ಪೂರ್ಣಗೊಂಡ ಕೆಲ ಕಾಮಗಾರಿಗಳನ್ನು ಉದ್ಘಾಟಿಸಿದರು.

ಸಂಡೂರು: ತಾಲೂಕಿನ ಕಾಳಿಂಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಸದ ಈ. ತುಕಾರಾಂ ಭೂಮಿಪೂಜೆಯನ್ನು ನೆರವೇರಿಸಿದರು. ಪೂರ್ಣಗೊಂಡ ಕೆಲ ಕಾಮಗಾರಿಗಳನ್ನು ಉದ್ಘಾಟಿಸಿದರು.ಕೆಕೆಆರ್‌ಡಿಬಿ ಅನುದಾನ ₹೩೩.೦೫ ಲಕ್ಷ ವೆಚ್ಚದಲ್ಲಿ ಕಾಳಿಂಗೇರಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨ ಶಾಲಾ ಕೊಠಡಿಗಳ ನಿರ್ಮಾಣ, ಸಣ್ಣ ಉಪ್ಪಾರಹಳ್ಳಿ ಗ್ರಾಮದಲ್ಲಿ ₹೧೦ ಲಕ್ಷ ವೆಚ್ಚದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ, ಎಸ್. ಗೊಲ್ಲರಹಟ್ಟಿ ಗ್ರಾಮದಲ್ಲಿ ₹೧೬.೫೩ ಲಕ್ಷ ಕೆಕೆಆರ್‌ಡಿಬಿ ಅನುದಾನದಲ್ಲಿ ಸರ್ಕಾರಿ ಶಾಲೆಯಲ್ಲಿ ಒಂದು ತರಗತಿ ಕೊಠಡಿ ನಿರ್ಮಾಣ, ಸಿ. ಲಕ್ಕಲಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ೩೩.೦೬ ಲಕ್ಷ ವೆಚ್ಚದಲ್ಲಿ ಎರಡು ತರಗತಿ ಕೊಠಡಿಗಳ ನಿರ್ಮಾಣ ಹಾಗೂ ಟಿ.ಎಸ್.ಪಿ ಅನುದಾನ ₹೨೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಅಗ್ರಹಾರ ಗ್ರಾಮದಲ್ಲಿ ₹೧೭ ಲಕ್ಷ ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಂಸದರು ಭೂಮಿಪೂಜೆಯನ್ನು ನೆರವೇರಿಸಿದರು.

ಉದ್ಘಾಟನೆ:

ಕೆಕೆಆರ್‌ಡಿಬಿ ಅನುದಾನ ₹೨೫.೫೩ ಲಕ್ಷ ವೆಚ್ಚದಲ್ಲಿ ಕಾಳಿಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಎರಡು ಶಾಲಾ ಕೊಠಡಿಗಳು, ₹೯೯.೧೮ ಲಕ್ಷ ವೆಚ್ಚದಲ್ಲಿ ಸೋವೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಲಾದ ೬ ಶಾಲಾ ಕೊಠಡಿಗಳನ್ನು ಸಂಸದರು ಉದ್ಘಾಟಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಮುಖಂಡರಾದ ಎನ್.ಎಂ. ವೀರೇಶಯ್ಯ, ಜಯರಾಂ, ಕೆ. ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ಕಾಳಿಂಗೇರಿಯಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಸದ ತುಕಾರಾಂ ಭೂಮಿಪೂಜೆ ನೆರವೇರಿಸಿದರು.