆಳಗಲ್, ಬನ್ನಿಹಟ್ಟಿ, ರಾಜಾಪುರ, ಮೆಟ್ರಿಕಿ, ಡಿ. ಆಂತಾಪುರ ಗ್ರಾಮ ಪರಿಮಿತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ.

ಉದ್ಘಾಟನೆಗೊಂಡ ಕಾಮಗಾರಿಗಳು:

₹೧ ಕೋಟಿ ವೆಚ್ಚದಲ್ಲಿ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ೬ ಕೊಠಡಿಗಳು ಹಾಗೂ ₹೧೫ ಲಕ್ಷ ವೆಚ್ಚದಲ್ಲಿ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಕಾಮಗಾರಿ, ಗ್ರಾಪಂ ಜನಪ್ರತಿನಿಧಿಗಳು, ಹಲವು ಮುಖಂಡರು ಉಪಸ್ಥಿತರಿದ್ದರು.